
ಪಠಾನ್‌ಕೋಟ್(ಆ.03): ಪಂಜಾಬಿನ ಪಠಾನ್‌ಕೋಟ್‌ನ ರಂಜಿತ್ ಸಾಗರ್ ಡ್ಯಾಮ್‌ನಲ್ಲಿ ಆರ್ಮಿಯ ಹೆಲಿಕಾಪ್ಟರ್ ಕ್ರಾಷ್ ಆಗಿದೆ. ಹೆಲಿಕಾಪ್ಟರ್‌ನ ಪೈಲಟ್ ಹಾಗೂ ಕೋ-ಪೈಲಟ್ ಅದೃಷ್ಟವಶಾತ್ ಪಾರಾಗಿದ್ದಾರೆ. ಭಾರತದ ಆರ್ಮಿಯ 254 AA ಹೆಲಿಕಾಪ್ಟರ್ 10.0ರ ವೇಳೆಗೆ ಕ್ರಾಷ್ ಆಗಿದ್ದು, ಪೊಲೀಸ್ ಹಾಗೂ ಎನ್‌ಡಿಆರ್‌ಎಫ್ ಸದ್ಯ ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೇನಾ ತಂಡವೂ ಸ್ಥಳಕ್ಕೆ ಆಗಮಿಸಿದೆ.
ಹೆಲಿಕಾಪ್ಟರ್ ಕ್ರಾಷ್ ಆಗಿರುವ ಮಾಹಿತಿ ಸಿಕ್ಕಿದೆ. ನಾವು ತಕ್ಷಣ ಸ್ಥಳದತ್ತ ಹೊರಟಿದ್ದೇವೆ ಎಂದು ಪಠಾನ್‌ಕೋಟ್ ಎಸ್‌ಎಸ್‌ಪಿ ಸುರಿಂದರ ಲಂಬಾ ಹೇಳಿದ್ದಾರೆ. ಯಾವುದೇ ಜೀವಹಾನಿ ಸಂಭವಿಸಿರುವ ಬಗ್ಗ ಈವರೆಗೆ ಮಾಹಿತಿ ಲಭ್ಯವಾಗಿಲ್ಲ. ಪಠಾನ್ ಕೋಟ್‌ನಿಂದ ಸುಮಾರು 30 ಕಿಮೀ ದೂರದಲ್ಲಿರುವ ಡ್ಯಾಮ್‌ನಲ್ಲಿ ಘಟನೆ ಸಂಭವಿಸಿದೆ. ವೆಪನ್ ಸಿಸ್ಟಂ ಹೆಲಿಕಾಪ್ಟರ್ ಪಠಾನ್‌ಕೋಟ್‌ನಿಂದ ದೈನಂದಿನ ವಿಹಾರಕ್ಕೆ ಹೊರಟಿತ್ತು.
ಕಾಶ್ಮೀರದಲ್ಲಿ ಈ ವರ್ಷ 89 ಉಗ್ರರ ಹತ್ಯೆ!
ಪಠಾಣ್‌ಕೋಟ್ ಪಂಜಾಬ್ ರಾಜ್ಯದ ಒಂದು ಪ್ರಮುಖ ನಗರವಾಗಿದೆ. ಪಠಾಣ್‌ಕೋಟ್ ಜಿಲ್ಲೆಯು ಅದರ ಪಶ್ಚಿಮದಲ್ಲಿ ಅಂತರಾಷ್ಟ್ರೀಯ ಪಾಕಿಸ್ತಾನದ ಜೊತೆಗೆ ಗಡಿಯನ್ನು ಹಂಚಿಕೊಂಡಿದೆ.
ಪ್ರಸಿದ್ಧ ಇತಿಹಾಸಕಾರರ ಪ್ರಕಾರಪಠಾಣ್‌ಕೋಟ್‌ನ ಹೆಸರು 'ಪಠಾಣ್' ಪದದಿಂದ ಹುಟ್ಟಿಕೊಂಡಿದೆ. ರಜಪೂತ ಆಡಳಿತಗಾರರು-17-18 ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ್ದಾರೆ. ಪಠಾಣ್‌ಕೋಟ್ ತನ್ನ ಮಿಲಿಟರಿ ಬೇಸ್‌ನಿಂದಲೇ ವಿಶ್ವವಿಖ್ಯಾತವಾಗಿದೆ. ಮ್ಯಾಮನ್ ಕ್ಯಾಂಟ್. ಇದು ಏಷ್ಯಾದ ಅತಿದೊಡ್ಡ ಸೇನಾ ನೆಲೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ