ನಮ್ಮ ಸ್ವಾತಂತ್ರ ಸೇನಾನಿಗಳನ್ನು ನೆನೆಯಲು ಮತ್ತು ಅವರ ಪರಿಶ್ರಮ ಹಾಗೂ ತ್ಯಾಗವನ್ನು ಪ್ರತಿಯೊಬ್ಬರೂ ಮೆಲಕು ಹಾಕಬೇಕಾದರೆ, ಪ್ರತಿ ಮನೆಯಲ್ಲೂ ತ್ರಿವರ್ಣಧ್ವಜ ಹಾರಬೇಕು ಎಂಬುದು ನನ್ನ ಆಶಯ: ದೀಪಕ್
ಮಲ್ಲಿಕಾರ್ಜುನ ಕರಿಯಪ್ಪನವರ
ಬೆಳಗಾವಿ(ಜು.27): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ.13ರಿಂದ 15ರವರೆಗೆ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ’ (ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ) ಅಭಿಯಾನದ ಪರಿಕಲ್ಪನೆಯ ಬಗ್ಗೆ ಆರು ತಿಂಗಳ ಹಿಂದೆಯೇ ಕನ್ನಡಿಗರೊಬ್ಬರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. MY GOVT IDEA BOX ಆOಗಿ ಮೂಲಕ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ನಿವಾಸಿ ದೀಪಕ್ ಪರಶುರಾಮ ಬೋಚಗೇರಿ ಅವರು ‘ಕನ್ನಡಪ್ರಭ’ದೊಂದಿಗೆ ಕೆಲ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಹೊಳೆದಿದ್ದು ಹೇಗೆ?:
ಮೊದಲಿನಿಂದಲೂ ರಾಷ್ಟ್ರಧ್ವಜ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತುಂಬು ಅಭಿಮಾನ ಹೊಂದಿದ್ದ ನನಗೆ ಈ ವರ್ಷ ಅಮೃತ ಮಹೋತ್ಸವ ಆಚರಿಸುವ ಕುರಿತು ಕೇಂದ್ರ ಸರ್ಕಾರ ಘೋಷಣೆ ಮಾಡಿದಾಗಲೇ, ನಾನು ಏನಾದರೊಂದು ಹೊಸ ಉಪಾಯವನ್ನು ಸರ್ಕಾರ ನೀಡಬೇಕು ಎಂಬ ಹಂಬಲ ಮನದಲ್ಲಿ ಮೂಡಿತ್ತು. 20 ವರ್ಷಗಳಿಂದ ಆಗಸ್ಟ್ 15 ಮತ್ತು ಜನವರಿ 26ರಂದು ವರ್ಷಕ್ಕೆ ಎರಡು ಬಾರಿ ನಾನು ನನ್ನ ಮನೆಯಲ್ಲಿ ಧ್ವಜ ಹಾರಿಸುವ ಮೂಲಕ ಎಲ್ಲರಿಗೂ ಸಿಹಿಹಂಚಿ ಸಂಭ್ರಮಿಸುವುದು ನನ್ನ ಹವ್ಯಾಸವಾಗಿದೆ. ಇದನ್ನೇ ದೇಶದ ಪ್ರತಿ ಮನೆಯಲ್ಲಿ ಮಾಡಿದರೆ ಹೇಗೆ? ಎಂಬ ಕಲ್ಪನೆ ನನ್ನ ಮನಸ್ಸಿನಲ್ಲಿ ಮೂಡಿತು. ಹೀಗಾಗಿ ಕಳೆದ ಜನವರಿ 28ರಂದು ಈ ಕುರಿತು ನಾನು ಕೇಂದ್ರಕ್ಕೆ ಸಲಹೆ ನೀಡಿದೆ.ಇ-ಮೇಲ್ ಮೂಲಕ ತಲುಪಿಸಿದೆ. ಮತ್ತೊಮ್ಮೆ ಮೇಲ್ ಮಾಡಿದೆ. ಆಗ ಅವರು ನಿಮ್ಮ ಸಲಹೆಗಳನ್ನು ನಾವು ಸ್ವಾಗತಿಸಿದ್ದೇವೆ. ಇನ್ನೂ ಹೆಚ್ಚಿನ ಸಲಹೆಗಳನ್ನು ನಿರೀಕ್ಷಿಸುತ್ತೇವೆ ಎಂದು ಪ್ರತ್ಯುತ್ತರ ನೀಡಿದರು ಎನ್ನುತ್ತಾರೆ ದೀಪಕ್.
India@75: ಬ್ರಿಟಿಷರ ನಿದ್ದೆಗೆಡಿಸಿದ್ದ ಕೋಗನೂರಿನ ವೀರರು
ನಮ್ಮ ಸ್ವಾತಂತ್ರ ಸೇನಾನಿಗಳನ್ನು ನೆನೆಯಲು ಮತ್ತು ಅವರ ಪರಿಶ್ರಮ ಹಾಗೂ ತ್ಯಾಗವನ್ನು ಪ್ರತಿಯೊಬ್ಬರೂ ಮೆಲಕು ಹಾಕಬೇಕಾದರೆ, ಪ್ರತಿ ಮನೆಯಲ್ಲೂ ತ್ರಿವರ್ಣಧ್ವಜ ಹಾರಬೇಕು ಎಂಬುದು ನನ್ನ ಆಶಯ. ಹೀಗಾಗಿ ಜನವರಿ 28ರಂದು ಈ ಕುರಿತು ನಾನು ಕೇಂದ್ರಕ್ಕೆ ಸಲಹೆ ನೀಡಿದೆ. MY GOVT IDEA BOX ವಿಳಾಸಕ್ಕೆ ನಾನು ನನ್ನ ಪರಿಕಲ್ಪನೆಯನ್ನು ಮೇಲ್ ಮೂಲಕ ತಲುಪಿಸಿದೆ. ನಂತರ ನನ್ನ ಪರಿಕಲ್ಪನೆಯ ಸಲಹೆ ನೀಡಿದ್ದ ಕುರಿತು ನಾನು ಮತ್ತೊಮ್ಮೆ ಮೇಲ್ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೆ ತಂದೆ. ಆಗ ಅವರು ನಿಮ್ಮ ಸಲಹೆಗಳನ್ನು ನಾವು ಸ್ವಾಗತಿಸಿದ್ದೇವೆ. ಇನ್ನೂ ಹೆಚ್ಚಿನ ಸಲಹೆಗಳನ್ನು ನಿರೀಕ್ಷಿಸುತ್ತೇವೆ ಎಂದು ಪ್ರತ್ಯುತ್ತರ ನೀಡಿದರು ಎನ್ನುತ್ತಾರೆ ದೀಪಕ್.