The Kashmir Files ಕಾಶ್ಮೀರ ಪಂಡಿತರ ನರಮೇಧ ಕೇಸ್ ಮರು ತನಿಖೆಗೆ ಆಗ್ರಹಿಸಿ ರಾಷ್ಚ್ರಪತಿಗೆ ವಕೀಲ ಪತ್ರ!

Published : Mar 19, 2022, 09:24 PM IST
The Kashmir Files ಕಾಶ್ಮೀರ ಪಂಡಿತರ ನರಮೇಧ ಕೇಸ್ ಮರು ತನಿಖೆಗೆ ಆಗ್ರಹಿಸಿ ರಾಷ್ಚ್ರಪತಿಗೆ ವಕೀಲ ಪತ್ರ!

ಸಾರಾಂಶ

ರಾಷ್ಟ್ರಪತಿಗೆ ಪತ್ರ ಬರೆದ ವಕೀಲ ವಿನೀತ್ ಜಿಂದಾಲ್ 33 ವರ್ಷಗಳ ಸಿಖ್ ವಿರೋಧಿ ದಂಗೆ ಮರುತನಿಖೆ ಮಾಡಲಾಗಿದೆ ಇದೀಗ ಕಾಶ್ಮೀರ ಪಂಡಿತರ ನರಮೇಧ ಪ್ರಕರಣ ತನಿಖೆ ಅಗತ್ಯ

ನವದೆಹಲಿ(ಮಾ.19): ದಿ ಕಾಶ್ಮೀರ್ ಫೈಲ್ಸ್(The Kashmir Files) ಬಾಲಿವುಡ್ ಚಿತ್ರ ದೇಶದಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ. ಕಾಶ್ಮೀರ ಪಂಡಿತರು, ಕಾಶ್ಮೀರದ ಹಿಂದೂಗಳ ಮೇಲೆ ನಡೆದ ಅತ್ಯಂತ ಘನಘೋರ ಹತ್ಯಾಕಾಂಡದ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಇತ್ತ ಈ ಚಿತ್ರದ ವಿರುದ್ಧವೂ ಮಾತುಗಳು ಕೇಳಿಬರುತ್ತಿದೆ. ಇದರ ನಡುವ ಮತ್ತೊಂದು ಮಹತ್ವದ ಘಟನೆ ನಡೆದಿದೆ. ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ಇದೀಗ ಕಾಶ್ಮೀರ ಪಂಡಿತರ ಮೇಲಿನ ಹತ್ಯಾಕಾಂಡ(Kashmir Pandit Genocide) ಕೇಸ್ ಮರು ತನಿಖೆಗೆ ಆಗ್ರಹಿಸಿ ಪತ್ರ ಬರೆದಿದ್ದಾರೆ.

ಕಾಶ್ಮೀರ ಪಂಡಿತರ ನರಮೇಧ ಪ್ರಕರಣದ ಮರು ತನಿಖೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್(President Ram Nath Kovind) ನಿರ್ದೇಶಿಸಬೇಕು. ಈ ಪ್ರಕರಣವನ್ನು ವಿಶೇಷ ತನಿಖಾ ದಳ(SIT)ಗೆ ನೀಡಬೇಕು ಎಂದು ವಿನೀತ್ ಜಿಂದಾಲ್ ಪತ್ರದಲ್ಲಿ ಆಗ್ರಹಿಸಿದ್ದಾರೆ. 1989-90ರಲ್ಲಿ ನಡೆದ ಅತ್ಯಂತ ಭೀಕರ ಘಟನೆ ಮರು ತನಿಖೆಗೆ ನಡೆಸಿ ತಪ್ಪಿತಸ್ತರನ್ನು, ಈ ಘಟನೆಗೆ ಪ್ರೋತ್ಸಾಹ ನೀಡಿದ, ಸಹಕರಿಸಿದ ಎಲ್ಲರಿಗೂ ಶಿಕ್ಷೆ ನೀಡಬೇಕು. ಈ ಮೂಲಕ ಕ್ರೂರತ್ವಕ್ಕೆ ಬಲಿಯಾದ ಕಾಶ್ಮೀರ ಪಂಡಿತರಿಗೆ ನ್ಯಾಯ ಒದಗಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

7 ದಿನದಲ್ಲಿ ₹100 ಕೋಟಿ ಗಳಿಸಿದ ‘The Kashmir Files’: ₹15 ಕೋಟಿ ವೆಚ್ಚದ ಚಿತ್ರ ಈಗ ಬ್ಲಾಕ್‌ಬಸ್ಟರ್‌!

33 ವರ್ಷಗಳ ಹಿಂದೆ ನಡೆದ ಸಿಖ್ ವಿರೋಧಿ ದಂಗೆ ಪ್ರಕರಣವನ್ನು ಮರು ತನಿಖೆಗೆ ಮಾಡಲಾಗಿದೆ. ಹಾಗಾದರೆ 32 ವರ್ಷಗಳ ಹಿಂದೆ ನಡೆದ ಕಾಶ್ಮೀರ ಪಂಡಿತರ ಹತ್ಯೆ ಪ್ರಕರಣ ತನಿಖೆಯನ್ನು ಮರುತನಿಖೆ ಯಾಕೆ ಮಾಡಬಾರದು ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.ಕಾಶ್ಮೀರ ಪಂಡಿತರಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ಕಳೆದ 33 ವರ್ಷಗಳಿಂದ ಕಾಶ್ಮೀರ ಪಂಡಿತರು ಅನುಭವಿಸಿದ ಯಾತನೆಗೆ ಕೊನೆಯಾಗಬೇಕು ಎಂದು ವಿನೀತ್ ಜಿಂದಾಲ್ ಹೇಳಿದ್ದಾರೆ.

ಕಾಶ್ಮೀರ ಪಂಡಿತರು ತಮಗಾದ ಅನ್ಯಾವನ್ನು ಹೇಳುವ ಪರಿಸ್ಥಿತಿ ಇರಲಿಲ್ಲ. ಇದೀಗ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಮುಕ್ತವಾಗಿ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇದು ಮರು ತನಿಖೆಗೆ ಸೂಕ್ತ ಕಾಲ ಎಂದು ವಿನೀತ್ ಜಿಂದಾಲ್ ಹೇಳಿದ್ದಾರೆ. 

ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಮೂಲಕ ಇದೀಗ ಕಣಿವೆ ರಾಜ್ಯದಲ್ಲಿ ಮುಸ್ಲಿಂ ಮೂಲಭೂತವಾದಿಗಳು, ಭಯೋತ್ಪಾದಕರು ನಡೆಸಿದ ಈ ಕೃತ್ಯ ಮತ್ತೆ ಚರ್ಚೆಯಾಗುತ್ತಿದೆ. ಚಿತ್ರ ಈಗಾಗಲೇ 100 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಚಿತ್ರ ನೋಡಿದವರು ಭಾವುಕರಾಗುತ್ತಿದ್ದಾರೆ. ಆಕ್ರೋಶ ಹೊರಹಾಕುತ್ತಿದ್ದಾರೆ.

70 ಉಗ್ರರ ರಿಲೀಸ್‌ಗೆ ಆದೇಶಿಸಿದ್ದ ಫಾರೂಖ್ ಅಬ್ದುಲ್ಲಾ, ಓಮರ್ ಆರೋಪಕ್ಕೆ ಬಿಜೆಪಿ ತಿರುಗೇಟು!

ದ ಕಾಶ್ಮೀರ್‌ ಫೈಲ್ಸ್‌’ ಚಿತ್ರ ವೀಕ್ಷಣೆ ಬಳಿಕ ಮೊಳಗಿದ ವಂದೇ ಮಾತರಂ!
ಕಾಶ್ಮೀರಿ ಪಂಡಿತರ ಕಥೆಯನ್ನೊಳಗೊಂಡ ‘ದ ಕಾಶ್ಮೀರ್‌ ಫೈಲ್ಸ್‌’ ಸಿನೆಮಾ ಮಂಗಳೂರಿನ ಸಿನೆಪೊಲೀಸ್‌ ಮಲ್ಟಿಪ್ಲೆಕ್ಸ್‌ನಲ್ಲಿ ಸತತ ಆರನೇ ದಿನಕ್ಕೆ ಯಶಸ್ವಿಯಾಗಿ ಕಾಲಿರಿಸಿದ್ದು, ಈ ನಡುವೆ ಸೋಮವಾರದಂದು ದಿನದ ಕೊನೆಯ ಶೋ ಬಳಿಕ ಪ್ರೇಕ್ಷಕರು ‘ವಂದೇ ಮಾತರಂ’ ಗೀತೆ ಹಾಡಿ ಗಮನ ಸೆಳೆದಿದ್ದಾರೆ.ಸೋಮವಾರ ಸಂಜೆ 6.30ರ ಶೋ ಆರಂಭವಾಗಿ 9.30ಕ್ಕೆ ಸಿನೆಮಾ ಅಂತ್ಯ ಆಗುವಾಗ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರೇಕ್ಷಕರ ತಂಡ ವಂದೇ ಮಾತರಂ ಗೀತೆ ಹಾಡಿದರು. ಸುಮಾರು 220 ಮಂದಿಯ ದೊಡ್ಡ ತಂಡ ಈ ಶೋ ನೋಡಲು ಆಗಮಿಸಿದ್ದು, ಅವರೆಲ್ಲ ಸೇರಿ ಹಾಡು ಹಾಡಿದ್ದಾರೆ ಎಂದು ಸಿನೆಪೊಲೀಸ್‌ನ ಮ್ಯಾನೇಜರ್‌ ಕೀರ್ತನ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕಳೆದ ಐದು ದಿನಗಳಿಂದ ನಿತ್ಯ 9 ಶೋ ಪ್ರದರ್ಶನವಾಗುತ್ತಿದ್ದು, ನಿತ್ಯವೂ ಒಂದೂವರೆ, ಎರಡು ಸಾವಿರದಷ್ಟುಜನರು ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ. ಸೂಪರ್‌ಹಿಟ್‌ ಚಿತ್ರಕ್ಕೆ ಇರುವಷ್ಟುಬೇಡಿಕೆ ಈ ಚಿತ್ರಕ್ಕೂ ಕಂಡುಬಂದಿದೆ. ಮುಂಗಡ ಬುಕ್ಕಿಂಗ್‌ ಕೂಡ ಸಾಕಷ್ಟುಆಗುತ್ತಿದೆ. ಅನೇಕರು ಚಿತ್ರಮಂದಿರಗಳಿಗೆ ಹೋಗದವರೂ ಬಂದು ಚಿತ್ರ ವೀಕ್ಷಣೆ ಮಾಡಿದ್ದಾರೆ ಎಂದು ಅವರು ಹೇಳಿದರು. ನಮಗೆ ಚಿತ್ರಗಳಲ್ಲಿ ಭೇದ ಭಾವವಿಲ್ಲ. ಯಾವುದೇ ಚಿತ್ರಕ್ಕೆ ಬೇಡಿಕೆ ಇರುವವರೆಗೆ ಮಾತ್ರ ಪ್ರದರ್ಶಿಸುತ್ತೇವೆ. ಈಗ ‘ದ ಕಾಶ್ಮೀರ್‌ ಫೈಲ್ಸ್‌’ಗೆ ಸಾಕಷ್ಟುಬೇಡಿಕೆಯಿದೆ. ಮುಂದಿನ ದಿನಗಳಲ್ಲಿ ಹೇಗಿರುತ್ತದೆ ನೋಡಬೇಕು ಎಂದು ಕೀರ್ತನ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !