
ಪಾಡ್ನಾ[ಜ.12]: ಗಂಡನೊಂದಿಗೆ ಜಗಳ, ಮನಸ್ಥಾಪ ಹೀಗೆ ನಾನಾ ಕಾರಣಕ್ಕೆ ವಿಚ್ಛೇದನ ನೀಡಿದ ಘಟನೆಗಳನ್ನು ಕೇಳಿದ್ದೇವೆ. ಆದರೆ, ಬಿಹಾರದಲ್ಲಿ ತೀರಾ ವಿಚಿತ್ರ ಕಾರಣಕ್ಕೆ 20 ವರ್ಷದ ಯುವತಿಯೊಬ್ಬಳು ಪತಿಗೆ ವಿಚ್ಛೇದನ ನೀಡಲು ಹೊರಟಿದ್ದಾಳೆ.
ಮದುವೆಯಾಗಿ 3 ನಿಮಿಷಕ್ಕೆ ಡಿವೋರ್ಸ್ ಕೇಳಿದ ಪತ್ನಿ, ಕಾರಣ ನೀವೇ ಓದಿ
ಅಂಥದ್ದೇನಪ್ಪಾ ಕಾರಣ ಅಂತೀರಾ? ಆಕೆಯ ಪತಿ ಪ್ರತಿ ದಿನ ಸ್ನಾನ ಮಾಡಲ್ಲ, ಹಲ್ಲು ತಿಕ್ಕಲ್ಲ. ಹತ್ತಿರ ಹೋದರೆ ಗಬ್ಬು ವಾಸನೆ ಬರುತ್ತದೆ. ಅಲ್ಲದೇ ಆತನಿಗೆ ಶಿಷ್ಟಾಚಾರ ಮತ್ತು ನಡುವಳಿಕೆಯನ್ನು ಪಾಲಿಸಿಯೇ ಗೊತ್ತಿಲ್ಲ. ಇಂಥವನ ಜೊತೆ ಸಂಸಾರ ಮಾಡುವುದಾದರೂ ಹೇಗೆ? ತನಗೆ ವಿಚ್ಛೇದನ ಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ.
ಹೀಗಾಗಿ ರಾಜ್ಯ ಮಹಿಳಾ ಆಯೋಗ ಸೋನಿ ದೇವಿಯ ದೂರನ್ನು ದಾಖಲಿಸಿಕೊಂಡಿದ್ದು, ಪತಿ ಮನೀಶ್ ರಾಮ್‌ಗೆ ತನ್ನನ್ನು ಸರಿಪಡಿಸಿಕೊಳ್ಳಲು 2 ತಿಂಗಳ ಕಾಲಾವಕಾಶ ನೀಡಿದೆ.
ಪತ್ನಿ ತವರಲ್ಲೇ ನೆಲೆಸಿದ್ದರೆ ವಿಚ್ಛೇದನಕ್ಕೆ ಅವಕಾಶ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ