ಸಮೀಕ್ಷೆ ಮಾಡುತ್ತಿದ್ದ ವಿಮಾನ ಪತನ

Kannadaprabha News   | Asianet News
Published : Mar 28, 2021, 08:24 AM IST
ಸಮೀಕ್ಷೆ ಮಾಡುತ್ತಿದ್ದ ವಿಮಾನ ಪತನ

ಸಾರಾಂಶ

ಸಮೀಕ್ಷೆ ಮಾಡುವ ವಿಮಾನವೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶನಿವಾರ ಪತನಗೊಂಡಿದ್ದು, ಘಟನೆಯಲ್ಲಿ ಪೈಲಟ್‌ ಸೇರಿ ಮೂವರು ಗಾಯಗೊಂಡಿದ್ದಾರೆ.   

ಭೋಪಾಲ್‌ (ಮಾ.28): ವೈಮಾನಿಕ ಸಮೀಕ್ಷೆಗೆ ಬಳಕೆ ಮಾಡುತ್ತಿದ್ದ ವಿಮಾನವೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶನಿವಾರ ಪತನಗೊಂಡಿದ್ದು, ಘಟನೆಯಲ್ಲಿ ಪೈಲಟ್‌ ಸೇರಿ ಮೂವರು ಗಾಯಗೊಂಡಿದ್ದಾರೆ. 

ಭೋಪಾಲ್‌ನಿಂದ ಗುಣ ಕಡೆಗೆ ಸಾಗುತ್ತಿದ್ದ ಸಣ್ಣ ವಿಮಾನ ಟೇಕ್‌ ಆಫ್‌ ಆದ ಕೆಲವೇ ಹೊತ್ತಲ್ಲಿ ಶನಿವಾರ ಮಧ್ಯಾಹ್ನ ಇಲ್ಲಿನ ಬದ್ವಾಯಿ ಗ್ರಾಮದಲ್ಲಿ ಪತನಗೊಂಡಿದೆ. ಪೈಲಟ್‌, ಸಹ ಪೈಲಟ್‌ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮತ್ತೋರ್ವ ವ್ಯಕ್ತಿ ಸಮೀಕ್ಷೆಗೆಂದು ತೆರಳಿದ್ದರು.

ಏಕಕಾಲಕ್ಕೆ 2 ರನ್‌ವೇ ಬಳಸಬಹುದಾದ ದಕ್ಷಿಣ ಭಾರತದ ಏಕೈಕ ಏರ್‌ಪೋರ್ಟ್‌ ಕೆಐಎ ..

ಈ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿ ದುರ್ಘಟನೆ ಸಂಭವಿಸಿದೆ ಎಂದು ರಾಜಾ ಭೋಜ್‌ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಮೂವರಿಗೆ ಸಣ್ಣಪುಟ್ಟಗಾಯಗಳಾಗಿವೆ.

 ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಗಾಂಧಿನಗರ ಪೊಲೀಸ್‌ ಠಾಣೆ ಉಸ್ತುವಾರಿ ಅರುಣ್‌ ಶರ್ಮಾ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟಿಪ್ಸ್‌ ಹಣದಿಂದಲೇ 10 ಲಕ್ಷದ ಕಾರ್‌ ಖರೀದಿ ಮಾಡಿದ ವ್ಯಕ್ತಿ!
Morphing Wing: ಹಾರಾಡುವಾಗಲೇ ಕ್ಷಣ ಮಾತ್ರದಲ್ಲಿ ಬದಲಾಗುತ್ತೆ ಫೈಟರ್‌ ಜೆಟ್‌ ಶೇಪ್‌, ಹೊಸ ಟೆಕ್ನಾಲಜಿ ಪರೀಕ್ಷಿಸಿದ ಡಿಆರ್‌ಡಿಓ