ಬಿಹಾರ, 2ನೇ ಹಂತದ ಕದನ: ಲಾಲು ಪುತ್ರ ಸೇರಿ ಘಟಾನುಘಟಿಗಳು ಅಖಾಡದಲ್ಲಿ!

Published : Nov 03, 2020, 08:26 AM IST
ಬಿಹಾರ, 2ನೇ ಹಂತದ ಕದನ: ಲಾಲು ಪುತ್ರ ಸೇರಿ ಘಟಾನುಘಟಿಗಳು ಅಖಾಡದಲ್ಲಿ!

ಸಾರಾಂಶ

ಬಿಹಾರ ಕದನ: ಇಂದು 2ನೇ ಹಂತ|  94 ಸ್ಥಾನಗಳಿಗೆ 1463 ಅಭ್ಯರ್ಥಿಗಳ ಸ್ಪರ್ಧೆ| ಲಾಲು ಪುತ್ರ ಸೇರಿ ಘಟಾನುಘಟಿಗಳು ಅಖಾಡದಲ್ಲಿ

ಪಟನಾ(ನ.03): ಬಿಹಾರ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಮಂಗಳವಾರ ನಡೆಯಲಿದೆ. ಈ ಹಂತದಲ್ಲಿ 94 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ವಿವಿಧ ಪಕ್ಷಗಳ ಒಟ್ಟು 1463 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಈ ಪೈಕಿ ವಿಪಕ್ಷ ಆರ್‌ಜೆಡಿ ನಾಯಕ, ಲಾಲುಯಾದವ್‌ ಪುತ್ರ ತೇಜಸ್ವಿ ಯಾದವ್‌, ನಿತೀಶ್‌ ಸರ್ಕಾರದ ನಾಲ್ವರು ಸಚಿವರು, ನಟ ಶತ್ರುಘ್ನ ಸಿನ್ಹಾರ ಪುತ್ರ, ಕಾಂಗ್ರೆಸ್‌ನ ಲವ್‌ ಸಿನ್ಹಾ ಕಣದಲ್ಲಿದ್ದಾರೆ. ಹೀಗಾಗಿ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ಮುಖ್ಯಮಂತ್ರಿ ನಿತೀಶ್‌ ತವರು ನಳಂದಾ ಜಿಲ್ಲೆ ವ್ಯಾಪ್ತಿಗೆ ಬರುವ 7 ವಿಧಾನಸಭೆಗೂ ಚುನಾವಣೆ ನಡೆಯುತ್ತಿದೆ. ಹೀಗಾಗಿ ಈ ಹಂತ ನಿತೀಶ್‌ ಪಾಲಿಗೂ ಅಗ್ನಿಪರೀಕ್ಷೆಯಾಗಿದೆ.

ರಾಜ್ಯವಿಧಾನಸಭೆ 243 ಸ್ಥಾನಗಳ ಪೈಕಿ ಅ.28ರಂದು 71 ವಿಧಾನಸಭೆ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದಿತ್ತು. ಇದರಲ್ಲಿ ಶೇ. 53.46ರಷ್ಟುಪ್ರಮಾಣದ ಮತದಾನವಾಗಿತ್ತು. ನ.7ರಂದು 78 ಸ್ಥಾನಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!