ಕಾಶ್ಮೀರದ ಉಧಂಪುರದಲ್ಲಿ ಸ್ಫೋಟ : ಓರ್ವ ಬಲಿ, 13 ಜನರಿಗೆ ಗಾಯ

Suvarna News   | Asianet News
Published : Mar 09, 2022, 04:04 PM IST
ಕಾಶ್ಮೀರದ ಉಧಂಪುರದಲ್ಲಿ ಸ್ಫೋಟ : ಓರ್ವ ಬಲಿ, 13 ಜನರಿಗೆ ಗಾಯ

ಸಾರಾಂಶ

ಕಾಶ್ಮೀರದ ಉಧಂಪುರದದಲ್ಲಿ ಸ್ಫೋಟ ಓರ್ವ ಸಾವು,  13 ಮಂದಿಗೆ ಗಾಯ ಉಧಂಪುರದ ತಹಸೀಲ್ದಾರ್ ಕಚೇರಿ ಬಳಿ ಘಟನೆ

ಕಣಿವೆನಾಡು ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಸ್ಫೋಟವೊಂದು ಸಂಭವಿಸಿದ್ದು, ಈ ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದು  13 ಮಂದಿ ಗಾಯಗೊಂಡಿದ್ದಾರೆ. ಉಧಂಪುರದ ಸ್ಲಾಥಿಯಾ ಚೌಕ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಸಾವಿಗೀಡಾಗಿ 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ನಿಖರವಾದ ಕಾರಣ ಮತ್ತು ಮೂಲವನ್ನು ಕಂಡುಹಿಡಿಯಲು  ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಟ್ವೀಟ್ ಮಾಡಿ, 'ಉದಮ್‌ಪುರದ ತಹಸೀಲ್ದಾರ್ ಕಚೇರಿ ಬಳಿ 'ರೆಹ್ರಿ' ಸುತ್ತ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಒಬ್ಬ ಪ್ರಾಣ ಕಳೆದುಕೊಂಡಿದ್ದಾನೆ. 13 ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆ ಬಗ್ಗೆ ನಾನು ನಿಮಿಷದಿಂದ ನಿಮಿಷಕ್ಕೆ ಡಿಸಿ ಇಂದು ಚಿಬ್ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದು ಬರಲಿದೆ ಎಂದು ಅವರು ತಮ್ಮ ಟ್ವಿಟ್‌ನಲ್ಲಿ ತಿಳಿಸಿದ್ದಾರೆ.

ಭಾರತದ ಕಾಶ್ಮೀರವನ್ನು (Kashmir) ಮತ್ತೊಂದು ಪ್ಯಾಲೆಸ್ತೀನ್‌ (Palestine) ಎಂದು ರಷ್ಯಾ ಸರ್ಕಾರ ಹೇಳಿದೆ ಎಂದು ಸ್ಥಳೀಯ ಮಾಧ್ಯಮವೊಂದು ಮಾಡಿದ್ದ ವರದಿಯನ್ನು ರಷ್ಯಾ ಸರ್ಕಾರ (Russia Government) ಸ್ಪಷ್ಟವಾಗಿ ತಳ್ಳಿಹಾಕಿದೆ. ಕಾಶ್ಮೀರವು ಭಾರತ ಹಾಗೂ ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವಾಗಿದ್ದು, ಅದರಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತನ್ನ ನಿಲುವನ್ನು ಮತ್ತೊಮ್ಮೆ ಪುನರುಚ್ಛರಿಸಿದೆ. 

Vaishno Devi Stampede: ಮಾತಿನ ಚಕಮಕಿ, ನೋಡ ನೋಡುತ್ತಿದ್ದಂತೆ 12 ಸಾವು!
 

1972ರ ಶಿಮ್ಲಾ ಒಪ್ಪಂದ ಹಾಗೂ 1999 ರ ಲಾಹೋರ್‌ ಘೋಷಣೆಯ ಮೂಲಕ ಭಾರತ ಹಾಗೂ ಪಾಕ್‌ ಕಾಶ್ಮೀರದ ವಿಷಯ ಬಗೆಹರಿಸಿಕೊಳ್ಳಲು ಪ್ರಯತ್ನ ನಡೆಸಿವೆ. ರಷ್ಯಾದ ಮಾಧ್ಯಮ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದಕ್ಕೆ ಸರ್ಕಾರವು ಅದೇ ನಿಲುವನ್ನು ಹೊಂದಿದೆ ಎಂದರ್ಥವಲ್ಲ ಎಂದು ರಾಯಭಾರ ಇಲಾಖೆ ಸ್ಪಷ್ಟಪಡಿಸಿದೆ. ದ್ವಿಪಕ್ಷೀಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವ ನೀತಿಯನ್ನು ಮಾಸ್ಕೋ ಮುಂದುವರಿಸಿದೆ ಎಂದು ರಷ್ಯಾದ ರಾಯಭಾರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.  ಈ ಮಾಧ್ಯಮವು ಜಮ್ಮು ಮತ್ತು ಕಾಶ್ಮೀರದ ಸಾಕ್ಷ್ಯಚಿತ್ರದಲ್ಲಿ, ಕೇಂದ್ರಾಡಳಿತ ಪ್ರದೇಶವು 'ವಸಾಹತುಶಾಹಿ ರಾಜ್ಯ' ಆಗುತ್ತಿದೆ ಎಂದು  ಹೇಳಿದೆ. ವಿಡಿಯೋಗೆ 'ಕಾಶ್ಮೀರ್: ಪ್ಯಾಲೆಸ್ಟೈನ್ ಇನ್ ದಿ ಮೇಕಿಂಗ್' ಎಂಬ ಶೀರ್ಷಿಕೆ ನೀಡಲಾಗಿದೆ.

ಆಫ್ಘನ್‌ ಉಗ್ರರಿಗೆ ಸಿಕ್ಕ ಉಪಗೃಹ ಫೋನ್‌ಗಳು ಕಾಶ್ಮೀರದಲ್ಲಿ ಪ್ರತ್ಯಕ್ಷ! 

ಭೂಮಿಯ ಮೇಲಿರುವ ಸ್ವರ್ಗ ಎಂದರೆ ಅದು ಜಮ್ಮು ಕಾಶ್ಮೀರ. ಅದರಲ್ಲೂ ಲಡಾಖ್ ಇಂಡಸ್ ನದಿ ದಂಡೆಯ ಮೇಲಿರುವ ಅತ್ಯಂತ ಸುಂದರ ತಾಣಗಳಲ್ಲೊಂದು. ಲಡಾಖ್‌ನಲ್ಲಿ ಒಂದಲ್ಲ ಒಂದು ಬಾಲಿವುಡ್ ಚಿತ್ರಗಳು ಚಿತ್ರೀಕರಣವಾಗುವುದರಿಂದ ಲಡಾಖ್‌ನ ಸುಂದರ ತಾಣಗಳು ಪದೇ ಪದೇ ಪ್ರವಾಸಿಗರ ಮನಸ್ಸಿನ ಪಟದೊಳಗೆ ಇಳಿಯುತ್ತವೆ.   ರಾಜಧಾನಿ ಲೇಹ್ ಹೊರತುಪಡಿಸಿದರೆ ಲಡಾಖ್‌ನಲ್ಲಿ ಅತೀ ಹೆಚ್ಚು ನೋಡಬಲ್ಲ ಸುಂದರ ಪ್ರವಾಸಿ ತಾಣಗಳಿವೆ.  ಸಮುದ್ರ ಮಟ್ಟದಿಂದ 3500 ಮೀಟರ್ ಎತ್ತರದಲ್ಲಿ ಲಡಾಖ್ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್