ಏರ್ ಇಂಡಿಯಾ ವಿಮಾನ ಆಗಾಗ ಕೆಲವು ವಿಚಾರಗಳಿಗೆ ಸುದ್ದಿಯಲ್ಲಿರುತ್ತದೆ. ಅವುಗಳಲ್ಲಿ ಕಳಪೆ ಸೇವೆಯೂ ಒಂದು. ಇದೀಗ, ಪ್ರಯಾಣಿಕರ ವಸ್ತುಗಳನ್ನು ನಿಷ್ಕಾಳಜಿಯಿಂದ ಹ್ಯಾಂಡಲ್ ಮಾಡುತ್ತಿರುವ ವಿಡಿಯೋವೊಂದನ್ನು ಸಂಗೀತಗಾರ ಈಶ್ವರ್ ದ್ವಿವೇದಿ ಎನ್ನುವವರು ಶೇರ್ ಮಾಡಿದ್ದಾರೆ.
ವಿಮಾನದಲ್ಲಿ ಪ್ರಯಾಣ ಮಾಡುವುದೆಂದರೆ ಒಂದಿಷ್ಟು ರಿಸ್ಕುಗಳು ಇರುವಂಥದ್ದೇ. ಜತೆಗೆ ಲಗೇಜ್ ಇದ್ದರೆ ಅದರ ಬಗ್ಗೆ ಹೆಚ್ಚು ಚಿಂತೆಯಾಗುವುದು ಸಹಜ. ಅಲ್ಲಿ ಲಗೇಜುಗಳನ್ನು ನಾವೇ ಹುಷಾರಾಗಿ, ಎಚ್ಚರಿಕೆಯಿಂದ ಇರಿಸಿಕೊಳ್ಳುವಂತಿಲ್ಲ. ಬೇಸರವಾದರೂ ಬೇರೆಯವರಿಗೆ ನೀಡಲೇಬೇಕು.. ಲಗೇಜ್ ಗಳು ಮಿಸ್ ಆಗುವ ಸಾಧ್ಯತೆ ಕಡಿಮೆ ಇದ್ದರೂ ಅವುಗಳ ಸುರಕ್ಷತೆಯ ಬಗ್ಗೆ ಕಾಳಜಿಯಾಗುತ್ತದೆ. ಇನ್ನು, ಸೂಕ್ಷ್ಮವಾದ ಐಟಂಗಳು ಇದ್ದರಂತೂ ಆತಂಕವಾಗುವುದು ಸಹಜ. ಎಷ್ಟೋ ಬಾರಿ ಮೌಲ್ಯಯುತ ವಸ್ತುಗಳು ಡ್ಯಾಮೇಜ್ ಆಗುವುದೂ ಇದೆ. ಅದಕ್ಕೆ ಯಾರೂ ಹೊಣೆಗಾರರಾಗುವುದಿಲ್ಲ, ಸಂಪೂರ್ಣವಾಗಿ ನಾವೇ ಜವಾಬ್ದಾರರಾಗಬೇಕಾಗುತ್ತದೆ. ಎಷ್ಟೋ ಬಾರಿ ವಿಮಾನದ ಸಿಬ್ಬಂದಿ ಪ್ರಯಾಣಿಕರ ವಸ್ತುಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ನಿಷ್ಕಾಳಜಿಯಿಂದ ಒರಟಾಗಿ ಲಗೇಜ್ ಗಳನ್ನು ಹ್ಯಾಂಡಲ್ ಮಾಡುತ್ತಾರೆ. ಇದೇ ಕಾರಣಕ್ಕೆ ಅನೇಕ ವಸ್ತುಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಪೂರಕವೆಂಬಂತೆ ಸಂಗೀತಗಾರರೊಬ್ಬರು ಏರ್ ಇಂಡಿಯಾ ವಿಮಾನ ಸಿಬ್ಬಂದಿ ಪ್ರಯಾಣಿಕರ ಲಗೇಜುಗಳನ್ನು ನಿರ್ವಹಿಸುವ ರೀತಿಯ ಬಗ್ಗೆ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
ಸಂಗೀತಗಾರ (Musician) ಈಶ್ವರ್ ದ್ವಿವೇದಿ ಎನ್ನುವವರು ಏರ್ ಇಂಡಿಯಾ (Air India) ವಿಮಾನದಿಂದ (Plane) ಕಂಡ ದೃಶ್ಯವನ್ನು ಶೇರ್ ಮಾಡಿದ್ದಾರೆ. ಈ ವೀಡಿಯೋ ವಿಮಾನದ ಸಿಬ್ಬಂದಿ ಪ್ರಯಾಣಿಕರ ವಸ್ತುಗಳು, ಲಗೇಜುಗಳನ್ನು ಹೇಗೆ ನಿರ್ವಹಣೆ ಮಾಡುತ್ತಾರೆ ಎನ್ನುವುದು ಬಹಿರಂಗವಾಗಿದೆ. ಈಶ್ವರ್ ದ್ವಿವೇದಿ ಅವರು ಏರ್ ಇಂಡಿಯಾದಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ವಿಮಾನದಿಂದ ಅವರ ಮ್ಯೂಸಿಕಲ್ ಇನ್ ಸ್ಟ್ರುಮೆಂಟ್ (Instrument) ಅನ್ನು ವಿಮಾನದ ಸಿಬ್ಬಂದಿ ಬೇರೊಂದು ವಾಹನಕ್ಕೆ (Vehicle) ರವಾನಿಸುತ್ತಾರೆ. ಆ ಸಮಯದಲ್ಲಿ ಅದನ್ನು ಎತ್ತಿ ಎಸೆಯುತ್ತಾರೆ. ಕೇವಲ ಅವರೊಬ್ಬರದ್ದೇ ಅಲ್ಲ, ಎಲ್ಲ ಲಗೇಜುಗಳನ್ನೂ ಅವರು ಎತ್ತಿ ಎತ್ತಿ ತುಂಬಿಸುವುದು ಕಂಡುಬರುತ್ತದೆ.
ವಿಮಾನದಿಂದ ಈ ವೀಡಿಯೋವನ್ನು ರೆಕಾರ್ಡ್ (Record) ಮಾಡಲಾಗಿದೆ. ವಿಮಾನನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಈಶ್ವರ್ ಅವರಿಗೆ ಸೇರಿರುವ ಸಂಗೀತದ ಸಲಕರಣೆಯೊಂದನ್ನು ಸಿಬ್ಬಂದಿ ಎಸೆದಾಗ ಅದು ಪುನಃ ಸ್ವಲ್ಪ ಕುಸಿಯುತ್ತದೆ, ಮತ್ತೆ ಅವರು ಅದನ್ನು ಎಸೆಯುವುದು ವಿಡಿಯೋದಲ್ಲಿ ಕಾಣುತ್ತದೆ. ಅದರ ಬಗ್ಗೆ ವಿಡಿಯೋದಲ್ಲಿ ಅವರು “ಅದು ನನ್ನದೇ ವಸ್ತು’ ಎಂದು ತಿಳಿಸಿದ್ದಾರೆ.
ಎಲ್ಲ ಸಂಸ್ಥೆಗಳಲ್ಲೂ ಇಂಥದ್ದೇ ನಿರ್ಲಕ್ಷ್ಯ
ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ (Viral) ಆಗಿದ್ದು, 14 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಣೆ (View) ಮಾಡಿದ್ದಾರೆ. ಹಲವಾರು ಜನ ಪ್ರತಿಕ್ರಿಯೆ ನೀಡಿದ್ದಾರೆ. ಬಹುತೇಕ ಎಲ್ಲರೂ ಏರ್ ಇಂಡಿಯಾ ಸಿಬ್ಬಂದಿಯ (Staff) ವರ್ತನೆಯನ್ನು ಖಂಡಿಸಿದ್ದಾರೆ. ಒಬ್ಬರು, “ಎಲ್ಲ ವಿಮಾನಗಳಲ್ಲೂ ಹೀಗೆಯೇ ನಡೆಯುತ್ತದೆ. ಇಂತಹ ನಿರ್ಲಕ್ಷ್ಯಕ್ಕೆ ಯಾವೊಂದು ವಿಮಾನ ಸಂಸ್ಥೆಯೂ ಹೊರತಲ್ಲ, ಇದು ದುರದೃಷ್ಟಕರ ಸತ್ಯ’ ಎಂದು ಹೇಳಿದ್ದಾರೆ.
ಬೆಂಗಳೂರು ಕಬ್ಬನ್ ಪಾರ್ಕಲ್ಲಿ ಇವ್ರು ಫಾರೆಸ್ಟ್ ಬಾತಿಂಗ್ ಮಾಡಿಸ್ತಾರಂತೆ; ದುಡ್ಡೇನೂ ಕಡಿಮೆ ಇಲ್ಲ ಬಿಡಿ!
“ಅವರು ಕಾಳಜಿಯಿಂದ ವಸ್ತುಗಳನ್ನು ನಿರ್ವಹಣೆ ಮಾಡುವುದನ್ನು ಯಾವಾಗ ಕಲಿಯುತ್ತಾರೆ?’ ಎಂದು ಹಲವರು ಕೇಳಿದ್ದಾರೆ. “ಇಂಥ ವಿಚಾರಗಳಿಗಾಗಿಯೇ ನನಗೆ ಕೋಪದ (Anger) ಸಮಸ್ಯೆ ಇದೆ’ ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು, “ಇಂತಹ ವರ್ತನೆಯಿಂದಾಗಿ ಏರ್ ಇಂಡಿಯಾ ಸಿಬ್ಬಂದಿ ಇಡೀ ಸಂಸ್ಥೆಯನ್ನೇ ಬಹುತೇಕ ಮುಳುಗಿಸಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ. “ಏರ್ ಇಂಡಿಯಾ, ಇನ್ನೊಮ್ಮೆ ಇದರಲ್ಲಿ ಪ್ರಯಾಣ (Travel) ಮಾಡಲ್ಲ’ ಎಂದು ಕೆಲವರು ತಿಳಿಸಿದ್ದಾರೆ.
ಅಷ್ಟಕ್ಕೂ, ವಿಮಾನ ಸಿಬ್ಬಂದಿಯ ಇಂಥ ನಿಷ್ಕಾಳಜಿಯನ್ನು ತೋರುವ ವಿಡಿಯೋ ಬಹಿರಂಗವಾಗಿರುವುದು ಇದೇ ಮೊದಲೇನೂ ಅಲ್ಲ. ಈ ಮುನ್ನವೂ ಪ್ರಯಾಣಿಕರ ಲಗೇಜುಗಳನ್ನು ಕೆಟ್ಟದಾಗಿ ನಿರ್ವಹಣೆ ಮಾಡಿರುವ ಹಲವಾರು ವಿಡಿಯೋಗಳು ವೈರಲ್ ಆಗಿವೆ.