ಇಟ್ಟಿಗೆ ಗೂಡು ನಿರ್ವಾಹಕನಿಗೆ ಖುಲಾಯಿಸಿದ ಅದೃಷ್ಟ... ಸಿಕ್ತು ಒಂದು ಕೋಟಿಗೂ ಅಧಿಕ ಮೌಲ್ಯದ ವಜ್ರ

Suvarna News   | Asianet News
Published : Feb 23, 2022, 03:07 PM IST
ಇಟ್ಟಿಗೆ ಗೂಡು ನಿರ್ವಾಹಕನಿಗೆ ಖುಲಾಯಿಸಿದ ಅದೃಷ್ಟ... ಸಿಕ್ತು ಒಂದು ಕೋಟಿಗೂ ಅಧಿಕ ಮೌಲ್ಯದ ವಜ್ರ

ಸಾರಾಂಶ

ಇಟ್ಟಿಗೆ ಗೂಡು ಉದ್ಯಮಿ ಸುಶೀಲ್ ಶುಕ್ಲಾಗೆ ಸಿಕ್ಕಿತ್ತು 26.11 ಕ್ಯಾರೆಟ್ ವಜ್ರ ಎರಡು ದಶಕಗಳಿಂದ ವಜ್ರ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಶುಕ್ಲಾ ಹರಾಜಿನಲ್ಲಿ ಈ ವಜ್ರಕ್ಕೆ  1.20 ಕೋಟಿ ರೂ. ಮೌಲ್ಯ ಕುದುರಲಿದೆ.

ಭೋಪಾಲ್‌(ಫೆ.23): ರಾತ್ರೋರಾತ್ರಿ ಒಬ್ಬರ ಜೀವನ ಹೇಗೆ ಬದಲಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಇದಕ್ಕೆ ಕಾರಣವಾಗಿರುವುದು ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆ. ಇಟ್ಟಿಗೆ ಗೂಡು ನಿರ್ವಾಹಕನಾಗಿ ಕೆಲಸ ಮಾಡುವ ಪನ್ನಾದ ಕಿಶೋರ್‌ಗಂಜ್(Kishoreganj) ನಿವಾಸಿ ಸುಶೀಲ್ ಶುಕ್ಲಾ(Sushil Shukla) ಮತ್ತು ಅವರ ಪಾಲುದಾರರ ಮುಂದೆ ಸೋಮವಾರ ಅದೃಷ್ಟಲಕ್ಷ್ಮಿ ಅಡ್ಡನೇ ಮಲಗಿದ್ದಳು. ಹೌದು ಕೃಷ್ಣ ಕಲ್ಯಾಣಪುರ (Krishna Kalyanpur) ಪ್ರದೇಶದ ಬಳಿ ಇವರು ನಿರ್ವಹಿಸುವ ಇಟ್ಟಿಗೆ ಗಣಿಯಲ್ಲಿ ಅಂದು ಇವರಿಗೆ ವಜ್ರದ ರೂಪದಲ್ಲಿ ಲಕ್ಷ್ಮಿಯೇ ಅವತರಿಸಿದ ಅನುಭವವಾಗಿತ್ತು.

ಒಂದು ದಶಕದಿಂದ ಆಳವಿಲ್ಲದ ಗಣಿಗಳಲ್ಲಿ ವಜ್ರಕ್ಕಾಗಿ ತನ್ನ ಅದೃಷ್ಟವನ್ನು ಪರೀಕ್ಷಿಸುತ್ತಿದ್ದ ಇಟ್ಟಿಗೆ ಗೂಡು ನಿರ್ವಾಹಕ ಸುಶೀಲ್ ಶುಕ್ಲಾಗೆ ಸೋಮವಾರ ಕೊನೆಗೂ ವಜ್ರವೊಂದು ಸಿಕ್ಕಿದ್ದು ಅದು 1 ಕೋಟಿ ರೂಗೂ ಅಧಿಕ ಬೆಲೆ ಬಾಳುತ್ತಿದೆ. ಮಧ್ಯಪ್ರದೇಶದ (Madhya Pradesh) ಪನ್ನಾ (Panna) ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ, ಇಟ್ಟಿಗೆ ಗೂಡು ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಶುಕ್ಲಾಗೆ ಆಳವಿಲ್ಲದ ಗಣಿಯಲ್ಲಿ 26.11 ಕ್ಯಾರೆಟ್ ವಜ್ರ ಸಿಕ್ಕಿದೆ. ಪಿಟಿಐ ವರದಿಯ ಪ್ರಕಾರ, ಪನ್ನಾ ನಗರದ ಕಿಶೋರ್ ಗಂಜ್ ನಿವಾಸಿ ಸುಶೀಲ್ ಶುಕ್ಲಾ ಅವರು ಕೃಷ್ಣ ಕಲ್ಯಾಣಪುರ ಪ್ರದೇಶದ ಬಳಿ ಇರುವ ಗಣಿಯಲ್ಲಿ 26.11 ಕ್ಯಾರೆಟ್ ವಜ್ರವನ್ನು ಪತ್ತೆ ಮಾಡಿದ್ದಾರೆ. ಈ ಬೆಲೆಬಾಳುವ ವಜ್ರಕ್ಕೆ ಹರಾಜಿನಲ್ಲಿ 1.20 ಕೋಟಿ ರೂ. ಮೌಲ್ಯ ಕುದುರಬಹುದು ಎಂದು ಪನ್ನಾ ಜಿಲ್ಲೆಯ ವಜ್ರದ ಅಧಿಕಾರಿ ರವಿ ಪಟೇಲ್ (Ravi Patel) ಹೇಳಿದ್ದಾರೆ. 

Miss Universe 2021: ಹರ್ನಾಝ್ ಮುಡಿಗೇರಿದ ಕಿರೀಟದ ಬೆಲೆ ಒಂದೆರಡು ಕೋಟಿಯಲ್ಲ

ಬಾಡಿಗೆ ಜಮೀನಿನಲ್ಲಿ ಸಣ್ಣ ಪ್ರಮಾಣದ ಇಟ್ಟಿಗೆ ಗೂಡು ವ್ಯಾಪಾರ ನಡೆಸುತ್ತಿರುವ ಶುಕ್ಲಾ ಹಾಗೂ ಅವರ ಕುಟುಂಬ ಕಳೆದ 20 ವರ್ಷಗಳಿಂದ ವಜ್ರದ ಗಣಿಗಾರಿಕೆಯಲ್ಲೂ  ತೊಡಗಿಸಿಕೊಂಡಿದೆ. ಆದರೆ ಅವರು ಇಷ್ಟು ದೊಡ್ಡ ವಜ್ರವನ್ನು ಹೊರ ತೆಗೆದಿದ್ದು ಇದೇ ಮೊದಲು ಎಂದು ಸುದ್ದಿಗಾರರಿಗೆ ತಿಳಿಸಿದರು. ವಜ್ರ ಪತ್ತೆಯಾದ ಆಳವಿಲ್ಲದ ಗಣಿಯನ್ನು ತಮ್ಮ ಐದು ಪಾಲುದಾರರೊಂದಿಗೆ ಗುತ್ತಿಗೆಗೆ ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದರು.ಈಗ ಸಿಕ್ಕಿದ ರತ್ನವು 1.2 ಕೋಟಿ ರೂ.ಗಿಂತ ಹೆಚ್ಚು ಆದಾಯವನ್ನು ಗಳಿಸುವ ಭರವಸೆಯನ್ನು ವ್ಯಕ್ತಪಡಿಸಿದ ಶುಕ್ಲಾ, ಈ ವಜ್ರದ ಹರಾಜಿನ ನಂತರ ನಾನು ಪಡೆಯುವ ಹಣವನ್ನು ವ್ಯಾಪಾರವನ್ನು ಸ್ಥಾಪಿಸಲು ಬಳಸುತ್ತೇನೆ ಎಂದು ಹೇಳಿದರು.

Diamond Astrology: ಕೊಳ್ಳುವ ಮೊದಲು ನಿಮಗೆ ವಜ್ರ ಆಗಿ ಬರುತ್ತದೆಯೇ ಇಲ್ಲವೇ ತಿಳಿಯಿರಿ..

ರಾಜ್ಯದ ರಾಜಧಾನಿ ಭೋಪಾಲ್‌ನಿಂದ (Bhopal) 380 ಕಿಮೀ ದೂರದಲ್ಲಿರುವ ಪನ್ನಾ ಜಿಲ್ಲೆಯಲ್ಲಿ 12 ಲಕ್ಷ ಕ್ಯಾರೆಟ್ ಮೌಲ್ಯದ ವಜ್ರಗಳಿವೆ ಎಂದು ಅಂದಾಜಿಸಲಾಗಿದೆ. 
ನಿಯಮಗಳ ಪ್ರಕಾರ, ಶುಕ್ಲಾ ವಜ್ರವನ್ನು ಜಿಲ್ಲಾ ಗಣಿಗಾರಿಕೆ ಕಚೇರಿಗೆ ನೀಡಿದ್ದಾರೆ ಎಂದು ವಜ್ರ ಇನ್ಸ್ ಪೆಕ್ಟರ್ ಅನುಪಮ್ ಸಿಂಗ್ ತಿಳಿಸಿದ್ದಾರೆ. ಇದೇ ವೇಳೆ ಅವರು ಮಾತನಾಡುತ್ತ, ಇದನ್ನು ಒಂದೆರಡು ದಿನಗಳಲ್ಲಿ ಹರಾಜಿಗೆ ಇಡಲಾಗುವುದು ಮತ್ತು ಸರ್ಕಾರದ ರಾಯಲ್ಟಿ ಮತ್ತು ತೆರಿಗೆಗಳನ್ನು ಕಡಿತಗೊಳಿಸಿದ ನಂತರ ಬರುವ ಆದಾಯವನ್ನು ಶುಕ್ಲಾ ಅವರಿಗೆ ನೀಡಲಾಗುತ್ತದೆ ಅವರು ಹೇಳಿದರು. ಶುಕ್ಲಾ ಮತ್ತು ಅವರ ಐದು ಪಾಲುದಾರರು ಈ ವರ್ಷದ ಜನವರಿ 1 ರಂದು 6mx7m ಆಳವಿಲ್ಲದ ಗಣಿಯ ಒಂದು ವರ್ಷದ ಗುತ್ತಿಗೆಗಾಗಿ 200ರೂ.ಗಳನ್ನು ಠೇವಣಿ ಮಾಡಿದ್ದರು.

ಯಾವ ರಾಶಿಯ ಜನರು ವಜ್ರ ಧರಿಸಿದರೆ ಅಶುಭ?
ವಜ್ರದ ಉಂಗುರಗಳು, ಹಾರಗಳು, ಕಡಗಗಳು, ಕಿವಿ ಓಲೆಗಳನ್ನು (earing) ಧರಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಪ್ರತಿಯೊಬ್ಬರೂ ಫ್ಯಾಷನ್ ಮತ್ತು ಸ್ಟೇಟಸ್ ಸಿಂಬಲ್‌ಗಾಗಿ (Status Symbol) ವಜ್ರಗಳನ್ನು ಧರಿಸಿದ್ದರೆ, ಜ್ಯೋತಿಷ್ಯ ಮತ್ತು ರತ್ನ ಶಾಸ್ತ್ರದ ಪ್ರಕಾರ, ವಜ್ರವು ಎಲ್ಲರಿಗೂ ಸರಿ ಹೊಂದುವುದಿಲ್ಲ. ಕೆಲವೊಂದು ರಾಶಿಯ ಜನರಿಗೆ ವಜ್ರ ಶುಭವಲ್ಲ. ವಜ್ರವನ್ನು ಪ್ರಮುಖ ರತ್ನವೆಂದು ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ ಮತ್ತು ವಜ್ರಗಳನ್ನು ಜಾತಕ ಗ್ರಹಗಳು ಸೂಕ್ತವಾಗಿರುವವರು, ತಜ್ಞರ ಸಲಹೆ ಮೇರೆಗೆ ಮಾತ್ರ ಧರಿಸಬೇಕು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು