ಆಗ್ರಾದ ತಾಜ್‌ಮಹಲ್‌ ನೋಡ ಹೊರಟ ಪ್ರವಾಸಿಗರಿಗೊಂದು ಕಹಿ ಸುದ್ದಿ!

By Suvarna NewsFirst Published Mar 17, 2021, 1:12 PM IST
Highlights

ಪ್ರೇಮ ಸ್ಮಾರಕ ತಾಜಮಹಲ್‌ ಪ್ರವೇಶ ಮತ್ತು ಒಳಗೆ ಸಂಪೂರ್ಣ ಪ್ರವೇಶಕ್ಕೆ ಇರುವ ಶುಲ್ಕವನ್ನು ಭರ್ಜರಿ ಪ್ರಮಾಣದಲ್ಲಿ ಏರಿಕೆ | ಏ.1ರಿಂದ ತಾಜ್‌ಮಹಲ್‌ ಪೂರ್ಣ ದರ್ಶನದ ಟಿಕೆಟ್‌ ದರ 480 ರು.ಗೆ ಹೆಚ್ಚಳ

ಆಗ್ರಾ(ಮಾ.17): ಪ್ರೇಮ ಸ್ಮಾರಕ ತಾಜಮಹಲ್‌ ಪ್ರವೇಶ ಮತ್ತು ಒಳಗೆ ಸಂಪೂರ್ಣ ಪ್ರವೇಶಕ್ಕೆ ಇರುವ ಶುಲ್ಕವನ್ನು ಭರ್ಜರಿ ಪ್ರಮಾಣದಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಹೊಸ ದರ 2021ರ ಏ.1ರಿಂದ ಜಾರಿಗೆ ಬರಲಿದೆ.

ಹಾಲಿ ತಾಜ್‌ಮಹಲ್‌ ಪ್ರವೇಶಿಸಲು ಭಾರತೀಯರಿಗೆ ಇದ್ದ 50 ರು. ಶುಲ್ಕವನ್ನು 80 ರು.ಗೆ ಮತ್ತು ವಿದೇಶಿಯರಿಗೆ ಇದ್ದ ಶುಲ್ಕವನ್ನು 1000 ರು.ನಿಂದ 1200 ರು.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇನ್ನು ಮುಖ್ಯ ತಾಜ್‌ಮಹಲ್‌ನ ಮುಖ್ಯ ಗೋಪುರ ಪ್ರವೇಶಕ್ಕೆ 200 ರು. ಶುಲ್ಕ ವಿಧಿಸಲು ಆಗ್ರಾ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

ಇದು ಈಗಾಗಲೇ ಪುರಾತತ್ವ ಇಲಾಖೆ ವಿಧಿಸುತ್ತಿರುವ 200 ರು. ಶುಲ್ಕಕ್ಕೆ ಹೆಚ್ಚುವರಿಯಾಗಲಿದೆ. ಹೀಗಾಗಿ ಇನ್ನು ಭಾರತೀಯ ಪ್ರವಾಸಿಗರು ತಾಜ್‌ಮಹಲ್‌ನಲ್ಲಿ ಸಂಪೂರ್ಣ ಪ್ರವೇರ್ಶಕ್ಕೆ 480 ರು. ದರ ತೆರಬೇಕು. ವಿದೇಶಿಯರು 1600 ರು. ಶುಲ್ಕ ಕಟ್ಟಬೇಕು.

click me!