2022ರ ಕ್ರಿಮಿನಲ್ ಕೇಸ್‌ನಲ್ಲಿ ಕ್ಲೀನ್‌ಚಿಟ್‌ಗೆ ಪ್ರತಿಯಾಗಿ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದ ಬಿಹಾರ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಸಮಷ್ಟಿಪುರದ ಪಟೋರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬಿಲಾಲ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪ್ರಸ್ತುತ ಪರಾರಿಯಾಗಿದ್ದಾರೆ.
ಪಾಟ್ನಾ (ಡಿ.5): 2022ರಲ್ಲಿ ಮಹಿಳೆಯ ಮೇಲೆ ಹಾಕಲಾಗಿದ್ದ ಕ್ರಿಮಿನಲ್ ಕೇಸ್‌ನಲ್ಲಿ ಕ್ಲೀನ್‌ಚಿಟ್ ಬೇಕಾದಲ್ಲಿ ತನ್ನೊಂದಿಗೆ ಲೈಂಗಿಕ ಸಂಬಂಧವನ್ನು ಬೆಳೆಸು ಎಂದು ಒತ್ತಾಯ ಮಾಡಿದ್ದ ಬಿಹಾರ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಸಮಷ್ಟಿಪುರ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಬುಧವಾರ ತಿಳಿಸಿದ್ದಾರೆ. ಸಮಷ್ಟಿಪುರದ ಪಟೋರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬಿಲಾಲ್ ಖಾನ್ ವಿರುದ್ಧಎಫ್‌ಐಆರ್ ದಾಖಲಾಗಿದ್ದು, ಪ್ರಸ್ತುತ ಅವರು ಪರಾರಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಶೋಕ್ ಮಿಶ್ರಾ ತಿಳಿಸಿದ್ದಾರೆ. ಮಹಿಳೆಯೊಂದಿಗೆ ಇನ್ನೂ 7 ಮಂದಿಯ ವಿರುದ್ಧ 2022ರಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಅಪ್ರಾಪ್ತ ಬಾಲಕ/ಬಾಲಕಿಯೊಬ್ಬರ ಅಶ್ಲೀಲ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಕ್ಕಾಗಿ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗಿತ್ತು. ಬಿಲಾಲ್ ಖಾನ್ ಈ ಕೇಸ್‌ನ ತನಿಖಾಧಿಕಾರಿಯಾಗಿದ್ದರು.
ಮಹಿಳೆ ಮತ್ತು ಪೊಲೀಸ್ ಅಧಿಕಾರಿಯನ್ನು ಒಳಗೊಂಡ ವಿಡಿಯೋ ಮಂಗಳವಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ, ಪಟೋರಿ ಉಪವಿಭಾಗದ ಪೊಲೀಸ್ ಅಧಿಕಾರಿ ಬಿಕೆ ಮೇಧಾವಿ ಅವರಿಂದ ತನಿಖೆಗೆ ಆದೇಶಿಸಿದ್ದೇನೆ ಎಂದು ಮಿಶ್ರಾ ಹೇಳಿದರು.
ತನಿಖೆಯ ವೇಳೆ, ಪೊಲೀಸ್ ಇನ್ಸ್‌ಪೆಕ್ಟರ್ ತನಿಖೆಯ ನೆಪದಲ್ಲಿ ಮಹಿಳೆಯನ್ನು ಕರೆದಿದ್ದಾರೆ. ಹಾಗೇನಾದರೂ ಸೆಕ್ಸ್‌ಗೆ ನನ್ನೊಂದಿಗೆ ಸಹಕರಿಸಿದಲ್ಲಿ, ಈ ಕೇಸ್‌ನಲ್ಲಿ ಕ್ಲೀನ್ ಚಿಟ್ ನೀಡುವುದಾಗಿ ಆಮಿಷ ನೀಡಿದ್ದಾನೆ ಎಂದು ಎಸ್‌ಡಿಪಿಓ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಮಹಿಳೆಯ ಆರೋಪ ಸಾಬೀತಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಎಸ್‌ಐ ಅವರನ್ನು ಅಮಾನತುಗೊಳಿಸಲಾಗಿದ್ದು, ವಿಚಾರಣೆ ನಡೆಸಲಾಗುವುದು ಎಂದು ಮಿಶ್ರಾ ಹೇಳಿದ್ದಾರೆ.
ಮಹಿಳೆ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಬಿಲಾಲ್ ಖಾನ್ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಮಹಿಳೆಯ ಮೇಲೆ ದೌರ್ಜನ್ಯದ ಆರೋಪ ಹೊರಿಸಲಾಗಿದೆ. ಇನ್ಸ್‌ಪೆಕ್ಟರ್ ಮನೆಯಲ್ಲಿ ಆತನ ಹೆಂಡತಿ ಇಲ್ಲದೇ ಇದ್ದಾಗ ಕೇಸ್‌ನಲ್ಲಿ ಸಹಾಯ ಮಾಡುವ ನೆಪದಲ್ಲಿ ಅವರು ಮನೆಗೆ ಕರೆದಿದ್ದರು ಎಂದು ಮಹಿಳೆ ತಿಳಿಸಿದ್ದಾಳೆ. ಮಹಿಳೆ ತನ್ನ ಸಹೋದರನೊಂದಿಗೆ ಇನ್ಸ್‌ಪೆಕ್ಟರ್ ಮನೆಗೆ ಹೋಗಿದ್ದಳು. ಈ ವೇಳೆ ಸೋದರನನ್ನು ಮನೆಯ ಹೊರಗೆ ಕಾಯುವಂತೆ ತಿಳಿಸಲಾಗಿತ್ತು.
ಕೇಂದ್ರ ಸರ್ಕಾರಕ್ಕೆ 1100 ಕೋಟಿ ರೂಪಾಯಿ ನೀಡಿದ 2 ರೈಲ್ವೆ ಕಂಪನಿಗಳು
ಮಾತುಕತೆಯ ವೇಳೆ ಪೊಲೀಸ್ ಅಧಿಕಾರಿ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯ ಮಾಡಿದ್ದ. ನನ್ನ ಮೇಲೆ ಬಲವಂತವನ್ನೂ ಮಾಡಿದ್ದ. ಒಂದು ಹಂತದಲ್ಲಿ ಮಹಿಳೆ ತನ್ನ ಮೊಬೈಲ್ ಫೋನ್ ಕ್ಯಾಮೆರಾವನ್ನು ಸ್ವಿಚ್ ಆನ್ ಮಾಡಿ ರೆಕಾರ್ಡ್ ಮಾಡವಲ್ಲಿ ಯಶಸ್ವಿಯಾಗಿದ್ದಾಳೆ. ಅದರೊಂದಿಗೆ ಕೂಗಿಕೊಂಡಿದ್ದರಿಂದ, ಆಕೆಯ ಸಹೋದರ ಪದೇ ಪದೇ ಬಾಗಿಲು ತಟ್ಟಿದ್ದ. ಕೊನೆಗೆ ಬಿಲಾಲ್ ಖಾನ್ ಬಾಗಿಲು ತೆರೆದು ಆಕೆಯನ್ನು ಹೊರಬಿಟ್ಟಿದ್ದಾನೆ. ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಲು ಇದೇ ಆಧಾರವಾಗಿದೆ.
Breaking: ಕೃತಕ ಸೂರ್ಯಗ್ರಹಣ ಸೃಷ್ಟಿಗೆ ಸಾಹಸ, ಪ್ರೋಬಾ-3 ನೌಕೆಯನ್ನ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ!
बिहार :जेल नहीं जाना है तो मेरे साथ सेक्स करो', दारोगा का अश्लील हरकत करते वीडियो वायरल,समस्तीपुर जिले के पटोरी थाने में तैनात एक दारोगा का युवती से अश्लील हरकत करते वीडियो आया सामने pic.twitter.com/AutsP5GlpF
— FirstBiharJharkhand (@firstbiharnews)