Controversial Ads ಅತ್ಯಾಚಾರ ಉತ್ತೇಜಿಸುವ ಡಿಯೋಡ್ರೆಂಟ್ ಜಾಹೀರಾತು ಪ್ರಸಾರಕ್ಕೆ ಕೇಂದ್ರ ನಿರ್ಬಂಧ!

By Suvarna NewsFirst Published Jun 4, 2022, 8:59 PM IST
Highlights
  • ಅತ್ಯಾಚಾರ ಹಾಗೂ ಕೀಳುಮಟ್ಟದ ಜಾಹೀರಾತು ವಿರುದ್ಧ ಕ್ರಮ
  • ಡಿಯೋಡ್ರೆಂಟ್, ಬಾಡಿ ಸ್ಪ್ರೇ ಜಾಹೀರಾತು ವಿರುದ್ಧ ಗರಂ
  • ಸ್ತ್ರೀ ದ್ವೇಷ, ಅತ್ಯಾತಾರ ಉತ್ತೇಜಿಸುವ ಜಾಹೀರಾತಿಗೆ ಇಲ್ಲ ಅವಕಾಶ
     

ನವದೆಹಲಿ(ಜೂ.04): ಅತ್ಯಾಚಾರ ಉತ್ತೇಜಿಸುವ, ಸ್ತ್ರೀ ದ್ವೇಷ ಬಿತ್ತುವ ಲೆಯರ್ ಡಿಯೋಡ್ರೆಂಟ್ ಮತ್ತು ಬಾಡಿ ಸ್ಪ್ರೇ ಜಾಹೀರಾತನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ದೆಹಲಿ ಮಹಿಳಾ ಆಯೋಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಕೇಂದ್ರ ಸರ್ಕಾರ ಈಕ್ರಮ ಕೈಗೊಂಡಿದೆ. ಎಲ್ಲಾ ವಾಹಿನಿ, ಯುಟ್ಯೂಬ್, ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ತಾಣಗಳಿಂದ ತಕ್ಷಣವೇ ಜಾಹೀರಾತು ಪ್ರಸಾರ ಮಾಡದಂತೆ ತಡೆ ನೀಡಿದೆ.

ಲೆಯರ್ ಅನ್ನೋ ಪರ್ಫ್ಯೂಮ್ ಬ್ರ್ಯಾಂಡ್ ಇತ್ತೀಚೆಗೆ ಜಾಹೀರಾತೊಂದನ್ನು ಪ್ರಸಾರ ಮಾಡಿದೆ. ಈ ಜಾಹೀರಾತು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಈ ಜಾಹೀರಾತು ಅತ್ಯಾಚಾರ ಬಿಂಬಿಸುವ ಹಾಗೂ ಉತ್ತೇಜಿಸುವ  ರೀತಿಯಲ್ಲಿದೆ. ಇದಕ್ಕೆ ಜನಸಾಮಾನ್ಯರು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ದೆಹಲಿ ಮಹಿಳಾ ಆಯೋಗ, ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವ ಅನುರಾಗ್ ಠಾಕೂರ್‌ಗೆ ಪತ್ರ ಬರೆದಿದ್ದರು.

Latest Videos

ಲೈಂಗಿಕ ಕಿರುಕುಳ ಪ್ರಚೋದನೆ ಆರೋಪ, ಸಿಟ್ರೊಯೆನ್ ಕಾರು ಜಾಹೀರಾತು ಹಿಂಪಡೆದ ಕಂಪನಿ!

ಇದೇ ವೇಳೆ ದೆಹಲಿ ಮಹಿಳಾ ಆಯೋಗ, ದೆಹಲಿ ಪೊಲೀಸರಿಗೂ ದೂರು ನೀಡಿದೆ. ಇತ್ತ ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ. ತಕ್ಷಣವೇ ವರದಿ ನೀಡಲು ಸೂಚಿಸಿದೆ. ಕೇಂದ್ರ ಸರ್ಕಾರ ಎಚ್ಚರಿಕೆ ಬೆನ್ನಲ್ಲೇ ಇದೀಗ ಜಾಹೀರಾತು ಪ್ರಸಾರವನ್ನು ಹಿಂಪಡೆದಿದೆ.ಸಾಮಾಜಿಕ ತಾಣಗಳಿಂದಲೂ ಈ ಜಾಹೀರಾತನ್ನು ತೆಗೆದುಹಾಕಲಾಗಿದೆ.

ಇದೇ ವೇಳೆ ಭಾರತೀಯ ಜಾಹೀರಾತು ಗುಣಮಟ್ಟಪರಿಷತ್ತು (ಎಎಸ್‌ಸಿಐ) ಕೂಡ ‘ಶಾಟ್‌’ ಸುಗಂಧದ್ರವ್ಯ ತಯಾರಿಸುವ ಗುಜರಾತ್‌ನ ಆ್ಯಡ್‌ಜಾವಿಸ್‌ ವೆಂಚರ್‌ ಲಿಮಿಟೆಡ್‌ ಹಾಗೂ ಜಾಹೀರಾತು ತಯಾರಿಸಿದ ‘ಟ್ರೈಟನ್‌ ಕಮ್ಯುನಿಕೇಶನ್ಸ್‌’ ವಿರುದ್ಧ ತನಿಖೆಗೆ ಆದೇಶಿಸಿದೆ ಹಾಗೂ ಕೂಡಲೇ ಜಾಹೀರಾತು ಹಿಂಪಡೆಯುವಂತೆ ತಾಕೀತು ಮಾಡಿದೆ.

ಏನಿದು ಜಾಹೀರಾತು?:
ದೇವೇಂದ್ರ ಪಟೇಲ್‌ ನೇತೃತ್ವದ ಆ್ಯಡ್‌ಜಾವಿಸ್‌ ವೆಂಚರ್‌ ಎಂಬ ಕಂಪನಿ ಸುಗಂಧದ್ರವ್ಯ, ಕ್ರೀಮು, ಸೋಪು, ಶಾಂಪೂದಂಥ ಉತ್ಪನ್ನ ತಯಾರಿಸುತ್ತದೆ. ಇದೇ ಕಂಪನಿ ‘ಲೇಯರ್ಸ್‌ ಶಾಟ್‌’ ಎಂಬ ಪಫä್ರ್ಯಮ್‌ ಬಿಡುಗಡೆ ಮಾಡಿದ್ದು, ಪ್ರಚಾರಕ್ಕಾಗಿ 2 ಜಾಹೀರಾತು ಬಿತ್ತರಿಸಲು ಆರಂಭಿಸಿದೆ.

Whiskey ಪ್ರಚಾರ ಮಾಡಿದ ರೆಜಿನಾ; ಎಣ್ಣೆನೇ ಬೇಕಿತ್ತಾ ನಿಮಗೆ? ಎಂದು ಕಾಲೆಳೆದ ನೆಟ್ಟಿಗರು

ಒಂದು ಜಾಹೀರಾತಿನಲ್ಲಿ, ಯುವಕ-ಯುವತಿ ಇರುವ ಬೆಡ್‌ರೂಮಿಗೆ ನಾಲ್ವರು ನುಗ್ಗುತ್ತಾರೆ. ಆಗ ‘ಒಂದೇ ಇದೆ ಏನು ಮಾಡೋಣ?’ ಎನ್ನುತ್ತಾರೆ. ಆಗ ಯುವತಿ ಬೆದರುತ್ತಾಳೆ. ಆದರೆ ತಕ್ಷಣವೇ ಆಕೆ ಇದ್ದ ಹಾಸಿಗೆಯ ಪಕ್ಕದಲ್ಲಿದ್ದ ‘ಶಾಟ್‌’ ಪಫä್ರ್ಯಮ್‌ ಬಾಟಲ್‌ ಅನ್ನು ನಾಲ್ವರಲ್ಲಿ ಒಬ್ಬ ಯುವಕ ಎತ್ತಿಕೊಂಡು ಸೆಂಟ್‌ ಪ್ರೋಕ್ಷಿಸಿಕೊಳ್ಳುತ್ತಾನೆ. ಆಗ ಯುವತಿ ನಿರಾಳಳಾಗುತ್ತಾಳೆ.

ಇನ್ನೊಂದು ಜಾಹೀರಾತಿನಲ್ಲಿ, ಸೂಪರ್‌ ಮಾರ್ಕೆಟ್‌ನಲ್ಲಿ ಯುವತಿಯೊಬ್ಬಳನ್ನು ನಾಲ್ವರು ಹಿಂಬಾಲಿಸುತ್ತಾರೆ. ‘ನಾವು ನಾಲ್ಕು ಜನ ಇದ್ದೇವೆ. ಯಾರು ಶಾಟ್‌ ಹೊಡೆಯೋದು’ ಎಂದು ಒಬ್ಬ ಹೇಳುತ್ತಾನೆ. ಯುವತಿಗೆ ಶಾಕ್‌ ಆಗುತ್ತದೆ. ಕೂಡಲೇ ನಾಲ್ವರಲ್ಲೊಬ್ಬ ರಾರ‍ಯಕ್‌ನಲ್ಲಿ ಕೊನೆಯದಾಗಿ ಉಳಿದಿದ್ದ ಒಂದೇ ಒಂದು ‘ಶಾಟ್‌’ ಪಫä್ರ್ಯಮ್‌ ತೆಗೆದುಕೊಂಡು ಸೆಂಟ್‌ ಹೊಡೆದುಕೊಳ್ಳುತ್ತಾನೆ. ಆಗ ಯುವತಿ ಕೂಡ ಹಸನ್ಮುಖಿ ಆಗುತ್ತಾಳೆ.

ವ್ಯಾಪಕ ಆಕ್ರೋಶ, ಕ್ರಮ:
ಈ ಜಾಹೀರಾತು ಈಗ ನಡೆಯುತ್ತಿರುವ ಆಸ್ಪ್ರೇಲಿಯಾ-ನ್ಯೂಜಿಲೆಂಡ್‌ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ವೇಳೆ ಸೋನಿ ಲಿವ್‌ನಲ್ಲಿ ಪ್ರಸಾರವಾಗಿದೆ. ಇದು ಅತ್ಯಾಚಾರ ಪ್ರಚೋದಿಸುವಂತಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ಕ್ರಮ ಜರುಗಿಸಿದ್ದು, ‘ಜಾಹೀರಾತು ವಾರ್ತಾ ಪ್ರಸಾರ ನಿಯಮಗಳನ್ನು ಉಲ್ಲಂಘಿಸುತ್ತದೆ. ಕೂಡಲೇ ವಿಡಿಯೋಗಳನ್ನು ಯೂಟ್ಯೂಬ್‌ ಹಾಗೂ ಟ್ವೀಟರ್‌ ತೆಗೆದುಹಾಕಬೇಕು’ ಎಂದು ಆದೇಶಿಸಿದೆ.
 

click me!