ಅಧಿವೇಶನ ನಡೆಯುತ್ತಿರಬೇಕಾದರೆ ನಾಲ್ವರು ಶಾಸಕರಿಗೆ ಕೊರೋನಾ ಪಾಸಿಟಿವ್/ ಕೇರಳದಲ್ಲಿ ಬಜೆಟ್ ಅಧಿವೇಶನ/ ಕ್ವಾರಂಟೈನ್ ಆದ ಶಾಸಕರು/ ಆತಂಕ ತಂದ ಪಾಸಿಟಿವ್ ಕೇಸ್ ಗಳು
ತಿರುವನಂತಪುರ (ಜ. 18) ಕರ್ನಾಟಕದಲ್ಲಿ ಸಕಲ ಮುನ್ನೆಚ್ಚರಿಕೆ ತೆಗೆದುಕೊಂಡು ಅಧಿವೇಶನ ನಡೆಸಲಾಗಿತ್ತು. ಅತ್ತ ಕೇರಳದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದಂತೆಯೇ, ನಾಲ್ವರು ಶಾಸಕರಿಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದ್ದು ಆತಂಕ ಹೆಚ್ಚಿಸಿದೆ.
ನಯತಿಂಕರಾ ಶಾಸಕ ಕೆ ಅನ್ಸಾಲನ್, ಕೊಯಿಲಾಂಡಿ ಶಾಸಕ ಕೆ ದಾಸನ್, ಕೊಲ್ಲಂ ಶಾಸಕ ಎಂ.ಮುಕೇಶ್ ಮತ್ತು ಪೀರುಮಡೆ ಶಾಸಕ ಇ ಎಸ್ ಬಿಜಿಮೋಲ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅಧಿವೇಶನದಲ್ಲಿ ಭಾಗವಹಿಸಿದವರಿಗೆಲ್ಲ ಆತಂಕ ಹೆಚ್ಚಾಗಿದೆ.
ಕೊರೋನಾ ಲಸಿಕೆ ಪಡೆಯಲು ಕಾದು ನೋಡುವ ತಂತ್ರ
ಎರಡು ದಿನಗಳ ಹಿಂದೆ ಇಎಸ್ ಬಿಜಿಮೋಲ್ ಅವರಿಗೆ ಪಾಸಿಟಿವ್ ಬಂದಿದ್ದು, ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ದಾಸನ್ ಮತ್ತು ಅನ್ಸಲನ್ ಅವರು ಚಿಕಿತ್ಸೆಗಾಗಿ ತಿರುವನಂತಪುರ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅತಿದೊಡ್ಡ ಲಸಿಕಾ ಅಭಿಯಾನಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಒಂದು ಕಡೆ ಕೊರೋನಾ ಆತಂಕ ಇನ್ನೊಂದು ಕಡೆ ಬ್ರಿಟನ್ ವೈರಸ್ ದಾಳಿ ಇವರೆಡರ ಮಧ್ಯೆ ಜೀವನ ಸರಿದೂಗಿಸಿಕೊಂಡು ಹೋಗುವ ಸವಾಲು ಪ್ರತಿಯೊಬ್ಬನಿಗೂ ಎದುರಾಗಿದೆ.