ರಾಮನಿಲ್ಲದೆ ಅಯೋಧ್ಯೆ ಇಲ್ಲ: ದೇಗುಲ ನಗರಿ ಅಯೋಧ್ಯೆಗೆ ರಾಷ್ಟ್ರಪತಿ ಭೇಟಿ!

Published : Aug 30, 2021, 08:07 AM IST
ರಾಮನಿಲ್ಲದೆ ಅಯೋಧ್ಯೆ ಇಲ್ಲ: ದೇಗುಲ ನಗರಿ ಅಯೋಧ್ಯೆಗೆ ರಾಷ್ಟ್ರಪತಿ ಭೇಟಿ!

ಸಾರಾಂಶ

* ದೇಗುಲ ನಗರಿ ಅಯೋಧ್ಯೆಗೆ ರಾಷ್ಟ್ರಪತಿ ಭೇಟಿ * ರಾಮನಿಲ್ಲದೆ ಅಯೋಧ್ಯೆ ಇಲ್ಲ * ರಾಮಲಲ್ಲಾಗೆ ನಮನ

ಲಖನೌ(ಆ.30): ರಾಮನಿಲ್ಲದೆ ಅಯೋಧ್ಯೆಯೇ ಇಲ್ಲ. ರಾಮನಿದ್ದಲ್ಲಿಯೇ ಅಯೋಧ್ಯೆ ಎಂದು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಬಣ್ಣಿಸಿದ್ದಾರೆ.

ಉತ್ತರಪ್ರದೇಶ ಪ್ರವಾಸದ ಭಾಗವಾಗಿ ಭಾನುವಾರ ಅಯೋಧ್ಯೆಗೆ ಭೇಟಿ ನೀಡಿದ್ದ ಅವರು ರಾಮಾಯಣ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ‘ರಾಮ ಈ ನಗರದಲ್ಲಿ ಖಾಯಂ ಆಗಿ ನೆಲೆಸಿದ್ದಾನೆ. ಹೀಗಾಗಿ ನಿಜ ಅರ್ಥದಲ್ಲಿ ಇದು ಅಯೋಧ್ಯೆ ಎಂದರು. ಜೊತೆಗೆ ಶ್ರೀರಾಮ ಮತ್ತು ರಾಮ ಕಥಾ ಕುರಿತಾಗಿ ಸಾಮಾನ್ಯ ಜನರಲ್ಲಿ ಇರುವ ಗೌರವ ಮತ್ತು ಪ್ರೀತಿ ನಮ್ಮ ಕುಟುಂಬದವರಿಗೂ ಇತ್ತು. ಇದೇ ಕಾರಣಕ್ಕೆ ನನಗೆ ಈ ಹೆಸರು ಇಟ್ಟಿದ್ದಾರೆ ಎಂದೆನಿಸುತ್ತದೆ’ ಎಂದರು.

ಬಳಿಕ ಅವರು ಭವ್ಯ ದೇಗುಲ ನಿರ್ಮಾಣವಾಗುತ್ತಿರುವ ಸ್ಥಳದ ಸಮೀಪದಲ್ಲೇ ಇರುವ ಮೂಲವಿಗ್ರಹ ರಾಮ್‌ಲಲ್ಲಾ ಇಟ್ಟಿರುವ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚೈನೀಸ್ ಮಾಂಜಾಗೆ ಮತ್ತೊಂದು ಬಲಿ: ಮಗಳನ್ನು ಶಾಲೆಗೆ ಬಿಟ್ಟು ವಾಪಸಾಗುತ್ತಿದ್ದ ತಂದೆ ಸಾವು
22 ಕಾರ್ಮಿಕರ ಸಾಗಿಸುತ್ತಿದ್ದ ಟ್ರಕ್ ಭೀಕರ ಅಪಘಾತದಲ್ಲಿ 17 ಸಾವು, 4 ದಿನ ಬಳಿಕ ಘಟನೆ ಬೆಳಕಿಗೆ