
ಪಾಟ್ನಾ(ಜೂ.26): ಬಿಹಾರದ ಮುಂಗೇರ್ ನಲ್ಲಿ ವಿಚಿತ್ರ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಇಲ್ಲಿ, ಮದುವೆಯಾದ ಕೇವಲ ಏಳು ದಿನಗಳ ನಂತರ, ನವವಿವಾಹಿತ ಮಹಿಳೆ ತನ್ನ ಪ್ರೇಮಿಯ ಕೈಯನ್ನು ಹಿಡಿದು ಪರಾರಿಯಾಗಿದ್ದಾಳೆ. ಆಶ್ಚರ್ಯವೆಂದರೆ ಈ ಇಡೀ ಘಟನೆ ನಡೆದಿರುವುದು ಗಂಡನ ಸಮ್ಮುಖದಲ್ಲಿ. ಅಸಹಾಯಕ ಪತಿ ಕೂಡ ಅವರನ್ನು ಹಿಂಬಾಲಿಸಲು ಪ್ರಯತ್ನಿಸಿದ್ದಾನೆ, ಆದರೆ ಅಷ್ಟರಲ್ಲಿ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಪ್ರಕರಣದ ತನಿಖೆಯಲ್ಲಿ ತೊಡಗಿದ್ದ ಪೊಲೀಸರು ನವ ವಧು ಮತ್ತು ಆಕೆಯ ಪ್ರಿಯಕರನನ್ನು ಹಿಡಿದಿದ್ದಾರೆ.
ಈ ಸಂಪೂರ್ಣ ವಿಷಯ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಇಲ್ಲಿನ ಪೊದ್ದಾರ್ ಕಾಲೋನಿ ನಿವಾಸಿ ನರೇಂದ್ರ ಕುಮಾರ್ ಜೂನ್ 14 ರಂದು ನಯಾ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯ ನೌವಾಗರ್ಹಿಯ ರಾಣಿ ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ನವದಂಪತಿ ನಾಲ್ಕು ದಿನಗಳ ಕಾಲ ಅತ್ತೆಯ ಮನೆಯಲ್ಲಿಯೇ ಇದ್ದರು. ಇದಾದ ನಂತರ ಆಕೆ ಜೂನ್ 18 ರಂದು ತನ್ನ ತಾಯಿಯ ಮನೆಗೆ ಹೋಗಿದ್ದಳು. ಜೂನ್ 21 ರಂದು ಮತ್ತೆ ಅತ್ತೆಯ ಮನೆಗೆ ಬಂದ ಆಕೆ ಎರಡನೇ ದಿನ ಅಂದರೆ 22 ರಂದು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.
ಮಾರುಕಟ್ಟೆಗೆ ಹೋಗುವ ನೆಪ
ವಧು ಗಂಡನಿಗೆ 'ಮಾರುಕಟ್ಟೆಗೆ ಬಾ, ನಾನು ಬಳೆ ಮತ್ತು ಕೆಲವು ಪರಿಕರಗಳನ್ನು ಖರೀದಿಸಬೇಕು ಎಂದಿದ್ದಾಳೆ. ಗಂಡ ಅವಳನ್ನು ಮಾರುಕಟ್ಟೆಗೆ ಕರೆದೊಯ್ದ. ಅಲ್ಲಿ ವಧು ತನ್ನ ಪತಿ ಬಳಿ, 'ನೀವೇ ನನಗೆ ಬಳೆಗಳನ್ನು ಆರಿಸಿ' ಎಂದು ಹೇಳಿದ್ದಾಳೆ. ಪತಿ ಬಳೆಯನ್ನು ಸೆಲೆಕ್ಟ್ ಮಾಡುತ್ತಿದ್ದಂತೆಯೇ ಅತ್ತ ತನಗಾಗಿ ಕಾಯುತ್ತಿದ್ದ ಪ್ರಿಯಕರನ ಕೈ ಹಿಡಿದು ವಧು ಓಡಿ ಹೋಗಿದ್ದಾಳೆ. ಪತಿಯೂ ಹಿಂಬಾಲಿಸಿದರಾದರೂ ಅಷ್ಟೊತ್ತಿಗಾಗಲೇ ಇಬ್ಬರೂ ಕಾರಿನಲ್ಲಿ ಕುಳಿತು ಪರಾರಿಯಾಗಿದ್ದಾರೆ.
ಸಂತ್ರಸ್ತ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಈ ವಿಷಯದ ಬಗ್ಗೆ ದೂರು ನೀಡಲು ಕೊತ್ವಾಲಿಗೆ ಬಂದಿದ್ದಾರೆ. ನಾವು ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ದೀನದಯಾಳ್ ಚೌಕ್‌ನಲ್ಲಿರುವ ಅಂಜಲಿ ಹೆಸರಿನ ಶಾಪ್‌ಗೆ ಬಳೆ ಖರೀದಿಸಲು ಬಂದಿದ್ದೆವು, ಆಗ ನನ್ನ ಹೆಂಡತಿ ಮತ್ತೊಬ್ಬ ಯುವಕನ ಕೈ ಹಿಡಿದು ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕಾರ್ಪಿಯೋ ಕಾರಿನಲ್ಲಿ ಹೊರಟು ಹೋಗಿದ್ದಾಳೆ. ಅವಳು ಮದುವೆ ದಿನದ ಆಭರಣಗಳನ್ನು ಧರಿಸಿದ್ದಳು ಮತ್ತು ಕೆಲವು ದಾಖಲೆಗಳನ್ನು ಸಹ ತಂದಿದ್ದಳು, ಅದೆಲ್ಲವನ್ನೂ ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.
ಈ ಬಗ್ಗೆ ವಧುವಿನ ಅತ್ತೆ ಮಾತನಾಡಿ, ನಮಗೆ ಒಬ್ಬನೇ ಗಂಡು ಮಗ. ಬಹಳ ಸಡಗರದಿಂದ ಮದುವೆಯಾ ಮಾಡಿದೆವು. ಆದರೆ ಸೊಸೆಯೇ ತಪ್ಪು ಮಾಡಿದ್ದಾಳೆ. ಅವಳು ತನ್ನ ಪ್ರೇಮಿಯೊಂದಿಗೆ ಹೋಗಬೇಕಿತ್ತಾದರೆ, ಮದುವೆಯಾಗುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಆಕೆ ಕುಟುಂಬ ನಮ್ಮ ಕುಟುಂಬಕ್ಕೆ ಮೋಸ ಮಾಡಿದೆ. ಈಗ ನಮ್ಮ ಕುಟುಂಬಕ್ಕೆ ಅವಮಾನ ಮಾಡಲಾಗುತ್ತಿದೆ ಎಂದಿದ್ದಾರೆ.
ವಧುವಿನ ಪ್ರಿಯಕರ ಮುನೇಶ್ವರ್ ಕುಮಾರ್ (ಹೆಸರು ಬದಲಿಸಲಾಗಿದೆ) ಮಾತನಾಡಿ, ‘ನಾನು ವೃತ್ತಿಯಲ್ಲಿ ಚಾಲಕನಾಗಿದ್ದು, ಮತ್ತೊಬ್ಬರ ಕಾರು ಓಡಿಸುತ್ತೇನೆ. ಕಳೆದ 6 ವರ್ಷಗಳಿಂದ ನಮ್ಮಿಬ್ಬರ ನಡುವೆ ಪ್ರೇಮ ಸಂಬಂಧವಿತ್ತು, ಆದರೆ ಹುಡುಗಿಯ ಮನೆಯವರು ನನ್ನನ್ನು ಮದುವೆಯಾಗಲು ಸಿದ್ಧರಿರಲಿಲ್ಲ. ಬಲವಂತವಾಗಿ ಬೇರೊಬ್ಬ ಹುಡುಗನಿಗೆ ಅಂದರೆ ನರೇಂದ್ರ ಕುಮಾರ್ ಗೆ ಮದುವೆ ಮಾಡಿಕೊಟ್ಟರು. ಇದಾದ ನಂತರ ಪದೇ ಪದೇ ಅತ್ತಿಗೆಯನ್ನು ಕರೆದು ತಾನು ಸಾಯುತ್ತೇನೆ ಎಂದು ಅಳುತ್ತಿದ್ದಳು, ನಂತರ ನಾವು ಬೇಗುಸರೈಗೆ ಓಡಿಹೋಗಿ ಇಂದು ನೌವಾಗರ್ಹಿಗೆ ಬಂದಿದ್ದೇವೆ ಎಂದಿದ್ದಾರೆ.
ಸಂತ್ರಸ್ತೆಯ ಕುಟುಂಬದವರ ಅರ್ಜಿಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ಡಿ.ಕೆ.ಪಾಂಡೆ ತಿಳಿಸಿದ್ದಾರೆ. ಅದೇ ಸಮಯದಲ್ಲಿ ಇಂದು ವಧು ಮತ್ತು ಆಕೆಯ ಪ್ರಿಯಕರನನ್ನು ಹೊಸ ರಾಮನಗರ ಠಾಣೆ ಪೊಲೀಸರು ಮಾಹಿತಿ ಮೇರೆಗೆ ಪತ್ತೆ ಹಚ್ಚಿ ಕೊತ್ವಾಲಿ ಠಾಣೆಗೆ ಒಪ್ಪಿಸಿದ್ದಾರೆ. ಈ ಸಂಬಂಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ಯುವತಿಯ ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗುವುದು. ಸದ್ಯ ಪ್ರೇಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ