75 ವರ್ಷದ ಬಳಿಕ ಸ್ವಾತಂತ್ರ್ಯಕ್ಕೆ ಹೋರಾಡಿದ ಮಠವನ್ನ ಗುರುತಿಸಿದ ಡಿಸಿ..!

By Ravi Nayak  |  First Published Aug 24, 2022, 7:10 PM IST
  • ಇದು ಏಷಿಯಾನೆಟ್ ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್!
  • 75 ವರ್ಷದ ಬಳಿಕ ಸ್ವಾತಂತ್ರ್ಯಕ್ಕೆ ಹೋರಾಡಿದ ಮಠವನ್ನ ಗುರುತಿಸಿದ ಡಿಸಿ
  •  ಜಿಲ್ಲಾಧಿಕಾರಿ ದಾನಮ್ಮನವರ್‌ ಕಾರ್ಯಕ್ಕೆ ದೇಶಭಕ್ತರಿಂದ ಸಲಾಂ!
  • ಬ್ರಿಟಿಷರ ವಿರುದ್ಧ ಸಶಸ್ತ್ರವಾಗಿ ಹೋರಾಡಿದ್ದ ಮಠವನ್ನೆ ಮರೆತಿದ್ದ ಸರ್ಕಾರ

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಆ.24): ವಿಜಯಪುರ ಜಿಲ್ಲೆಯ ಅದೊಂದು ಜಾತ್ಯಾತೀತ ಮಠ ಸ್ವಾತಂತ್ರ್ಯಕ್ಕಾಗಿ ಬ್ರೀಟಿಷರ ವಿರುದ್ಧ ಸಶಸ್ತ್ರವಾಗಿ ಹೋರಾಟ ಮಾಡಿತ್ತು. ಆದ್ರೆ ವಿಪರ್ಯಾಸದ ಸಂಗತಿ ಅಂದ್ರೆ ಸರ್ಕಾರ ಸ್ವಾತಂತ್ರ್ಯ ತಂದು ಕೊಟ್ಟ ಮಠವನ್ನೇ ಮರೆತು ಬಿಟ್ಟಿತ್ತು. ಆದ್ರೆ ವಿಜಯಪುರ(Vijayapur) ಜಿಲ್ಲೆಗೆ ಬಂದ ಅದೊಬ್ಬ ಜಿಲ್ಲಾಧಿಕಾರಿಗಳು, ಹಿಂದಿನ ಯಾವ ಅಧಿಕಾರಿಯೂ ಮಾಡದ ಕಾರ್ಯವನ್ನ ಮಾಡಿದ್ದಾರೆ. ದೇಶಭಕ್ತಿಯ ಮಠಕ್ಕೆ ಗೌರವ ಸಲ್ಲಿಸೋ ಕೆಲಸ ಮಾಡುವ ಮೂಲಕ ದೇಶಭಕ್ತರ ಹರ್ಷಕ್ಕೆ ಕಾರಣರಾಗಿದ್ದಾರೆ. ಜಿಲ್ಲಾ ಮಟ್ಟದ ಅಜಾದಿ ಕಾ ಮಹೋತ್ಸವವನ್ನು ಅದೇ ಮಠದಲ್ಲಿ ಆಚರಿಸಿ ಶ್ರೀಮಠದ ಕಾರ್ಯವನ್ನ ಕೊಂಡಾಡಿದ್ದಾರೆ.

Tap to resize

Latest Videos

undefined

ಜಿಲ್ಲಾಧಿಕಾರಿಗಳ ನಿರ್ದೇಶನ: ಆಗಸ್ಟ್‌ 22ರಂದು ಇಂಚಗೇರಿ ಮಠದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ

75 ವರ್ಷದ ಬಳಿಕ ಕೊನೆಗೂ ವಿಜಯಪುರ ಜಿಲ್ಲಾಡಳಿತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಠವನ್ನ ಗುರುತಿಸಿ ಗೌರವ ಸಲ್ಲಿಸಿದೆ. ಚಡಚಣ(Chadachana) ತಾಲೂಕಿನ ಇಂಚಗೇರಿ(Inchageri) ಮಠದ ಮಾಧವಾನಂದ ಪ್ರಭುಜೀ(Madhavananda Prabhuji)ಗಳು ಸ್ವಾತಂತ್ರ್ಯಕ್ಕಾಗಿ‌ ಬಂದೂಕು ಕಾರ್ಖಾನೆ(gun factory) ತೆರೆದು ಬ್ರಿಟಿಷ(British)ರ ವಿರುದ್ಧ ಹೋರಾಟ ಮಾಡಿದ್ದರು. ಆದ್ರೆ ಸರ್ಕಾರ ಸ್ವಾತಂತ್ರ್ಯಕ್ಕಾಗಿ ಅತ್ಯುಗ್ರವಾಗಿ ಹೋರಾಡಿದ್ದ ಮಠವನ್ನೆ ಮರೆತು ಬಿಟ್ಟಿತ್ತು. 

ಸದ್ಯ 75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ(Amrit Mahotsava)ದ ವೇಳೆ ವಿಜಯಪುರ ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರ್‌(Vijaya Mahantesh Danammanavar) ಇಂಚಗೇರಿ ಮಠದ ಮಾಧವಾನಂದ ಶ್ರೀಗಳ ಹೋರಾಟವನ್ನ ಗುರುತಿಸಿ ಗೌರವಿಸಿ ಗೌರವ ಸಲ್ಲಿಸಿದ್ದಾರೆ. ಇಂಚಗೇರಿ ಮಠದಲ್ಲಿಯೇ ಜಿಲ್ಲಾಮಟ್ಟದ "ಆಜಾದಿ ಕಾ ಅಮೃತಮಹೋತ್ಸ"ವ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳನ್ನ ಕೊಂಡಾಡುವ ಕೆಲಸ ಮಾಡಿದ್ದಾರೆ..  

ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌ ನಿರ್ದೇಶನದಂತೆ ಇಂಚಗೇರಿ ಮಠದಲ್ಲಿ ಅಮೃತ ಮಹೋತ್ಸವದ ಹಿನ್ನೆಲೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನ ಅದ್ದೂರಿಯಾಗಿ ಆಯೋಜಿಸಲಾಯಿತು. ಸ್ವಾತಂತ್ರ್ಯಕ್ಕಾಗಿ ಸಶಸ್ತ್ರವಾಗಿ ಹೋರಾಟ ಮಾಡಿದ ಅಂದಿನ ಮಠದ ಪೀಠಾಧಿಕಾರಿಗಳಾಗಿದ್ದ ಮಾಧವಾನಂದ ಪ್ರಭುಜಿಗಳ ಭಾವಚಿತ್ರ ಮೆರವಣಿಗೆ ನಡೆಯಿತು. ಮಠದ ಪೀಠಾಧಿಪತಿಗಳಾದ ರೇವಣಸಿದ್ದೇಶ್ವರ ಶ್ರೀಗಳು(Revanasiddeshwar) ತ್ರಿವರ್ಣ ಧ್ವಜದ ಮೂಲಕ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸ್ವತಃ ಪಾಲ್ಗೊಂಡ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌ ಡೊಳ್ಳು ಬಾರಿಸಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿದರು. ರೇವಣಸಿದ್ದೇಶ್ವರ ಶ್ರೀಗಳು ಡೊಳ್ಳು ಬಾರಿಸಿ ಸಾಥ್ ನೀಡಿದರು. ಸ್ವಾತಂತ್ರ್ಯಕ್ಕಾಗಿ ಇಂಚಗೇರಿ ಮಠ ಬ್ರೀಟಿಷರ ವಿರುದ್ಧ ಹೋರಾಡಿದ ಪರಿಯನ್ನ ಕೊಂಡಾಡಿದರು. ಹುಬ್ಬಳ್ಳಿ ಮಹಾದೇವಪ್ಪ ಕರೆಯಿಸಿಕೊಳ್ತಿದ್ದ ಮಾಧವಾನಂದ ಶ್ರೀಗಳು ಬ್ರಿಟಿಷರನ್ನ ಹೆದರಿಸಲು ನಡೆಸಿದ ನಾನಾ ತಂತ್ರಗಳನ್ನ, ಸಶಸ್ತ್ರ ಹೋರಾಟವನ್ನ ಸ್ಮರಿಸಿದರು. ಮಠದ ಬಗ್ಗೆ ನಮಗೆ ಮಾಹಿತಿ ಸಿಕ್ಕಿರಲಿಲ್ಲ. ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್‌ ನಲ್ಲಿ ಪ್ರಸಾರವಾದ ಹಲವು ದೃಶ್ಯ ವರದಿ,  ವೆಬ್‌ ವರದಿಗಳಿಂದ ಮಾಹಿತಿ ಸಿಕ್ಕಿತು. ಸ್ವಾತಂತ್ರ್ಯಕ್ಕಾಗಿ ಜೀವವನ್ನೆ ಪಣವಾಗಿಟ್ಟು ಹೋರಾಡಿದ ಶ್ರೀಮಠ ಹಾಗೂ ಮಾಧವಾನಂದ ಶ್ರೀಗಳಿಗೆ ಗೌರವಿಸಿದ ತೃಪ್ತಿ ಈಗ ನನಗೆ ಸಿಕ್ಕಿತು ಎಂದರು..

ಇನ್ನು ಕಳೆದ ಜೂನ್‌ ನಲ್ಲಿ ಬಿಡುಗಡೆಯಾದ "ಆಜಾದಿ ಕಾ ಅಮೃತ ಮಹೋತ್ಸವ"ದ ಸರ್ಕಾರಿ ಪಟ್ಟಿಯಲ್ಲೂ ಇಂಚಗೇರಿ ಮಠದ ಹೆಸರು ಇರಲಿಲ್ಲ. ಈ ಬಗ್ಗೆ ಏಷ್ಯಾನೆಟ್‌ ಸುವರ್ಣನ್ಯೂಸ್‌ ಸುದ್ದಿಗಳನ್ನ ಬಿತ್ತರಿಸುತ್ತಲೇ ಬಂದಿತ್ತು. ಸತತ ವರದಿಗಳನ್ನ ಗಮನಿಸಿದ ಜಿಲ್ಲಾಧಿಕಾರಿಗಳು ಮಠದ ಹೋರಾಟವನ್ನ ಗುರುತಿಸಿ ಗೌರವಿಸಲು ನಿರ್ಧರಿಸಿದ್ದರು. ಅದರಂತೆ ಇಂಚಗೇರಿ ಮಠದಲ್ಲೇ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಸಿ ಮಠಕ್ಕೆ ಸಲ್ಲಬೇಕಿದ್ದ ಸರ್ಕಾರಿ ಗೌರವವನ್ನ ನೀಡಿದ್ದಾರೆ. ಹೀಗಾಗಿ ಮಠದ ಲಕ್ಷಾಂತರ ಭಕ್ತರು ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌ ಅವರಿಗೆ ಮಠದ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

Vijayapura: ಶಾಲಾ ಪಠ್ಯದಲ್ಲಿ ಇಂಚಗೇರಿ ಮಠದ ಇತಿಹಾಸ ಸೇರಿಸಲು ಒತ್ತಾಯ!

ಒಟ್ಟಿನಲ್ಲಿ 75 ವರ್ಷಗಳಿಂದ ಸರ್ಕಾರ ಸ್ವಾತಂತ್ಯಕ್ಕಾಗಿ ಹೋರಾಡಿದ್ದ ಇಂಚಗೇರಿ ಮಠವನ್ನ ಮರೆತು ಬಿಟ್ಟಿತ್ತು. ಆದ್ರೆ ಕೊನೆಗೂ ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ ಜಿಲ್ಲಾಧಿಕಾರಿಗಳು ಮಠಕ್ಕೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..
ವಿಜಯಪುರದಿಂದ ಕ್ಯಾಮರಾಮೆನ್‌ ಲಿಂಗರಾಜ್‌ ಜೊತೆಗೆ ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

click me!