ಬಿಜೆಪಿಗೆ 60 ಸ್ಥಾನದ ಆಸೆ: ಎಐಎಡಿಎಂಕೆಯಿಂದ 15 ಸ್ಥಾನಗಳ ಆಫರ್‌!

By Kannadaprabha News  |  First Published Feb 28, 2021, 8:08 AM IST

ತಮಿಳುನಾಡು ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ| ಬಿಜೆಪಿಗೆ 60 ಸ್ಥಾನದ ಆಸೆ: ಎಐಎಡಿಎಂಕೆಯಿಂದ 15 ಸ್ಥಾನಗಳ ಆಫರ್‌!


ಚೆನ್ನೈ(ಫೆ.28): ತಮಿಳುನಾಡು ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆದ ಬೆನ್ನಲ್ಲೇ ಬಿಜೆಪಿ ಹಾಗೂ ಅಣ್ಣಾಡಿಎಂಕೆ ಪಕ್ಷದ ಮಧ್ಯೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಾತುಕತೆ ಆರಂಭವಾಗಿದೆ. 234 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 60 ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಆದರೆ, ಎಐಎಡಿಎಂಕೆ ಬಿಜೆಪಿಗೆ ಕೇವಲ 15 ಸ್ಥಾನಗಳನ್ನು ಬಿಟ್ಟುಕೊಡುವ ಆಫರ್‌ ನೀಡಿದೆ.

ತಮಿಳುನಾಡು ಬಿಜೆಪಿ ಉಸ್ತುವಾರಿ ಸಿಟಿ ರವಿ, ಕೇಂದ್ರ ಸಚಿವರಾದ ಕಿಶನ್‌ ರೆಡ್ಡಿ, ಜ| ವಿ.ಕೆ. ಸಿಂಗ್‌ ಅವರನ್ನು ಒಳಗೊಂಡ ಬಿಜೆಪಿ ನಿಯೋಗ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ ಪನ್ನೀರಸೆಲ್ವಂ ಅವರ ಮಧ್ಯೆ ಶನಿವಾರ ಸೀಟು ಹಂಚಿಕೆ ಮಾತುಕತೆ ಏರ್ಪಟ್ಟಿದೆ. ಈ ವೇಳೆ ಕನ್ಯಾಕುಮಾರಿ, ಕೊಯಮತ್ತೂರು, ಚೆನ್ನೈನ ಕೆಲವು ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಡಲು ಎಐಎಡಿಎಂಕೆ ಒಪ್ಪಿಗೆ ಸೂಚಿಸಿದೆ. ಆದರೆ ಹೆಚ್ಚಿನ ಸೀಟುಗಳಿಗೆ ಬಿಜೆಪಿ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Latest Videos

ಇದೇ ವೇಳೆ ಎಸ್‌. ರಾಮದಾಸ್‌ ನೇತೃತ್ವದ ಪಟ್ಟಾಲಿ ಮಕ್ಕಳ್‌ ಕಚ್ಚಿ (ಪಿಎಂಕೆ) ಜೊತೆ ಎಐಎಡಿಎಂಕೆ ಸೀಟು ಹಂಚಿಕೆ ಸೂತ್ರವನ್ನು ಎಐಎಡಿಎಂಕೆ ಅಂತಿಮಗೊಳಿಸಿದ್ದು, 23 ಸೀಟುಗಳನ್ನು ಬಿಟ್ಟುಕೊಡಲು ಒಪ್ಪಿಕೊಂಡಿದೆ.

click me!