ಮಾರಕ ಕೊರೋನಾಗೆ ದೇಶದ ಮೊದಲ ರಾಜಕಾರಣಿ ಬಲಿ!

Published : Apr 27, 2020, 09:59 AM ISTUpdated : Apr 27, 2020, 01:09 PM IST
ಮಾರಕ ಕೊರೋನಾಗೆ ದೇಶದ ಮೊದಲ ರಾಜಕಾರಣಿ ಬಲಿ!

ಸಾರಾಂಶ

ಮಾರಕ ಕೊರೋನಾ ವೈರಸ್‌ಗೆ ಗುಜರಾತ್‌ ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ಅಹಮದಾಬಾದ್‌ ನಗರಪಾಲಿಕೆ ಹಿರಿಯ ಸದಸ್ಯ ಬದ್ರುದ್ದೀನ್‌ ಶೇಖ್‌ ಅವರು ಬಲಿಯಾಗಿದ್ದಾರೆ. ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ. 

ಅಹಮದಾಬಾದ್(ಏ.27): ವಿಶ್ವದಾದ್ಯಂತ ಎರಡು ಲಕ್ಷಕ್ಕೂ ಅಧಿಕ ಮಂದಿಯನ್ನು ಪಡೆದಿರುವ ಕೊರೋನಾದಿಂದ ಇದೀಗ ಭಾರತದಲ್ಲಿ ಮೊದ ಲ ರಾಜಕಾರಣಿ ಬಲಿಯಾಗಿದ್ದಾರೆ. ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ಗುಜರಾತ್​ನ ಬದ್ರುದ್ದೀನ್ ಶೇಖ್ ಮಾರಕ ವೈರಸ್​ನಿಂದಾಗಿ ಮೃತಪಟ್ಟಿದ್ದಾರೆ.

"

ಮಾಸ್ಕ್ ಹೊಲಿದು ಬಡವರಿಗೆ ವಿತರಣೆ, ರಾಷ್ಟ್ರಪತಿ ಕೋವಿಂದ್ ಪತ್ನಿ ಕಾರ್ಯಕ್ಕೆ ಶ್ಲಾಘನೆ!

ಾಕ್‌ಡೌನ್‌ನಿಂದಾಗಿ ಜನ ಸಾಮಾನ್ಯರು, ಅದರಲ್ಲೂ ವಿಶೇಷವಾಗಿ ಬಡವರು ಹಾಗೂ ಕಾರ್ಮಿಕ ವರ್ಗ ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಕಂಗಾಲಾಗಿದ್ದಾರೆ. ಹೀಗಿರುವಾಗ ಇವರಿಗೆ ಆಹಾರ ವಿತರಿಸಲು ಹೋಗಿದ್ದ ಗುಜರಾತ್ ಕೈ ನಾಯಕ ಬದ್ರುದ್ದೀನ್ ಶೇಖ್‌ರಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿದ್ದವು. ಟೆಸ್ಟ್ ನಡೆಸಿದಾಗ ಕೊರೋನಾ ಸೋಂಕಿರುವುದು ದೃಢಪಟ್ಟಿದ್ದು, ಅವರನ್ನು ಗುಜರಾತ್​ನ ಅಹಮದಾಬಾದ್​ನಲ್ಲಿರುವ ಎಸ್​ವಿಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೀಗ 8 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಪಡೆದ ಅವರು ಕೊನೆಯುಸಿರೆಳೆದಿದ್ದಾರೆ. ಇನ್ನು ಆಹಾರ ವಿತರಿಸುವಾಗಲೇ ಬದ್ರುದ್ದೀನ್‌ರವರಿಗೆ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ.    

ಬದ್ರುದ್ದೀನ್ ಮೃತಪಟ್ಟಿರುವುದನ್ನು ಕಾಂಗ್ರೆಸ್ ನಾಯಕ ಶಕ್ತಿಸಿನ್ಹಾ ಗೋಹಿಲ್ ಟ್ವೀಟ್‌ ಮೂಲಕ ಖಚಿತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಪ್ರೀತಿಯ ಸ್ನೇಹಿತ ಬದ್ರುದ್ದೀನ್ ನಿಜವಾದ ಕೊರೋನಾ ವಾರಿಯರ್ ಆಗಿದ್ದವರು. ಅಹಮದಾಬಾದ್​ನಲ್ಲಿ ಬಡವರಿಗೆ ಆಹಾರ ವಿತರಿಸುವಾಗ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ದಯವಿಟ್ಟು ಎಲ್ಲರೂ ಮನೆಯಲ್ಲೇ ಸುರಕ್ಷಿತವಾಗಿರಿ ಮತ್ತು ನಿಮ್ಮ ಪ್ರದೇಶದ ಅಧಿಕಾರಿಗಳಿಗೆ ಸಹಕರಿಸಿ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು