ಹುಸಿ ಜಾತ್ಯತೀತತೆಯ ಬಣ್ಣ ಬಯಲು ಮಾಡಿದ ಅಯೋಧ್ಯೆ ರಾಮಮಂದಿರ ಹೋರಾಟ: ಅಡ್ವಾಣಿ

By Kannadaprabha News  |  First Published Jan 14, 2024, 8:49 AM IST

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಡೆದ ಹೋರಾಟವು ಕೇವಲ ಮಂದಿರ ನಿರ್ಮಾಣಕ್ಕೆ ಸೀಮಿತವಾಗದೆ, 'ಹುಸಿ ಜಾತ್ಯತೀತತೆ' ಯಾವುದು ಹಾಗೂ 'ನೈಜ ಜಾತ್ಯತೀತತೆ' ಯಾವುದು ಎಂಬುದನ್ನು ಬಯಲು ಮಾಡಿತು ಎಂದು 90ರ ದಶಕದಲ್ಲಿ ರಾಮರಥ ಯಾತ್ರೆ ಮೂಲಕ ಬಿಜೆಪಿಯನ್ನು ಜನಮಾನಸದಲ್ಲಿ ಬೇರೂರುವಂತೆ ಮಾಡಿದ ಎಲ್. ಕೆ. ಅಡ್ವಾಣಿ ಹೇಳಿದ್ದಾರೆ.


ನವದೆಹಲಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಡೆದ ಹೋರಾಟವು ಕೇವಲ ಮಂದಿರ ನಿರ್ಮಾಣಕ್ಕೆ ಸೀಮಿತವಾಗದೆ, 'ಹುಸಿ ಜಾತ್ಯತೀತತೆ' ಯಾವುದು ಹಾಗೂ 'ನೈಜ ಜಾತ್ಯತೀತತೆ' ಯಾವುದು ಎಂಬುದನ್ನು ಬಯಲು ಮಾಡಿತು ಎಂದು 90ರ ದಶಕದಲ್ಲಿ ರಾಮರಥ ಯಾತ್ರೆ ಮೂಲಕ ಬಿಜೆಪಿಯನ್ನು ಜನಮಾನಸದಲ್ಲಿ ಬೇರೂರುವಂತೆ ಮಾಡಿದ ಎಲ್. ಕೆ. ಅಡ್ವಾಣಿ ಹೇಳಿದ್ದಾರೆ.

ಜ.22ರಂದು ನಡೆಯಲಿರುವ ರಾಮ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಡ್ವಾಣಿ ಬರೆದಿರುವ 'ಶ್ರೀರಾಮ ಮಂದಿರ: ಈಡೇರಿದ ದೈವಿಕ ಕನಸು" ಲೇಖನವನ್ನು ಅವರ ಕಚೇರಿಯು ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ.  ಇದರಲ್ಲಿ 1990ರಲ್ಲಿ ಒಂದೆಡೆ ನನ್ನ ರಾಮರಥಯಾತ್ರೆಗೆ ಬೆಂಬಲವಿತ್ತು, ಮತ್ತೊಂದೆಡೆ ಹೆಚ್ಚಿನ ರಾಜಕೀಯ ಪಕ್ಷಗಳು ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭಯದಿಂದ ಬೆಂಬಲಿಸಲು ಹಿಂಜರಿದವು. ಅವರು (ಬಿಜೆಪಿಯೇತರ ಹಲವು ಪಕ್ಷಗಳು) ಈ ಮತ-ಬ್ಯಾಂಕ್ ರಾಜಕಾರಣದ ಆಮಿಷಕ್ಕೆ ಬಲಿಯಾದರು ಮತ್ತು ಜಾತ್ಯತೀತತೆಯ ಹೆಸರಿನಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡವು. ಅಯೋಧ್ಯೆ ವಿವಾದದ ಮೂಲ ಉದ್ದೇಶವು ರಾಮ ಮಂದಿರ ನಿರ್ಮಾಣವಾಗಿತ್ತು. ಆದರೆ ಈ ಮೂಲ ಉದ್ದೇಶದ ಜತೆಗೆ ಈ ಹೋರಾಟವು, ಹುಸಿ ಜಾತ್ಯತೀತತೆ ಯಾವುದು ಹಾಗೂನಿಜವಾದ ಜಾತ್ಯತೀತತೆ ಯಾವುದು ಎಂಬುದರ ಬಣ್ಣ ಬಯಲು ಮಾಡಿತು. ಜಾತ್ಯತೀತತೆಗೆ ಆಗ ನಿಜವಾದ ಅರ್ಥ ಮರುಕಳಿಸಿತು' ಎಂದಿದ್ದಾರೆ.

Tap to resize

Latest Videos

ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಗೈರು ನಿರ್ಧಾರ ಬೆನ್ನಲ್ಲೇ ಇತ್ತ 'ನಾನು ರಾಮಭಕ್ತ' ಎಂದ ಸಚಿವ ಮುನಿಯಪ್ಪ!

ಮಂದಿರ ಉದ್ಘಾಟನೆ ಬಹಿಷ್ಕಾರದಿಂದ ಕಾಂಗ್ರೆಸ್‌ಗೆ ನಷ್ಟ: ಸಮೀಕ್ಷೆ
ನವದೆಹಲಿ: ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದ್ದರೂ ಸಹ ಕಾಂಗ್ರೆಸ್ ನಾಯಕರು ಇದನ್ನು ನಿರಾಕರಿಸಿರುವುದು ಮುಂದಿನ ಚುನಾವಣೆಯಲ್ಲಿಕಾಂಗ್ರೆಸ್‌ಗೆ ನಷ್ಟ ಉಂಟುಮಾಡಲಿದೆ ಎಂದು ಸಿವೋಟ‌ರ್ ಸಮೀಕ್ಷೆ ತಿಳಿಸಿದೆ. ಸಿವೋಟರ್ ಈ ಸಮೀಕ್ಷೆ ನಡೆಸಿದ್ದು, ಮಂದಿರ ಉದ್ಘಾಟನೆಯ ಬಹಿಷ್ಕಾರ ಕಾಂಗ್ರೆಸ್‌ಗೆ ನಷ್ಟವುಂಟು ಮಾಡಲಿದೆಯೇ ಎಂಬ ಪ್ರಶ್ನೆಗೆ ಶೇ.55.1ರಷ್ಟು ಜನ ಹೌದು ಎಂದು ಉತ್ತರಿಸಿದ್ದಾರೆ. ಶೇ.30ರಷ್ಟು ಜನ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ರಾಮಮಂದಿರ ಉದ್ಘಾಟನೆ ಮುಂದಿನ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಶೇ.52.1ರಷ್ಟು ಮಂದಿ ಹೌದು ಎಂದು ಶೇ.31.7ರಷ್ಟು ಮಂದಿ ಇಲ್ಲ ಎಂದು ಉತ್ತರಿಸಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕೌಂಟ್‌ಡೌನ್: ರಾಮಧೂತ ಹನುಮಂತನ ಜನ್ಮಸ್ಥಳ ಅಂಜನಾದ್ರಿಗೆ ಬಿಗಿಭದ್ರತೆ!

click me!