
ನವದೆಹಲಿ: ಕೇಂದ್ರ ಸರ್ಕಾರವು ‘ಮೇರಾ ಬಿಲ್ ಮೇರಾ ಅಧಿಕಾರ್’ (ನನ್ನ ಬಿಲ್ ನನ್ನ ಅಧಿಕಾರ) ಎಂಬ ಹೊಸ ಜಿಎಸ್‌ಟಿ ಇನ್‌ವಾಯ್ಸ್ (ಬಿಲ್) ಪ್ರೋತ್ಸಾಹಕ ಬಹುಮಾನ ಯೋಜನೆಯೊಂದನ್ನು ಪ್ರಕಟಿಸಿದ್ದು, ಇದನ್ನು ಮೊದಲು 6 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಸೆ.1ರಿಂದ ಯೋಜನೆ ಆರಂಭವಾಗಲಿದ್ದು 10 ಸಾವಿರ ರು.ನಿಂದ 1 ಕೋಟಿ ರು.ವರೆಗೂ ಲಕ್ಕಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ.
ಗ್ರಾಹಕರು (Customer) ವಸ್ತುಗಳನ್ನು ಖರೀದಿ ಮಾಡುವಾಗ ಪ್ರತಿ ಬಾರಿ ಬಿಲ್ ಕೇಳುವಂತೆ ಪ್ರೇರೇಪಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದನ್ನು ಅಸ್ಸಾಂ (Assam), ಗುಜರಾತ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ (Union Territory) ಪುದುಚೇರಿ, ದಮನ್ ಮತ್ತು ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಯಲ್ಲಿ ಮೊದಲಿಗೆ ಆರಂಭಿಸಲಾಗುತ್ತಿದೆ ‘ಮೇರಾ ಬಿಲ್ ಮೇರಾ ಅಧಿಕಾರ್’(My bill My rights) ಮೊಬೈಲ್ ಆ್ಯಪ್ ಐಒಎಸ್ ಹಾಗೂ ಆ್ಯಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಲ್ಲಿ (Android Platform) ಲಭ್ಯವಾಗಲಿದೆ.
ಪೆಟ್ರೋಲ್ ತೆರಿಗೆ ಇಳಿಕೆ: ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ ಕೇಂದ್ರದಿಂದ ಶೀಘ್ರ ರಿಲೀಫ್
ಲಕ್ಕಿ ಡ್ರಾಗಾಗಿ (Lucky Draw) ಪರಿಗಣಿಸಬೇಕಾದ ಬಿಲ್ ರಸೀದಿಯ ಕನಿಷ್ಠ ಖರೀದಿ ಮೌಲ್ಯವು 200 ರೂಪಾಯಿ ಆಗಿದೆ. ಒಬ್ಬರು 1 ತಿಂಗಳಲ್ಲಿ ಗರಿಷ್ಠ 25 ಬಿಲ್‌ಗಳನ್ನು ಆ್ಯಪ್‌ನಲ್ಲಿ ಅಪ್‌ಡೇಟ್ ಮಾಡಬಹುದು. ಇದರ ಅಡಿಯಲ್ಲಿ ಮಾಸಿಕ ಮತ್ತು ತ್ರೈಮಾಸಿಕ ಡ್ರಾ ಮಾಡಲಾಗುವುದು ಮತ್ತು ವಿಜೇತರು 10 ಸಾವಿರ ರು.ನಿಂದ 1 ಕೋಟಿ ರು.ವರೆಗೆ ನಗದು ಬಹುಮಾನಕ್ಕೆ ಅರ್ಹರಾಗುತ್ತಾರೆ. ಜಿಎಸ್‌ಟಿಯಲ್ಲಿ (GST) ನೋಂದಾಯಿತವಾದ ಎಲ್ಲ ಪೂರೈಕೆದಾರರ ಬಿಲ್‌ಗಳು ಯೋಜನೆಗೆ ಅರ್ಹವಾಗಿರುತ್ತವೆ. ಜಿಎಸ್‌ಟಿ ನಂಬರ್, ಇನ್‌ವಾಯ್ಸ್ ಸಂಖ್ಯೆ, ಪಾವತಿಸಿದ ಮೊತ್ತ ಮತ್ತು ತೆರಿಗೆ ಮೊತ್ತವನ್ನು ಬಿಲ್‌ಗಳು ಹೊಂದಿರಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ