Betting App Promotion: ಅಕ್ರಮ ಬೆಟ್ಟಿಂಗ್‌ ಆ್ಯಪ್‌ ಪ್ರಚಾರ: ವಿಜಯ್‌ ದೇವರಕೊಂಡ, ಪ್ರಕಾಶ್‌ ರಾಜ್‌, ಪ್ರಣೀತಾ, ರಾಣಾಗೆ ಇ.ಡಿ. ತನಿಖೆ ಸಂಕಷ್ಟ

Kannadaprabha News, Ravi Janekal |   | Kannada Prabha
Published : Jul 11, 2025, 07:49 AM ISTUpdated : Jul 11, 2025, 10:28 AM IST
Actors anchors TV hosts among 29 booked by ED for promoting illegal betting apps

ಸಾರಾಂಶ

ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದ ಆರೋಪದ ಮೇಲೆ ವಿಜಯ್ ದೇವರಕೊಂಡ, ಪ್ರಕಾಶ್ ರಾಜ್, ಪ್ರಣೀತಾ ಸುಭಾಷ್ ಸೇರಿದಂತೆ 29 ಜನರ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ಈ ಆ್ಯಪ್‌ಗಳು ಕೋಟ್ಯಂತರ ರೂಪಾಯಿಗಳ ಅಕ್ರಮ ಹಣ ಗಳಿಕೆ ಮಾಡಿವೆ ಎಂಬ ಆರೋಪವಿದೆ.

ನವದೆಹಲಿ (ಜುಲೈ.11): ಅಕ್ರಮ ಬೆಟ್ಟಿಂಗ್‌ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ವಿಜಯ್ ದೇವರಕೊಂಡ, ನಟ ಪ್ರಕಾಶ್ ರಾಜ್, ನಟಿ ಪ್ರಣೀತಾ ಸುಭಾಷ್, ತೆಲುಗು ನಟರಾದ ರಾಣಾ ದಗ್ಗುಬಾಟಿ ಸೇರಿದಂತೆ 29 ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಇವರೆಲ್ಲರನ್ನೂ ಶೀಘ್ರವೇ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜಂಗ್ಲೀ ರಮ್ಮಿ, ಎ23, ಜೀತ್‌ವಿನ್‌, ಪರಿಮ್ಯಾಚ್‌, ಲೋಟಸ್‌365 ರಂತಹ ಜೂಜಿನ ಆ್ಯಪ್‌ಗಳಿಂದ ಹಣ ಪಡೆದು, ಅವುಗಳ ಪರ ನಟ, ನಟಿಯರು, ಜಾಲತಾಣ ಪ್ರಭಾವಿಗಳು ಪ್ರಚಾರ ಮಾಡುತ್ತಿದ್ದರು. ಆದರೆ ಈ ಆ್ಯಪ್‌ಗಳು ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟದ ಮೂಲಕ ಕೋಟ್ಯಂತರ ರು. ಮೌಲ್ಯದ ಅಕ್ರಮ ಹಣ ಗಳಿಸಿವೆ ಎಂದು ಆರೋಪವಿದೆ. ಈ ಹಿನ್ನೆಲೆಯಲ್ಲಿ 29 ಜನರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಪ್ರಕರಣದಲ್ಲಿ ಇವರ ಪಾತ್ರ ತನಿಖೆಗೆ ಮುಂದಾಗಿದೆ.

ಯಾರ್‍ಯಾರ ವಿರುದ್ಧ ಕೇಸು?:

ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣೀತಾ ಸುಭಾಷ್, ನಿಧಿ ಅಗರ್ವಾಲ್ ಸೇರಿ 29 ಚಿತ್ರತಾರೆಯರು ಹಾಗೂ ಹಲವರು ಸಾಮಾಜಿಕ ಮಾಧ್ಯಮ ಪ್ರಭಾವಿಗಳು, ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ

ಇ.ಡಿ. ಕೇಸು ಏಕೆ?:

ಬೆಟ್ಟಿಂಗ್‌ ಆ್ಯಪ್‌ಗಳ ವಿರುದ್ಧ 5 ರಾಜ್ಯಗಳಲ್ಲಿ ದಾಖಲಾಗಿದ್ದ ಹಲವು ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಜಾರಿ ನಿರ್ದೇಶನಾಲಯವು ಇದೀಗ 29 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ. ಇದೀಗ ಎಫ್‌ಐಆರ್‌ ದಾಖಲು ಬಳಸಿಕ ಇಂಥ ಬೆಟ್ಟಿಂಗ್ ಆ್ಯಪ್‌ಗಳಿಂದ ಮೋಸಕ್ಕೊಳಗಾದವರಿಂದ ಇನ್ನಷ್ಟು ದೂರುಗಳು ದಾಖಲಾಗುವ ನಿರೀಕ್ಷೆಯಿದೆ. ಹೀಗಾಗಿ ಆರೋಪಿಗಳನ್ನು ಶೀಘ್ರವೇ ವಿಚಾರಣೆಗೆ ಕರೆದು, ಹೇಳಿಕೆ ಸಂಗ್ರಹಿಸುವ ಸಾಧ್ಯತೆಯಿದೆ.

ಏನೇನು ವಿಚಾರಣೆ?:

ಬೆಟ್ಟಿಂಗ್ ಆ್ಯಪ್‌ಗಳು ಅಕ್ರಮವಾಗಿ ಗಳಿಸಿದ ಹಣ ಹಾಗೂ ಅದರಲ್ಲಿ ಸೆಲೆಬ್ರಿಟಿಗಳ ನಿಖರವಾದ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ. ಅವರ ಹೇಳಿಕೆಗಳನ್ನು ದಾಖಲಿಸಿದ ನಂತರ ಅಪರಾಧವನ್ನು ನಿರ್ಧರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ