Electoral Reforms: ವೋಟರ್‌ ಐಡಿ ಜತೆ ಆಧಾರ್‌ ಜೋಡಣೆ ಕಡ್ಡಾಯವಲ್ಲ!

By Kannadaprabha NewsFirst Published Dec 16, 2021, 4:23 AM IST
Highlights

* ಮಹತ್ವದ ಚುನಾವಣಾ ಸುಧಾರಣೆಗೆ ಕೇಂದ್ರ ಅಸ್ತು

* ವೋಟರ್‌ ಐಡಿ ಜತೆ ಆಧಾರ್‌ ಜೋಡಣೆ

* ಪಾನ್‌-ಆಧಾರ್‌ ಲಿಂಕ್‌ನಂತೆ ಇದು ಕಡ್ಡಾಯವಲ್ಲ

ನವದೆಹಲಿ(ಡಿ.16); ಚುನಾವಣಾ ಗುರುತಿನ ಚೀಟಿಯೊಂದಿಗೆ)Election Voter ID) ಆಧಾರ್‌ ಸಂಖ್ಯೆಯನ್ನು (Aadhaar Number) ಸಂಯೋಜಿಸುವ ಮಹತ್ವದ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ವಿಷಯವೂ ಸೇರಿದಂತೆ ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ಮಹತ್ವದ ಸುಧಾರಣೆ ತರುವ ಕರಡು ಮಸೂದೆಗೆ )Cabinet clears bill on electoral reforms) ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಆಧಾರ್‌ ಲಿಂಕ್‌:

ಮತದಾರರು ಹಲವು ಕ್ಷೇತ್ರದಲ್ಲಿ ತಮ್ಮ ಹೆಸರು ನೋಂದಾಯಿಸುವುದನ್ನು ತಡೆಯಲು, ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು (Voter ID Number) ಆಧಾರ್‌ ಜೊತೆ ಜೋಡಿಸುವ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಇದು ಕಡ್ಡಾಯವಲ್ಲ. ಇದನ್ನು ಮತದಾರರು ಸ್ವಯಂಪ್ರೇರಣೆಯಿಂದ ಮಾತ್ರವೇ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಈ ಹಿಂದೆ ಪಾನ್‌ ಕಾರ್ಡ್‌ಗೆ ಆಧಾರ್‌ ಸಂಯೋಜನೆ ಕಡ್ಡಾಯ ಮಾಡಲಾಗಿತ್ತು. ಆದರೆ ಚುನಾವಣಾ ಗುರುತಿನ ಚೀಟಿಗೆ ಆಧಾರ್‌ ಕಡ್ಡಾಯಕ್ಕೆ ಭಾರೀ ವಿರೋಧವಿರುವ ಹಿನ್ನೆಲೆಯಲ್ಲಿ ಮತ್ತು ಇದು ಖಾಸಗಿತನಕ್ಕೆ (Privacy) ಧಕ್ಕೆ ತರುತ್ತದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇದನ್ನು ಐಚ್ಛಿಕ ಮಾಡಲಾಗಿದೆ.

ಈಗಾಗಲೇ ಚುನಾವಣಾ ಆಯೋಗವು ಮತದಾರರ ಗುರುಚಿನ ಚೀಟಿಗೆ ಆಧಾರ್‌ ಸಂಯೋಜನೆಯನ್ನು ಪ್ರಾಯೋಗಿಕವಾಗಿ ಕೆಲವು ಕಡೆ ಜಾರಿ ಮಾಡಿತ್ತು. ಅದರಲ್ಲಿ ಧನಾತ್ಮಕ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಅದನ್ನು ದೇಶವ್ಯಾಪಿ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ )Parliament Winter Session) ಮಂಡಿಸುವ ಸಾಧ್ಯತೆ ಇದೆ.

ನೋಂದಣಿಗೆ 4 ಅವಕಾಶ:

ಈವರೆಗೆ 18 ವರ್ಷ ತುಂಬಿದ ಹೊಸ ಮತದಾರರಿಗೆ ಹೆಸರು ನೋಂದಾಯಿಸಲು ವರ್ಷಕ್ಕೆ 1 ಬಾರಿ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಇನ್ನು ಮುಂದೆ ವರ್ಷಕ್ಕೆ 4 ಬಾರಿ ನೀಡುವ ಪ್ರಸ್ತಾಪವಿದೆ.

ಲಿಂಗ ಸಮಾನತೆ:

ಇದುವರೆಗೆ ಯೋಧರೊಬ್ಬರ ಪತ್ನಿಗೆ ಸವೀರ್‍ಸ್‌ ವೋಟರ್‌ ಹೆಸರಲ್ಲಿ ನೋಂದಣಿಗೆ ಅವಕಾಶವಿತ್ತು. ಆದರೆ ಸೇನೆಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದರೆ ಆಕೆಯ ಪತಿಗೆ ಇದೇ ಅವಕಾಶ ಇರುತ್ತಿರಲಿಲ್ಲ. ಹೀಗಾಗಿ ಈ ನಿಯಮಕ್ಕೂ ಬದಲಾವಣೆ ತರಲು ಸಂಪುಟ ಅನುಮೋದನೆ ನೀಡಿದೆ.

ಹೆಚ್ಚಿನ ಅಧಿಕಾರ:

ಯಾವುದೇ ಕಟ್ಟಡಗಳನ್ನು ಚುನಾವಣಾ ಕೆಲಸಗಳಿಗೆ ಬಳಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡುವ ತಿದ್ದುಪಡಿ ಕೂಡ ಪ್ರಸ್ತಾವದಲ್ಲಿದೆ. ಈವರೆಗೆ ಶಾಲೆ ಹಾಗೂ ಕೆಲವು ಕಟ್ಟಡಗಳನ್ನು ಚುನಾವಣಾ ಪ್ರಕ್ರಿಯೆಗೆ ಬಳಸಿಕೊಳ್ಳಲು ಆಕ್ಷೇಪಗಳು ಕೇಳಿಬರುತ್ತಿದ್ದವು.

ಪಾನ್ ಕಾರ್ಡ್ ಅನ್ನು ಆಧಾರ್ ಜತೆ ಲಿಂಕ್ ಮಾಡಲು ಹಂತಗಳನ್ನು ಬಳಸಿಕೊಳ್ಳಿ:

* ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಪ್ರವೇಶ ಪಡೆದುಕೊಳ್ಳಿ

* ಆದಾಯ ತೆರಿಗೆ ಇಲಾಖೆಯ ಅಧಿಕೃತ ಜಾಲತಾಣ https://www.incometaxindiaefiling.gov.in/home ದಲ್ಲಿ ನೀವು ಲಾಗಿನ್ ಆಗಬೇಕು.

* ಆ ನಂತರ ವೆಬ್‌ಸೈಟ್‌ನಲ್ಲಿರುವ ಹೋಮ್‌ಪೇಜ್‌ನ ಎಡಭಾಗದ ಕ್ವಿಕ್ ಲಿಂಕ್ ವಿಭಾಗದಲ್ಲಿರುವ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಿ.

* ಬಳಿಕ ನಿಮ್ಮ ಪಾನ್ ನಂಬರ್, ಆಧಾರ್ ನಂಬರ್ ಮತ್ತು ಆಧಾರ್ ದಾಖಲಾತಿಯಲ್ಲಿರುವ ಹಾಗೆ ನಿಮ್ಮ ಹೆಸರನ್ನು ದಾಖಲಿಸಿ.

* ಒಂದೊಮ್ಮೆ ನೀವು ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ವರ್ಷವನ್ನು ಮಾತ್ರ ಹೊಂದಿದ್ದರೆ ಚೆಕ್ ಬಾಕ್ಸ್ ಕ್ಲಿಕ್ ಮಾಡಿ ಮತ್ತು ನಂತರ ನಿಮ್ಮ ಆಧಾರ್ ವಿವರಗಳನ್ನು ಯುಐಡಿಎಐನೊಂದಿಗೆ ಮೌಲ್ಯೀಕರಿಸಲು ಒಪ್ಪಿದ್ದಕ್ಕಾಗಿ ಚೆಕ್ ಬಾಕ್ಸ್ ಕ್ಲಿಕ್ ಮಾಡಿ.

* ಇಷ್ಟಾದ ಮೇಲೆ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುವ ಕ್ಯಾಪ್ಚಾ ಕೋಡ್ ಎಂಟರ್ ಮಾಡಿ. ಆಗ ನಿಮಗೆ, ನಿಮ್ಮ ನೋಂದಾಯಿತ ಫೋನ್‌ ನಂಬರ್‌ಗೆ ಓಟಿಪಿ ಬರುತ್ತದೆ. ಆ ಸಂಖೆಯನ್ನು ನಮೂದಿಸಿ.

* ಕೊನೆಗೆ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಿ ರಿಕ್ವೆಸ್ಟ್ ಸಬ್ಮಿಟ್ ಮಾಡಿ.

ಆದಾಯ ತೆರಿಗೆ ರಿಟರ್ನ್ಸ್(ಐಟಿಆರ್) ಸಲ್ಲಿಸಲು ಆಧಾರ್-ಪಾನ್ ಕಾರ್ಡ್ ಲಿಂಕ್ ಅನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಒಂದು ವೇಳೆ ಪಾನ್ ಕಾರ್ಡ್ ನಂಬರ್ ಆಧಾರ್ ಜತೆ ಲಿಂಕ್ ಆಗದಿದ್ದರೆ, ಬ್ಯಾಂಕ್ ತರೆದುವುದು, ಪೆನ್ಶಿನ್, ವಿದ್ಯಾರ್ಥಿ ವೇತನ, ಎಲ್‌ಪಿಜಿ ಸಬ್ಸಿಡಿ ಸೇರಿದಂತೆ ಸರ್ಕಾರದ ಹಣಕಾಸು ನೆರವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಎಸ್‌ಎಂಸ್‌ ಮೂಲಕ ಆಧಾರ್‌ ಹಾಗೂ ಪ್ಯಾನ್ ಕಾರ್ಡ್‌ ಲಿಂಕ್ ಹೇಗೆ?

* ನಿಮ್ಮ ಫೋನ್‌ನಲ್ಲಿ ನಿಮ್ಮ ಯುಐಡಿಪಿಎನ್ (ಸ್ಪೇಸ್) ಮತ್ತು ನಂತರ ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆ (ಸ್ಪೇಸ್) ನಿಮ್ಮ 10-ಅಂಕಿಯ ಪ್ಯಾನ್ ಸಂಖ್ಯೆಯೊಂದಿಗೆ ಎಸ್‌ಎಂಎಸ್ ರಚಿಸಿ
* ಅದರ ನಂತರ, ಆ ಸಂದೇಶವನ್ನು ಎರಡಕ್ಕೂ ಕಳುಹಿಸಿ56161 ಅಥವಾ567678
* SMS ಮೂಲಕ ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡುವ ಪ್ರಕ್ರಿಯೆಯು ಯಶಸ್ವಿಯಾಗಿದೆ ಎಂಬ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ.

click me!