
ನವದೆಹಲಿ(ಜೂ. 03) ನಾಯಕತ್ವ ಬದಲಾವಣೆ ಕೂಗು ಕರ್ನಾಟಕಕ್ಕೆ ಮಾತ್ರ ಸೀಮಿತ ಅಲ್ಲ. ಉತ್ತರ ಪ್ರದೇಶಕ್ಕೂ ಸಂಬಂಧಿಸಿ ಎದ್ದಿತ್ತು. ಆದರೆ ಬಿಜೆಪಿ ಹೈಕಮಾಂಡ್ ಯೋಗಿ ಆದಿತ್ಯನಾಥ್ ಬೆಂಬಲಕ್ಕೆ ನಿಂತಿದ್ದು ಇದೆಲ್ಲ ವದಂತಿಗೆ ಕಿವಿಕೊಡಬೇಡಿ ಎಂದು ಸ್ಪಷ್ಟವಾಗಿ ತಿಳಿಸಿದೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಾಗುತ್ತಿದ್ದು ನಾಯಕತ್ವ ಬದಲಾವಣೆ ಮಾಡಲಾಗುತ್ತದೆ ಎಂಬ ಮಾತುಗಳು ಹೊರಟಿದ್ದವು.. ಕೋವಿಡ್ ನಿರ್ವಹಣೆ ವಿಷಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ವಿಫಲಗೊಂಡಿದೆ ಎನ್ನುವ ಕೂಗು ಎದ್ದಿತ್ತು. ಗಂಗಾ ನದಿಯಲ್ಲಿ ಶವಗಳ ರಾಶಿ ಕಾಣಿಸಿಕೊಂಡ ಬಳಿಕ ಟೀಕೆಗಳು ಹೆಚ್ಚಾಗಿದ್ದವು. ಆದರೆ ಇದೆಲ್ಲವನ್ನು ಬದಿಗಿಟ್ಟು ದೆಹಲಿ ನಾಯಕರು ಸಂದೇಶ ಕಳಿಸಿದ್ದಾರೆ.
ಬಿಜೆಪಿ ಮೇಜರ್ ಸರ್ಜರಿಗೆ ಮುಂದಾಗಿದೆ ಎನ್ನುವುದು ದೊಡ್ಡ ಚರ್ಚೆಯ ಹಂತಕ್ಕೆ ತಲುಪಿತ್ತು. ಹಾಗಾಗಿ ಎಲ್ಲ ಗೊಂದಲಗಳಿಗೆ ದೆಹಲಿ ನಾಯಕರೇ ತೆರೆ ಎಳೆದಿದ್ದಾರೆ.ಪರಿಸ್ಥಿತಿ ಅವಲೋಕನಕ್ಕಾಗಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ನಾಯಕ ರಾಧಾ ಮೋಹನ್ ಸಿಂಗ್ ಲಕ್ನೋಗೆ ದೌಡಾಯಿಸಿದ್ದರು. ಎರಡು ದಿನಗಳಿಂದ ಸರಣಿ ಸಭೆ ಹಾಗೂ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದ್ದರು.
ಕೇಂದ್ರದ ನಾಯಕರು ರಾಜ್ಯದ ವಾಸ್ತವ ಅಧ್ಯಯನ ಮಾಡಿದ್ದಾರೆ. ಇನ್ನೊಂದು ಕಡೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರನ್ನು ಬದಲಿಸಲು ಚಿಂತನೆ ಮಾಡಲಾಗಿದೆ ಎಂಬ ಮಾತುಗಳು ಬಂದಿದ್ದವು.
ಕೇಂದ್ರ ಸಂಪುಟವೂ ಪುನಾರಚನೆ ಸಾಧ್ಯತೆಗಳು ಕಾಣಿಸಿಕೊಂಡಿದ್ದು ಪ್ರಧಾನ ಮಂತ್ರಿ ಕಚೇರಿಯ (ಪಿಎಂಒ) ಮಾಜಿ ಹಿರಿಯ ಅಧಿಕಾರಿ ಎ.ಕೆ.ಶರ್ಮಾ ಅವರಿಗೆ ರಾಜ್ಯ ಖಾತೆ ಸಚಿವ ಸ್ಥಾನದ ಜವಾಬ್ದಾರಿ ನೀಡಲಾಗುತ್ತದೆ ಎಂಬ ಮಾತುಗಳು ಇವೆ. ಒಟ್ಟಿನಲ್ಲಿ ಬಿಜೆಪಿ ಪಾಳಯದಲ್ಲಿ ಬಿರುಸಿನ ರಾಜಕಾರಣದ ಚಟುವಟಿಕೆ ನಡೆಯುತ್ತಿರುವುದು ಸುಳ್ಳಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ