ಒಂದು ವಾರದ ತರಬೇತಿಯ ನಂತರ ತಾನು ನವೆಂಬರ್ 2022 ರ ನಂತರ ಇಸ್ರೋದಲ್ಲಿ ಕ್ಷುದ್ರಗ್ರಹ-ಬೇಟೆ ಶಿಬಿರದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ರಿತಿಕಾ ಧ್ರುವ್ ಹೇಳಿದಳು.
ಅಮೆರಿಕದ ನಾಸಾಗೆ (NASA) ಸೇರಲು ಅನೇಕರು ಹಾತೊರೆಯುತ್ತಾರೆ. ಆದರೆ, ಈ ಪೈಕಿ ಆಯ್ಕೆಯಾಗೋದು ಕೆಲವರು ಮಾತ್ರ. ಇಂತಹ ಅವಕಾಶ ಛತ್ತೀಸ್‌ಗಢದ 16 ವರ್ಷದ ಬುಡಕಟ್ಟು ಬಾಲಕಿಗೆ (Tribal Girl) ಒಲಿದುಬಂದಿದೆ. ಹೌದು, ಛತ್ತೀಸ್‌ಗಢದ ಮಹಾಸಮುಂಡ್ ಜಿಲ್ಲೆಯ ಪುಟ್ಟ ಕುಗ್ರಾಮದ 16 ವರ್ಷದ ಬುಡಕಟ್ಟು ಹುಡುಗಿ ರಿತಿಕಾ ಧ್ರುವ್, ತನ್ನ ಪ್ರೆಸೆಂಟೇಷನ್ ಮೂಲಕ ಭಾರತೀಯ ತಂತ್ರಜ್ಞಾನ ಸಂಸ್ಥೆ (Indian Institute of Technology) (ಐಐಟಿ) ಬಾಂಬೆ ಮತ್ತು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ (Satish Dhawan Space Centre) (ಎಸ್‌ಡಿಎಸ್‌ಸಿ) ವಿಜ್ಞಾನಿಗಳನ್ನು ಮೆಚ್ಚಿಸಲು ಸಮರ್ಥಳಾಗಿದ್ದಾಳೆ. ‘’ಬಾಹ್ಯಾಕಾಶದಲ್ಲಿ ವ್ಯಾಕ್ಯೂಮ್.. ಕಪ್ಪು ಕುಳಿಯಿಂದ ಧ್ವನಿಯನ್ನು ನಾಸಾ ಕಂಡುಹಿಡಿದಿದ್ದು ಹೇಗೆ’’ ಎಂಬ ವಿಷಯದ ಕುರಿತು ತನ್ನ ಪ್ರಸ್ತುತಿಯ ಮೂಲಕ, ನಾಸಾ ಯೋಜನೆಗೆ ಬಾಲಕಿ ರಿತಿಕಾ ಧ್ರುವ್ ಆಯ್ಕೆಯಾಗಿದ್ದಾಳೆ.
NASAದ ಸಿಟಿಜನ್ ಸೈನ್ಸ್ ಪ್ರಾಜೆಕ್ಟ್‌ನೊಂದಿಗೆ ಪಾಲುದಾರಿಕೆ ಹೊಂದಿರುವ ಅಂತಾರಾಷ್ಟ್ರೀಯ ಖಗೋಳ ಹುಡುಕಾಟ ಸಹಯೋಗದಿಂದ (International Astronomical Search Collaboration) ಆಯೋಜಿಸಲಾದ ಕ್ಷುದ್ರಗ್ರಹ ಹುಡುಕಾಟ ಅಭಿಯಾನಕ್ಕೆ ಆಕೆಯನ್ನು ಆಯ್ಕೆ ಮಾಡಲಾಗಿದೆ. ಐತಿಹಾಸಿಕ ಮತ್ತು ಧಾರ್ಮಿಕವಾಗಿ ಮಹತ್ವದ ಸಿರ್ಪುರ್ ಪಟ್ಟಣ ಮೂಲದ ರಿತಿಕಾ ಧ್ರುವ್ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಿಂದ 60 ಕಿಮೀ ದೂರದಲ್ಲಿರುವ ಮಹಾಸಮುಂಡ್‌ನ ನಯಾಪರದ ಸ್ವಾಮಿ ಆತ್ಮಾನಂದ ಸರ್ಕಾರಿ ಇಂಗ್ಲಿಷ್ ಶಾಲೆಯಲ್ಲಿ (SAGES) 11 ನೇ ತರಗತಿ ಓದುತ್ತಿದ್ದಾಳೆ ಎಂದು ತಿಳಿದುಬಂದಿದೆ.
undefined
ಇದನ್ನು ಓದಿ: ನಾಸಾ ಚಂದ್ರಯಾನಕ್ಕೆ ತಾಂತ್ರಿಕ ದೋಷ: ಆರ್ಟೆಮಿಸ್ 1 ಯೋಜನೆ ಮುಂದೂಡಿಕೆ
ಈ ಸಂಬಂಧ ಮಾಧ್ಯಮಗಳಿಗೆ ಶಾಲೆಯ ಪ್ರಾಂಶುಪಾಲ ಅಮಿ ರುಫಸ್ “ರಿತಿಕಾ ಧ್ರುವ್ ಕ್ಷುದ್ರಗ್ರಹ ಶೋಧ ಅಭಿಯಾನದಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದಳು. ಬಾಲ್ಯದಿಂದಲೂ ಬಾಹ್ಯಾಕಾಶದಲ್ಲಿ ಆಸಕ್ತಿ ಹೊಂದಿರುವ ನಮ್ಮ ಕುತೂಹಲಕಾರಿ ಚಿಕ್ಕ ಹುಡುಗಿ ರಿತಿಕಾ ಧ್ರುವ್ ಮಿಂಚಿದ್ದಾಳೆ. ಅವಳು ತಂಡವನ್ನು ಪ್ರತಿನಿಧಿಸಿದಳು ಮತ್ತು ಬಿಲಾಸ್‌ಪುರದಲ್ಲಿ ಉತ್ತಮ ಪ್ರದರ್ಶನ ನೀಡಿದಳು" ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಈಗ ರಿತಿಕಾ ಧ್ರುವ್ ಗುರುತ್ವಾಕರ್ಷಣೆಯ ಬಲ, R 136 A 1 (ಇದುವರೆಗೆ ಕಂಡುಬಂದಿರುವ ಅತ್ಯಂತ ಬೃಹತ್ ನಕ್ಷತ್ರ), ನಕ್ಷತ್ರಗಳ ಘರ್ಷಣೆ, ಕಪ್ಪು ಕುಳಿ ಮತ್ತು ಬಾಹ್ಯಾಕಾಶದ ಬಗ್ಗೆ ಪ್ರಾಯೋಗಿಕವಾಗಿ ಇನ್ನಷ್ಟು ತಿಳಿದುಕೊಳ್ಳಲು ಅಕ್ಟೋಬರ್ 1 ರಿಂದ 6 ರವರೆಗೆ ಎಸ್‌ಡಿಎಸ್‌ಸಿಗೆ ಹೋಗುತ್ತಿದ್ದಾಳೆ’’ ಎಂದು ಪ್ರಾಂಶುಪಾಲರು ಹೇಳಿದರು.
ಇನ್ನು, ತನ್ನ ಸಾಧನೆಯ ಬಗ್ಗೆ ಖುಷಿ ವ್ಯಕ್ತಪಡಿಸಿದ ರಿತಿಕಾ ಧ್ರುವ್, ಒಂದು ವಾರದ ತರಬೇತಿಯ ನಂತರ ತಾನು ನವೆಂಬರ್ 2022 ರ ನಂತರ ಇಸ್ರೋದಲ್ಲಿ ಕ್ಷುದ್ರಗ್ರಹ-ಬೇಟೆ ಶಿಬಿರದಲ್ಲಿ ಪಾಲ್ಗೊಳ್ಳುತ್ತೇನೆ ಎಂದೂ ಹೇಳಿದಳು.
ಇದನ್ನೂ ಓದಿ: James Webb Telescope ತೆಗೆದ ಅದ್ಭುತ ಚಿತ್ರ, ಬಾಹ್ಯಾಕಾಶದಲ್ಲಿ ಕಂಡಿತು ಕೃಷ್ಣನ ಸುದರ್ಶನ ಚಕ್ರ!
ರಿತಿಕಾ ಧ್ರುವ್ ಓದುವುದರಲ್ಲಿ ಜಾಣೆಯಾಗಿದ್ದು ಮತ್ತು ಸ್ಥಿರವಾಗಿದ್ದಾಳೆ. ಅವಳು ಬಾಹ್ಯಾಕಾಶ ಮತ್ತು ಕ್ಷುದ್ರಗ್ರಹಗಳ ಆನ್‌ಲೈನ್ ರಸಪ್ರಶ್ನೆಗಳಿಗೆ ಹಾಜರಾಗುತ್ತಿದ್ದಳು ಮತ್ತು ತಜ್ಞರಿಂದ ಹೆಚ್ಚು ಚಪ್ಪಾಳೆ ಗಳಿಸುತ್ತಿದ್ದಳು. ಆದರೂ, ಬಿಲಾಸ್‌ಪುರದ ಕಾರ್ಯಕ್ರಮದಲ್ಲಿ ಆಕೆ ನೀಡಿದ ಪ್ರೆಸೆಂಟೇಷನ್ ಒಂದು ಮಹತ್ವದ ತಿರುವು ಎಂದು ಸಾಬೀತಾಯಿತು.
ಈ ಮಧ್ಯೆ, ರಿತಿಕಾ ಧ್ರುವ್ ಪೋಷಕರು ತುಂಬಾ ಬಡವರಾಗಿದ್ದು, ಆಕೆಯ ತಂದೆ ನಯಾಪರದಲ್ಲಿ ಸೈಕಲ್ ರಿಪೇರಿ ಅಂಗಡಿ ನಡೆಸುತ್ತಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.