ಪಾಸಿಟಿವಿಟಿ ಹೆಚ್ಚಳ, ಕೇಸು ಏರಿಕೆಗೆ ಕೇಂದ್ರ ಆತಂಕ!

By Suvarna NewsFirst Published Jul 28, 2021, 7:41 AM IST
Highlights

* 12 ರಾಜ್ಯಗಳ 54 ಜಿಲ್ಲೆಗಳಲ್ಲಿ ಶೇ.10 ಪಾಸಿಟಿವಿಟಿ

* 7 ರಾಜ್ಯಗಳ 22 ಜಿಲ್ಲೆಗಳಲ್ಲಿ ಸೋಂಕು ಏರಿಕೆ

* ಪಾಸಿಟಿವಿಟಿ ಹೆಚ್ಚಳ, ಕೇಸು ಏರಿಕೆಗೆ ಕೇಂದ್ರ ಆತಂಕ

ನವದೆಹಲಿ(ಜು.28): ಜು.26ಕ್ಕೆ ಅಂತ್ಯಗೊಂಡ ವಾರದಲ್ಲಿ 12 ರಾಜ್ಯಗಳ 54 ಜಿಲ್ಲೆಗಳಲ್ಲಿ ಶೇ.10ರಷ್ಟು ಕೋವಿಡ್‌ ಪಾಸಿಟಿವಿಟಿ ದರ ದಾಖಲಾಗಿದೆ. ಇನ್ನು 7 ರಾಜ್ಯಗಳ 22 ಜಿಲ್ಲೆಗಳಲ್ಲಿ ಕಳೆದ ನಾಲ್ಕು ವಾರಗಳಿಂದ ದೈನಂದಿನ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ. ಇನ್ನು ನಿತ್ಯದ ಕೋವಿಡ್‌ ಪ್ರಕರಣಗಳ ಇಳಿಕೆಯು ನಿಧಾನಗತಿಯಲ್ಲಿ ಸಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.

ಹಾಗೆಯೇ, ಸರಾಸರಿ ದೈನಂದಿನ ಕೋವಿಡ್‌ ಪ್ರಕರಣಗಳು ಮೇ 5ರಿಂದ ಜು.21ರ ವರೆಗೆ 3.87 ಲಕ್ಷದಿಂದ, 38,090ಕ್ಕೆ ಇಳಿಕೆಯಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಸರಾಸರಿ ಸೋಂಕು ಪ್ರಮಾಣ ಏರುಗತಿಯಲ್ಲಿದೆ. ಸೋಂಕು ಒಂದೇ ಮಟ್ಟದಲ್ಲಿ ಇದ್ದು ನಿರೀಕ್ಷಿತ ಪ್ರಮಾಣದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಇಳಿಕೆ ಆಗುತ್ತಿಲ್ಲ ಎಂದು ತಿಳಿಸಿದೆ.

ಪಾಸಿಟಿದರದಲ್ಲಿ ಇಳಿಕೆ ಕಂಡು ಕಂಡಿದ್ದ 8 ಜಿಲ್ಲೆಗಳಲ್ಲಿಯೂ ಸದ್ಯ ಕೋವಿಡ್‌ ಸೋಂಕು ಪ್ರಮಾಣ ಅಧಿಕವಾಗುತ್ತಿದೆ. ಹಾಗಾಗಿ ಕೋವಿಡ್‌ ಬಗ್ಗೆ ಇನ್ನೂ ಜಾಗೃತಿ ವಹಿಸಬೇಕಾದ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ‍್ಯದರ್ಶಿ ಲವ್‌ ಅಗರ್‌ವಾಲ್‌ ತಿಳಿಸಿದ್ದಾರೆ.

click me!