Covid 19 Variant: ಮಹಾರಾಷ್ಟ್ರದಲ್ಲಿ ಒಮಿಕ್ರೋನ್‌ ಸೋಂಕಿತ ಸಾವು: ದೇಶದಲ್ಲೇ ಮೊದಲು!

By Kannadaprabha NewsFirst Published Jan 1, 2022, 4:43 AM IST
Highlights

*ಮಹಾರಾಷ್ಟ್ರದಲ್ಲಿ ಒಮಿಕ್ರೋನ್‌ ಸೋಂಕಿತ ಹೃದಯಾಘಾತಕ್ಕೆ ಬಲಿ
*ಸಾವಿನ ಬಳಿಕ ವ್ಯಕ್ತಿಯಲ್ಲಿ ಸೋಂಕು ಇರುವುದು ಪತ್ತೆ
*ಕೋವಿಡ್‌ ಹೆಚ್ಚಳ: ತಮಿಳುನಾಡಲ್ಲಿ ಶಾಲೆ ಬಂದ್‌ಗೆ ಆದೇಶ
 

ಪುಣೆ (ಜ.1) : ಒಮಿಕ್ರೋನ್‌ ಸೋಂಕಿತನೊಬ್ಬ (Covid 19) ಮಹಾರಾಷ್ಟ್ರದ ಪುಣೆಯಲ್ಲಿ ಸಾವನ್ನಪ್ಪಿದ್ದಾನೆ. ಇದು ದೇಶದಲ್ಲಿನ ಒಮಿಕ್ರೋನ್‌ ಸೋಂಕಿತನೊಬ್ಬನ ಮೊದಲ ಸಾವಿನ ಪ್ರಕರಣವಾಗಿದೆ. ನೈಜೀರಿಯಾಕ್ಕೆ ಹೋಗಿ ಬಂದ ಪ್ರಯಾಣದ ಹಿನ್ನೆಲೆಯಿರುವ ಮಧುಮೇಹ ಪೀಡಿತ 52 ವರ್ಷದ ವ್ಯಕ್ತಿಯು ಪಿಂಪ್ರಿಯಲ್ಲಿರುವ ಯಶವಂತರಾವ್‌ ಚವಾಣ್‌ ಆಸ್ಪತ್ರೆಯಲ್ಲಿ ಡಿ.28ರಂದು ಹೃದಯಾಘಾತದಿಂದ ಸಾವಿಗೀಡಾಗಿದ್ದರು. ಶುಕ್ರವಾರ ಅವರ ಪರೀಕ್ಷಾ ವರದಿ ಲಭ್ಯವಾಗಿದ್ದು, ಒಮಿಕ್ರೋನ್‌ ವೈರಸ್‌ ದೃಢಪಟ್ಟಿದೆ.

ಆದರೆ, ‘ವ್ಯಕ್ತಿಯ ಸಾವು ಕೊರೋನಾದಿಂದ ಸಂಭವಿಸಿದ್ದಲ್ಲ’ ಎಂದಿರುವ ಮಹಾರಾಷ್ಟ್ರ (Maharashtra) ಆರೋಗ್ಯ ಇಲಾಖೆ, ಈ ವ್ಯಕ್ತಿ ಕಳೆದ 13 ವರ್ಷಗಳಿಂದ ಮಧುಮೇಹ ಕಾಯಿಲೆಯಿಂದಲೂ ಬಳಲುತ್ತಿದ್ದರು. ಆದರೆ ಕೊರೋನಾ ಕಾರಣಕ್ಕೆ ಸಂಭವಿಸಿದ ಸಾವು ಇದಲ್ಲ. ಅಲ್ಲದೆ ಕಾಕತಾಳೀಯವೆಂಬಂತೆ ಆ ವ್ಯಕ್ತಿ ಒಮಿಕ್ರೋನ್‌ ಸೋಂಕಿತ (Omicron) ಎಂಬ ವರದಿ ಬಂದಿದೆ’ ಎಂದು ತಿಳಿಸಿದೆ.

ಒಮಿಕ್ರೋನ್‌ ಜಯಿಸಿದ್ದ ವ್ಯಕ್ತಿ ಸಾವು:

ಇದೇ ವೇಳೆ ಇತ್ತೀಚೆಗೆ ಒಮಿಕ್ರೋನ್‌ ವೈರಸ್‌ನಿಂದ ಪೂರ್ತಿ ಗುಣಮುಖರಾಗಿದ್ದ ರಾಜಸ್ಥಾನದ 73 ವರ್ಷದ ಹಿರಿಯ ನಾಗರಿಕನೋರ್ವ ಶುಕ್ರವಾರ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಸಾವಿಗೀಡಾದ ವ್ಯಕ್ತಿಯು ಡಿ.21 ಮತ್ತು ಡಿ.25ರಂದು ಎರಡೂ ಬಾರಿ ಕೋವಿಡ್‌ ನೆಗೆಟಿವ್‌ ಆಗಿದ್ದರು. ಆದರೆ ಅವರು ಕೊರೋನೋತ್ತರದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅಲ್ಲದೆ ಮಧುಮೇಹ, ಹೈಪರ್‌ಟೆನ್ಶನ್‌ ಹಾಗೂ ಹೈಪರ್‌ಥೈರಾಯ್ಡ್‌ನಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕೋವಿಡ್‌ ಹಿನ್ನೆಲೆ: ಮುಂಬೈನಲ್ಲಿ ಮತ್ತಷ್ಟುನಿರ್ಬಂಧ

ಮುಂಬೈ: ಕೋವಿಡ್‌ ಅಬ್ಬರ ಆರಂಭವಾಗಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ (Mumbai) ಮತ್ತಷ್ಟುನಿರ್ಬಂಧ ಜಾರಿಗೊಳಿಸಲಾಗಿದೆ.ಮುಂಬೈನಲ್ಲಿ ಪೊಲೀಸರು ಶುಕ್ರವಾರ ನಗರದಾದ್ಯಂತ ಸಿಆರ್‌ಪಿಸಿ ಸೆಕ್ಷನ್‌ 144 ಜಾರಿಗೊಳಿಸಿದ್ದಾರೆ. ಜ.15ರವರೆಗೆ ಸಂಜೆ 5 ರಿಂದ ಬೆಳಿಗ್ಗೆ 5 ಗಂಟೆವರೆಗೆ ಜನರು ಸಮುದ್ರತೀರ, ಪಾರ್ಕ್, ಗಾಡರ್ನ್‌, ತೆರೆದ ಮೈದಾನ ಸೇರಿದಂತೆ ಹಲವು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಬಾರದು ಎಂದು ನಿರ್ಬಂಧ ವಿಧಿಸಿದ್ದಾರೆ.

50 ಜನರ ಮಿತಿ:

ಈ ನಡುವೆ, ಮಹಾರಾಷ್ಟ್ರದಾದ್ಯಂತ ಸಭೆ-ಸಮಾರಂಭದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 50ಕ್ಕೆ ಸೀಮಿತಗೊಳಿಸಲಾಗಿದೆ. ಅಂತಿಮ ಸಂಸ್ಕಾರದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 20ಕ್ಕೆ ಮಿತಿಗೊಳಿಸಲಾಗಿದೆ.ಈ ಮೊದಲು ಮುಚ್ಚಿದ ಆವರಣದಲ್ಲಿ 100 ಜನರು ಹಾಗೂ ತೆರೆದ ಆವರಣಗಳ ಸಭೆ ಸಮಾರಂಭದಲ್ಲಿ 250 ಜನರು ಸೇರಬಹು

ಕೋವಿಡ್‌ ಹೆಚ್ಚಳ: ತಮಿಳುನಾಡಲ್ಲಿ ಶಾಲೆ ಬಂದ್‌ಗೆ ಆದೇಶ

ಚೆನ್ನೈ: ಕೊರೋನಾ ಮತ್ತು ಅಪಾಯಕಾರಿ ಒಮಿಕ್ರೋನ್‌ ರೂಪಾಂತರಿ ಹಾವಳಿ ರಾಜ್ಯದಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ (Tamil Nadu) ಹಲವು ನಿರ್ಬಂಧಗಳನ್ನು ಜಾರಿ ಮಾಡಿ ಆದೇಶ ಹೊರಡಿಸಿದೆ. ಕೂಡಲೇ ಕಿಂಡರ್‌ಗಾರ್ಡನ್‌ ಮತ್ತು ಪ್ಲೇಸ್ಕೂಲ್‌ಗಳನ್ನು ಸ್ಥಗಿತ ಮಾಡುವಂತೆ ಸೂಚಿಸಿದೆ. 8ನೇ ತರಗತಿಯ ವರೆಗೆ ಮಕ್ಕಳು ಶಾಲೆಗೆ ಖುದ್ದು ಹಾಜರಾಗಿ ಭೌತಿಕ ತರಗತಿಯಲ್ಲಿ ಪಾಲ್ಗೊಳ್ಳುವಂತಿಲ್ಲ. ಜ.10ರವರೆಗೆ ಶಾಲೆಗಳು ಆನ್‌ಲೈನ್‌ ಮೂಲಕ ಮಾತ್ರ ತರಗತಿ ನಡೆಸಬಹುದು ಎಂದಿದೆ.

ಹಾಗೆಯೇ ನಿಗದಿಯಾಗಿದ್ದ ವಸ್ತಪ್ರದರ್ಶನ, ಪುಸ್ತಕ ಮೇಳಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಆದೇಶ ಹೊರಡಿಸಿದೆ. ಸಾರ್ವಜನಿಕ ಸಾರಿಗೆಗಳಲ್ಲಿ ಶೇ.50ರಷ್ಟುಪ್ರಯಾಣಿಕರಿಗೆ ಹಾಗೂ ಹೋಟೆಲ್‌, ಜಿಮ್‌, ಸಲೂನ್‌ಗಳಲ್ಲಿ ಶೇ.50 ಜನರ ಭರ್ತಿಗೆ ಮಾತ್ರ ಅನುಮತಿಸಿದೆ. ಸಭೆ-ಸಮಾರಂಭಗಳಿಗೆ 100 ಜನರ ಮಿತಿ ವಿಧಿಸಲಾಗಿದೆ. ತಮಿಳುನಾಡಿನಲ್ಲಿ ಶುಕ್ರವಾರ 1000ಕ್ಕೂ ಹೆಚ್ಚು ಕೋವಿಡ್‌ ಕೇಸು ದೃಢಟ್ಟಿವೆ.

ಇದನ್ನೂ ಓದಿ:

1) Massive jump in COVID 19 case: 16764 ಕೋವಿಡ್‌ ಕೇಸ್‌, 64 ದಿನಗಳ ಗರಿಷ್ಠ

2) Omicron slowly replacing Delta: ಡೆಲ್ಟಾ ಮೀರಿಸ್ತಿದೆ ಒಮಿಕ್ರೋನ್‌

click me!