
ಪಾಟ್ನಾ (ನ.14) ಬಿಹಾರ ವಿಧಾನಸಭೆ ಚುನಾವಣೆಯ ಅಧಿಕೃತ ಫಲಿತಾಂಶ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ಆದರೆ ಬಹುತೇಕ ಕಡೆ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 200ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಎನ್‌ಡಿಎ ಮುನ್ನಡೆಯಲ್ಲಿದ್ದರೆ, ಇತ್ತ ಮಹಾಘಟಬಂದನ್ 33 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಪೈಕಿ ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ನ ಸ್ಟಾರ್ ನಾಯಕ ರಾಹುಲ್ ಗಾಂಧಿ ಅನ್ನೋದರಲ್ಲಿ ಎರಡು ಮಾತಿಲ್ಲ. ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರರುವ ರಾಹುಲ್ ಗಾಂಧಿಗೆ ಬಿಹಾರ ಚುನಾವಣೆ ಭಾರಿ ಹಿನ್ನಡೆ ನೀಡಿದೆ. ಕಾರಣ ಬಿಹಾರದಲ್ಲಿ ರಾಹುಲ್ ಗಾಂಧಿ, ಬಿಜೆಪಿ, ಚುನಾವಣಾ ಆಯೋಗ, ಆರ್‌ಎಸ್ಎಸ್ ವಿರುದ್ಧ ಮತಗಳ್ಳತನ ಆರೋಪ ಮಾಡಿ ವೋಚ್ ಅಧಿಕಾರ್ ಯಾತ್ರೆ ಮಾಡಿದ್ದರು. 1,300 ಕಿಲೋಮೀಟರ್ ಉದ್ದದ ಯಾತ್ರೆ ಇದಾಗಿತ್ತು. ಆದರೆ ರಾಹುಲ್ ಯಾತ್ರೆ ಹೋದ ಕಡೆ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಈ ಎಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹಿನ್ನಡೆ ಅನುಭವಿಸಿದ್ದಾರೆ.
2022 ಹಾಗೂ 2024ರಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಇದು ಲೋಕಸಭೆಯಲ್ಲಿ ಕಾಂಗ್ರೆಸ್ 41 ಸ್ಥಾನ ಗೆಲ್ಲಲು ಸಹಕಾರಿಯಾಗಿತ್ತು ಅನ್ನೋದು ಕಾಂಗ್ರೆಸ್ ನಾಯಕರ ಬಲವಾದ ನಂಬಿಕೆ. ಹೀಗಾಗಿ ಬಿಹಾರದಲ್ಲಿ ರಾಹುಲ್ ಗಾಂಧಿ ಆಗಸ್ಟ್ ತಿಂಗಳಲ್ಲಿ ಮತ ಅಧಿಕಾರ ಯಾತ್ರೆ ಮಾಡಿದ್ದರು. ಸಸರಾಮ್‌ನಿಂದ ಆರಂಭಗೊಂಡ ರಾಹುಲ್ ಗಾಂಧಿ ಯಾತ್ರೆ ಪಾಟ್ನದಲ್ಲಿ ಅಂತ್ಯಗೊಂಡಿತ್ತು. 1,300 ಕಿಲೋಮೀಟರ್, 25 ಜಿಲ್ಲೆ ಹಾಗೂ 110 ವಿಧಾನಸಭಾ ಕ್ಷೇತ್ರಗಳಲ್ಲಿ ರಾಹುಲ್ ಯಾತ್ರೆ ಸಾಗಿತ್ತು. ಆದರೆ ರಾಹುಲ್ ಸಾಗಿದ ಯಾತ್ರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭಾರಿ ಹಿನ್ನಡೆ ಅನುಭವಿಸಿ ಸೋಲಿನತ್ತ ಜಾರಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮಹಾಘಟಬಂದನ್ ಭಾರಿ ಜಿದ್ದಾಜಿದ್ದಿ ಬಳಿಕ ಸೀಟು ಹಂಚಿಕೆಯಾಗಿತ್ತು. ಕಾಂಗ್ರೆಸ್ 61 ಸ್ಥಾನಗಳಿಗೆ ಸ್ಪರ್ಧಿಸಲು ಒಪ್ಪಿಕೊಂಡಿತ್ತು. 61 ಸ್ಥಾನಗಳ ಬೈಕಿ ವಾಲ್ಮಿಕಿ ನಗರ, ಕಿಶನಗಂಜ್, ಮಣಿಹರಿ, ಬೆಗುಸರಾಯಿ ಸೇರಿದಂತೆ 4 ರಿಂದ 5 ಸ್ಥಾನದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಮುನ್ನಡೆಯಲ್ಲಿರುವ ಈ ಕ್ಷೇತ್ರಗಳು ರಾಹುಲ್ ಗಾಂಧಿ ವೋಟ್ ಅಧಿಕಾರ್ ಯಾತ್ರೆ ಸಂಚರಿಸದ ಕ್ಷೇತ್ರಗಳಾಗಿವೆ.
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವನ್ನೇ ರಚಿಸಿದೆ ಎಂದು ಕಾಂಗ್ರೆಸ್ ನಾಯಕರು ಭಲವಾಗಿ ನಂಬಿದ್ದಾರೆ. ಇದೇ ರೀತಿಯ ಮ್ಯಾಜಿಕ್ ಮಾಡಲು ರಾಹುಲ್ ಗಾಂಧಿ ಬಿಹಾರದಲ್ಲಿ ಯಾತ್ರೆ ಮಾಡಿದ್ದರು.ಆದರೆ ಗಾಂಧಿ ಮ್ಯಾಜಿಕ್ ನಡೆದಿಲ್ಲ. ಮತಕಳ್ಳತನ, ಅಧಾಕಾರ್ ಯಾತ್ರೆ ಸೇರಿದಂತೆ ಹಲವು ಪ್ರಯತ್ನಗಳು ರಾಹುಲ್ ಗಾಂಧಿಗೆ ಮಾತ್ರವಲ್ಲ, ಬಿಹಾರ ಕಾಂಗ್ರೆಸ್‌ಗೆ ಭಾರಿ ಮುಖಭಂಗ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ