
ನವದೆಹಲಿ(ಜೂ.18): ಕೊರೋನಾ ವೈರಸ್‌ಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಜೀವವನ್ನು ಡೆಕ್ಸಮೆಥಾಸೋನ್ ಎಂಬ ಸ್ಟೀರಾಯ್ಡ್ ಇಂಜೆಕ್ಷನ್ ಕಾಪಾಡಬಲ್ಲದು ಎಂಬ ವರದಿ ಸಂಚಲನಕ್ಕೆ ಕಾರಣವಾಗಿದೆ. ಅನೇಕ ಭಾರತೀಯರು ಈ ಔಷಧಿಯ ದರ, ಅವುಗಳ ಲಭ್ಯತೆ ಮತ್ತು ಅವು ಎಲ್ಲಿ ತಯಾರಾಗುತ್ತವೆ ಎಂಬ ಕುರಿತಾಗಿ ಗೂಗಲ್‌ನಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ ಡೆಕ್ಸಮೆಥಾಸೊನ್ ಇಂಜೆಕ್ಷನ್ ಕೇವಲ 10 ರು.ನಲ್ಲಿ ಲಭ್ಯವಿದೆ ಮತ್ತು ಭಾರತದ ಹಲವು ಔಷಧ ಕಂಪನಿಗಳು ಇದನ್ನು ಉತ್ಪಾದಿಸುತ್ತಿವೆ ಎಂಬ ಸಂಗತಿ ಹೊರಬಿದ್ದಿದೆ. ಅದೇ ರೀತಿ ಡೆಕ್ಸಮೆಥಾಸೊನ್ ಇಂಜೆಕ್ಷನ್ ಟ್ವಿಟರ್‌ನಲ್ಲೂ ಟ್ರೆಂಡ್ ಆಗಿದೆ.
ಈ ಔಷಧಿಯ ಕುರಿತು ಹಲವಾರು ಮಂದಿ ಟ್ವೀಟ್‌ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಡೆಕ್ಸಮೆಥಾಸೊನ್ ಇಂಜೆಕ್ಷನ್ ಅನ್ನು ಬ್ರಿಟನ್ ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸಿದ್ದನ್ನು ಸ್ವಾಗತಿಸಿದ್ದನ್ನು ಶ್ಲಾಘಿಸಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ