ತನ್ನೆಲ್ಲ ಆಸ್ತಿ  ರಾಹುಲ್ ಗಾಂಧಿಗೆ ಬರೆದ ಮಹಿಳೆ.. ಕಾರಣ ಏನು? 

By Kannadaprabha NewsFirst Published Apr 6, 2022, 3:54 AM IST
Highlights

* ರಾಹುಲ್‌ ಹೆಸರಿಗೆ ಪೂರ್ತಿ ಆಸ್ತಿ ಬರೆದ ವೃದ್ಧೆ!

* 50 ಲಕ್ಷ ಆಸ್ತಿ, 10 ತೊಲ ಬಂಗಾರ ರಾಹುಲ್‌ಗೆ

* ಡೆಹ್ರಾಡೂನ್‌ನ ಪುಷ್ಪಾ ಅಚ್ಚರಿಯ ನಿರ್ಧಾರ
* ಸ್ವ ಇಚ್ಛೆಯಿಂದ ಆಸ್ತಿ ನೀಡಿದ ವೃದ್ಧೆ'

ಡೆಹ್ರಾಡೂನ್‌ (ಏ.06) ಉತ್ತರಾಖಂಡದ (Uttarakhand) ಡೆಹ್ರಾಡೂನ್‌ ಮೂಲದ 78 ವರ್ಷದ (Woman) ಮಹಿಳೆಯೊಬ್ಬರು ತಮ್ಮ ಎಲ್ಲ ಆಸ್ತಿಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಹೆಸರಿಗೆ ವರ್ಗಾಯಿಸಿದ್ದಾರೆ.

ಪುಷ್ಪಾ ಮುಂಜಿಯಾಲ್‌ ಅವರು 50 ಲಕ್ಷ ರು. ಮೌಲ್ಯದ ಆಸ್ತಿಯನ್ನು, 10 ತೊಲ ಬಂಗಾರವನ್ನು ಮಾಜಿ ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷ ಪ್ರೀತಮ್‌ ಸಿಂಗ್‌ ಅವರ ಸಮ್ಮುಖದಲ್ಲಿ ರಾಹುಲ್‌ ಹೆಸರಿಗೆ ವರ್ಗಾಯಿಸಿದ್ದಾರೆ. ಈ ಕುರಿತು ಡೆಹ್ರಾಡೂನ್‌ ನ್ಯಾಯಾಲಯದಲ್ಲಿ ಪುಷ್ಪಾ ಅವರು ವಿಲ್‌ ಸಲ್ಲಿಸಿದ್ದು, ಸ್ವಇಚ್ಛೆಯಿಂದ ಆಸ್ತಿಯ ಮಾಲೀಕತ್ವವನ್ನು ರಾಹುಲ್‌ ಗಾಂಧಿಯವರಿಗೆ ನೀಡಿದ್ದಾರೆ.

ಕಾಂಗ್ರೆಸ್ ರಕ್ಷಿಸಬೇಕಾದ್ರೆ, ರಾಹುಲ್, ಪ್ರಿಯಾಂಕರನ್ನು ಹೊರಹಾಕಿ!

‘ರಾಹುಲ್‌ ಗಾಂಧಿ ಹಾಗೂ ಅವರ ವಿಚಾರಗಳ ದೇಶಕ್ಕೆ ಅಗತ್ಯವಾಗಿದೆ. ಅವರ ವಿಚಾರಗಳಿಂದ ಪ್ರಭಾವಿತರಾಗಿ ನಾನು ನನ್ನ ಎಲ್ಲ ಆಸ್ತಿಯನ್ನು ರಾಹುಲ್‌ ಅವರಿಗೆ ವರ್ಗಾಯಿಸಿದ್ದೇನೆ’ ಎಂದು ಪುಷ್ಪಾ ಹೇಳಿದ್ದಾರೆ.

ಟಾಸ್ಕ್ ಕೊಟ್ಟು ಹೋಗಿದ್ದ ರಾಹುಲ್:  ಕರ್ನಾಟಕ ಪ್ರವಾಸ ಮಾಡಿದ್ದ  ರಾಹುಲ್ ಗಾಂಧಿ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದರು.  ನಿಮ್ ಬಗ್ಗೆ ಚೆನ್ನಾಗಿ ಗೊತ್ತು. ಎನ್ನುತ್ತಲೇ ಸಿದ್ದು, ಡಿಕೆಶಿ, ಖರ್ಗೆಗೆ ಸಭೆಯಲ್ಲಿ ರಾಹುಲ್ ಗಾಂಧಿ ವಾರ್ನಿಂಗ್​ ಕೊಟ್ಟಿದ್ದರು.

ಸಿದ್ದರಾಮಯ್ಯ, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಅವರೇ ನಿಮ್ಮ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ನೀವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲಿಸಬೇಕು. ಒಂದು ಸ್ಥಾನ ಕೂಡ ಕಡಿಮೆ ಆಗಬಾರದು ಎಂದು ರಾಜ್ಯದ ನಾಯಕರಿಗೆ  ರಾಹುಲ್ ಗಾಂಧಿ  ಟಾರ್ಗೆಟ್  ನೀಡಿದ್ದರು.

ಮುಂದಿನ ವಿಧಾನಸಭಾ ಚುನಾವಣೆಯ ರೂಪುರೇಷೆ ಕುರಿತು ಚರ್ಚಿಸಿದರು. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ ಸೇರಿದಂತೆ ಹಿರಿಯ ನಾಯಕರ ಉಪಸ್ಥಿತರಿದ್ದರು. ರಾಜ್ಯದಲ್ಲಿ 150 ಸೀಟು ಗೆಲ್ಲಬೇಕು. ಒಂದು ಸ್ಥಾನ ಕೂಡ ಕಡಿಮೆ ಆಗಬಾರದು. ಪಕ್ಷ ನಿಷ್ಠೆಯ ಮೆರಿಟ್ ಮೇಲೆ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ. ಹಿರಿಯ ನಾಯರೆಲ್ಲರೂ ಒಟ್ಟಿಗೆ ಹೋಗಬೇಕು. ಪ್ರತಿ ಕ್ಷೇತ್ರಕ್ಕೂ ನಾಯಕರು ಭೇಟಿ ಕೊಡಬೇಕು. ನೀವು ಕರೆದರೆ ನಾನು ರಾಜ್ಯದ ಮೂಲೆ ಮೂಲೆಗೂ ಬರುತ್ತೇನೆ. ಆದ್ರೆ 150 ಸ್ಥಾನ ಗೆಲ್ಲಿಸಿಕೊಂಡು ಬರಬೇಕು ಎಂದಿದ್ದರು.  ಕಾಂಗ್ರೆಸ್ ಸದಸ್ಯತ್ವ ಅಭಿಯಾನದ್ದು ಚರ್ಚೆ ಆಗಿತ್ತು.

 

 

 

 

 


 

click me!