International Yoga Day: ಇತಿಹಾಸ, ಬೆಳವಣಿಗೆ, ಪ್ರಯೋಜನದ ಬಗ್ಗೆ ತಿಳಿಯಿರಿ

By Suvarna News  |  First Published Jun 17, 2022, 5:41 PM IST

ಭಾರತೀಯ ಸಂಸ್ಕೃತಿಯನ್ನು(Indian Culture) ಸಾರುವ ಭರತನಾಟ್ಯ (Bharathnatya), ಧ್ಯಾನ (Meditation), ಹಬ್ಬ (Festivals) ಹರಿದಿನಗಳು ಹೀಗೆ ಹಲವಾರು ಆಚರಣೆಗಳು ಇಂದು ವಿಶ್ವಾದ್ಯಂತ(World Wide) ಪ್ರಚಲಿತವಾಗುತ್ತಿದೆ. ಅದರಲ್ಲಿ ಬಹು ಮುಖ್ಯವಾದ ಯೋಗ(Yoga) ಸಹ ನಮ್ಮ ಪಾರಂಪರಿಕ ಆಚರಣೆಗಳಲ್ಲೊಂದು (Traditional). ಇಂದು ಜಗತ್ತಿನಾದ್ಯಂತ ಯೋಗ ದಿನವನ್ನು (Yoga Day) ಆಚರಿಸುತ್ತಿದ್ದಾರೆ. ಯೋಗ ಹುಟ್ಟುದ್ದು ಹೇಗೆ? ಅದರ ಇತಿಹಾಸ, ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.


ಭಾರತೀಯ ಸಂಸ್ಕೃತಿಯನ್ನು (Indian Culture) ಸಾರುವ ಭರತನಾಟ್ಯ (Bharathnatya), ಧ್ಯಾನ (Meditation), ಹಬ್ಬ (Festivals) ಹರಿದಿನಗಳು ಹೀಗೆ ಹಲವಾರು ಆಚರಣೆಗಳು ಇಂದು ವಿಶ್ವಾದ್ಯಂತ (World Wide) ಪ್ರಚಲಿತವಾಗುತ್ತಿದೆ. ಅದರಲ್ಲಿ ಬಹು ಮುಖ್ಯವಾದ ಯೋಗ (Yoga) ಸಹ ನಮ್ಮ ಪಾರಂಪರಿಕ ಆಚರಣೆಗಳಲ್ಲೊಂದು (Traditional). ನಮ್ಮ ನೆಲದಲ್ಲಿ ಹುಟ್ಟಿದ ಈ ವಿಧಾನವು ಋಷಿ ಮುನಿಗಳು (Sages) ಅನುಸರಿಸಿಕೊಂಡು ಬಂದಿದ್ದಾರೆ. ಯೋಗ ಪ್ರತೀ ದಿನ ಮಾಡುವುದರಿಂದ ಆರೋಗ್ಯದಲ್ಲಾಗುವ (Health) ಹಲವು ಬದಲಾವಣೆಗಳನ್ನು ಕಂಡು ಇಂದು ಜಗತ್ತಿನಾದ್ಯಂತ ಯೋಗ ದಿನವನ್ನು (Yoga Day) ಆಚರಿಸುತ್ತಿದ್ದಾರೆ. ಯೋಗ ಹುಟ್ಟುದ್ದು ಹೇಗೆ? ಅದರ ಇತಿಹಾಸ, ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಯೋಗ ಎಂಬುದು ವ್ಯಕ್ತಿಯ ಪ್ರಜ್ಞೆಯನ್ನು (Conscious) ಆಂತರಿಕ ಆತ್ಮಕ್ಕೆ (Soul) ಅರ್ಪಿಸುವ ಕ್ರಿಯೆಯನ್ನು ಸೂಚಿಸುತ್ತದೆ. ವ್ಯಕ್ತಿಯ ಮನಸ್ಸು ಮತ್ತು ದೇಹದ ನಡುವೆ ಶಾಂತಿಯನ್ನು ತರಲು ಕೇಂದ್ರೀಕರಿಸುತ್ತದೆ. ಸಂಸ್ಕೃತದ (Sanskrit) ಯುಜ್ (Yuj) ಮತ್ತು ಯುಜಿರ್ (Yujir) ಪದದಿಂದ ಯೋಗ ಶಬ್ಧ ಬೆಳೆದುಬಂದಿತು. 'ಒಗ್ಗೂಡಿಸಲು' (To Unite), 'ಒಟ್ಟಿಗೆ ಸೇರಲು '(To Join Together) ಅಥವಾ 'ಸಂಪರ್ಕ' (Connection) ಎಂಬ ಅರ್ಥ ಹೊಂದಿದೆ. ಯೋಗ ಎಂಬ ಪದದ ಅರ್ಥ ಕೇಂದ್ರೀಕರಿಸುವ ಕ್ರಿಯೆಯಿಂದ ಒಬ್ಬರಿಗೆ ಶಾಂತಿ ಮತ್ತು ಸಾಮರಸ್ಯವನ್ನು ತರುತ್ತದೆ. ಯೋಗವು ಗೊಂದಲದಿAದ ದೂರವಿರಲು ಒಂದು ತಂತ್ರವಾಗಿದೆ ಎಂದು ಪತಂಜಲ (Patanjala) ಅಭಿಪ್ರಾಯಿಸಿದ್ದಾರೆ.  

Tap to resize

Latest Videos

ಪ್ರತಿದಿನ ಒಂದು ನಿಮಿಷ ಈ ಆಸನ ಮಾಡಿದ್ರೆ ಸಾಕು, ಬೊಜ್ಜು ಕರಗಿ ಹೊಟ್ಟೆ ಫ್ಲ್ಯಾಟ್ ಆಗುತ್ತೆ

ಬೆಳೆದದ್ದು ಹೀಗೆ
ಸಾವಿರಾರು ವರ್ಷಗಳ ಹಿನ್ನಲೆ ಇರುವ ಯೋಗಕ್ಕೆ ಯಾವುದೇ ರೀತಿಯ ಧರ್ಮ (Religion) ಅಥವಾ ಧಾರ್ಮಿಕ ನಂಬಿಕೆಗಳನ್ನು (Religious Belief) ಮಾನವರಿಂದ ಅನುವಂಶಿಕವಾಗಿ ಪಡೆದಿಲ್ಲ ಎಂದು ಗುರುತಿಸಲಾಗಿದೆ. ವೇದದಲ್ಲಿ (Veda) ಯೋಗದ ಮೊದಲ ಗುರು ಶಿವ (Lord Shiva) ಎಂದು ಬಿಂಬಿಸಲಾಗಿದೆ. ಹಾಗಾಗಿ ಶಿವನನ್ನು ಆದಿಯೋಗಿ (Adiyogi) ಎಂದು ಕರೆಯಲಾಗುತ್ತದೆ ಕೂಡ. ಶಿವ ತನ್ನ ಜ್ಞಾನದ (Knowledge) ಶಕ್ತಿಯನ್ನು ಯೋಗದ ಮೂಲಕ ಸಪ್ತ ಋಷಿಗಳಿಗೆ (Saptha Rushi) ನೀಡಿದರೆಂದು ಹೇಳಲಾಗುತ್ತದೆ. ಏಷ್ಯಾ ಖಂಡ, ಉತ್ತರ ಆಫ್ರಿಕಾ (North Africa), ದಕ್ಞಿಣ ಅಮೆರಿಕಾ (South America) ಸೇರಿ ನಾನಾ ಭಾಗಗಳಿಗೆ ಸಂಚರಿಸಿ ಈ ಯೋಗದ ಜ್ಞಾನವನ್ನು ಋಷಿವರ್ಯರು ವಿಶ್ವ ಪರ್ಯಟನೆ ಮಾಡುವ ಮೂಲಕ ಎಲ್ಲೆಡೆ ಪಸರಿಸಿದರು ಎಂದು ಹೇಳಲಾಗುತ್ತದೆ. 

ಭಾರತಕ್ಕೆ ಯೋಗ
ಸಪ್ತ ಋಷಿಗಳಲ್ಲಿ ಒಬ್ಬರಾದ ಅಗಸ್ತ್ಯ (Agasthya) ಮಹರ್ಷಿಗಳು ಯೋಗದ ಜ್ಞಾನವನ್ನು ಭರತ ಖಂಡಕ್ಕೆ ಮೊದಲು ಪರಿಚಯಿಸಿ, ಭಾರತೀಯ ಸಂಪ್ರದಾಯಕ್ಕೆ(Indian Traditional) ಸೆಳೆದರು ಎಂದು ಹೇಳಲಾಗುತ್ತದೆ. ಯೋಗದ ಆರಂಭವನ್ನು ಸಿಂಧೂ-ಸರಸ್ವತಿ (Sindu-Saraswathi) ನಾಗರಿಕತೆಯಿಂದ (Civilization) ಅಭಿವೃದ್ಧಿಗೊಂಡಿತು. 500 BCE ಸುಮಾರಿಗೆ ರಚಿಸಲಾಗ ಭಗವದ್ಗೀತೆಯು (Bhagavathgeetha) ಅತ್ಯಂತ ಪ್ರಸಿದ್ಧವಾದ ಯೋಗಶಾಸ್ತçದ ಗ್ರಂಥಗಳಾಗಿವೆ. ಕ್ರಿಪೂ 1700ರ ಆಸುಪಾಸಿನ ವೇದಪೂರ್ವ ಕಾಲ ಯೋಗದ ಕುರುಹುಗಳನ್ನು ಹೊಂದಿದೆ. ನಂತರ B.C 500 ರಿಂದ A.C 800ರ ಪತಂಜಲಿಯ (Patanjali) ಯೋಗ ಸೂತ್ರದ (Yoga Suthra) ಮೂಲಕ ಯೋಗದ ವಿಜ್ಞಾನ (Yoga Science) ಹೊಸ ರೂಪ ಪಡೆಯಿತು. ಈ ಕಾಲಘಟ್ಟದಲ್ಲಿಯೇ ಪಂಚ ಮಹಾವ್ರತ (Pancha Mahavartha) ಮತ್ತು ಅಷ್ಟ ಮಗ್ಗ  (Ashta Magga) ಅಥವಾ ಎಂಟು ಪಟ್ಟು ಪಥಗಳ (Eight Pat Path) ಪರಿಕಲ್ಪನೆ ಅಸ್ತಿತ್ವಕ್ಕೆ ಬಂದಿತು.
ನಂತರದ ಶಾಸ್ತ್ರೀಯ (Cultural) ಯುಗದಲ್ಲಿ ಯೋಗವು ತಂತ್ರ ಯೋಗವನ್ನು (Tanthra Yoga) ಅಭಿವೃದ್ಧಿಪಡಿಸಿತು. ಇದು ದೇಹ (Body) ಮತ್ತು ಮನಸ್ಸನ್ನು (Mental Health) ಶುದ್ಧೀಕರಿಸುತ್ತದೆ. ಇದು ನಮ್ಮ ಆಂತರಿಕ ಆತ್ಮವನ್ನು ಭೌತಿಕ ಅಸ್ತಿತ್ವಕ್ಕೆ ಜೋಡಿಸುವ ಗಂಟು ಮುರಿಯಲು ಸಹಾಯ ಮಾಡುತ್ತದೆ.

ಆಧುನಿಕ ಯುಗದಲ್ಲಿ (Modern) ಯೋಗ ವಿಜ್ಞಾನವು 1800ರ ದಶಕದ ಕೊನೆಯಲ್ಲಿ ಮತ್ತು 1900ರ ದಶಕದ ಆರಂಭದಲ್ಲಿ ಹೊಸ ರೂಪ ಪಡೆಯಿತಲ್ಲದೆ, ಇದು ರಾಜಯೋಗದ(RajaYoga)  ಬೆಳವಣಿಗೆಗೆ ವಿವಿಧ ಯೋಗಿಗಳ ಕೊಡುಗೆಯನ್ನು ಕಂಡಿತು.  ವಿಶ್ವಾದ್ಯಂತ ಆರೋಗ್ಯ ಮತ್ತು ದೇಹ ಮತ್ತು ಆತ್ಮದ ಬೆಳವಣಿಗೆಗೆ ಯೋಗ ಅಭ್ಯಾಸ ಮಾಡಲಾಗುತ್ತಿದೆ. 

Fitness Tips : ಹೊಟ್ಟೆ ಕರಗ್ಬೇಕೆಂದ್ರೆ ಈ ಆಸನ ಮಾಡಿ

ಅಂತರಾಷ್ಟಿçÃಯ ಯೋಗ ದಿನ
ಪ್ರತೀ ವರ್ಷ ಜೂನ್ 21ರಂದು(June 21) ಅಂತಾರಾಷ್ಟ್ರೀಯ ಯೋಗ ದಿನವನ್ನು (International Yoga Day) ಆಚರಿಸಲಾಗುತ್ತದೆ. ಇದನ್ನು ಭಾರತದ ಪ್ರಧಾನ ಮಂತ್ರಿ (Indian Prime Minister) ನರೇಂದ್ರ ಮೋದಿ (Narendra Modi) 2014ರಲ್ಲಿ ಯುಎನ್ ಜನರಲ್ ಅಸೆಂಬ್ಲಿಯಲ್ಲಿ (UN General Assembly) ಭಾಷಣ ಮಾಡುವಾಗ ಮೊದಲ ಭಾರಿಗೆ ಪ್ರಸ್ತಾಪಿಸಿದರು (Proposal). ನಂತರ 2014ರ ಡಿಸೆಂಬರ್‌ನಲ್ಲಿ (December) ಯುಎನ್ ಜನರಲ್ ಅಸೆಂಬ್ಲಿಯು (UN General Assembly) ಜೂನ್ 21ರಂದು ಪ್ರತೀ ವರ್ಷ ವಿಶ್ವ ಯೋಗ ದಿನ (World Yoga Day) ಅಥವಾ ಅಂತರಾಷ್ಟಿçÃಯ ಯೋಗ ದಿನವನ್ನು(International Yoga Day) ಆಚರಿಸಲು ಘೋಷಿಸಿತು(Announce). ನಂತರ 2015 ರಿಂದ ಪ್ರತೀ ವರ್ಷ ಯೋಗ ದಿನವನ್ನು ಆಚರಿಸಲಾಗುತ್ತಿದೆ.

2022ರ ವಿಶ್ವ ಯೋಗ ದಿನದ ಥೀಮ್:
ಮಾನವೀಯತೆಗಾಗಿ (Humanity) ಯೋಗ ಎಂಬ ವಿಷಯದಡಿ (Theme) ವಿಶ್ವ ಯೋಗ ದಿನ 8ನೇ ಆವೃತ್ತಿಯನ್ನು ಆಚರಿಸಲಾಗುತ್ತಿದೆ. ಕೋವಿಡ್ ಪ್ಯಾಂಡಮಿಕ್ ಸಂದರ್ಭದಲ್ಲಿ ಜನರು ಯೋಗವನ್ನು ಮಾಡುತ್ತಿದ್ದರು. ಈ ಸಮಯದಲ್ಲಿ ಆರೋಗ್ಯದ (Health) ಮೇಲೆ ಯೋಗ ಬಹಳ ಪ್ರಭಾವ ಬೀರಿದ ಕಾರಣ ಈ ಆವೃತ್ತಿಯನ್ನು ಮಾನವೀಯತೆಗಾಗಿ ಯೋಗ ಎಂಬ ವಿಷಯ ಆರಿಸಿಕೊಳ್ಳಲಾಗಿದೆ. 

Yogasanas: ಒಳ್ಳೇದು ಅಂತ ಎಲ್ಲ ಯೋಗವೂ ನಿಮ್ಮ ದೇಹಕ್ಕ ದಕ್ಕೋಲ್ಲ

ಪ್ರಯೋಜನಗಳು:

1. ಪ್ರತೀ ದಿನ ಯೋಗ ಮಾಡುವುದರಿಂದ ಹೃದಯದ ಸಂಬಂಧಿ ಖಾಯಿಲೆಯನ್ನು (Heart Disease) ನಿಯಂತ್ರಿಸುತ್ತದೆ. ಅಲ್ಲದೆ ರಕ್ತದೊತ್ತಡ ಕಡಿಮೆ (Blood Pressure), ಪಲ್ಸ್ ರೇಟ್ (Pulse Rate), ಕೊಲೆಸ್ಟ್ರಾಲ್ ಲೆವೆಲ್ (Cholesterol Level) ಕಾಯ್ದುಕೊಳ್ಳುತ್ತದೆ.
2.ಯೋಗದಲ್ಲಿ ಕೆಲ ನಿಗದಿತ ಆಸನಗಳನ್ನು ಮಾಡುವುದರಿಂದ ದೇಹ ಫ್ಲೆಕ್ಸಿಬಲ್ (Body Flexible) ಆಗಿರುವಂತೆ ನೋಡಿಕೊಳ್ಳುತ್ತದೆ. 
3. ಉಸಿರಾಟದ ತೊಂದರೆಗಳನ್ನು (Respiration) ದೂರ ಮಾಡುತ್ತದೆ. ಯೋಗದಲ್ಲಿನ ಉಸಿರಾಟವನ್ನು ಪ್ರಾಣಾಯಾಮ (Pranayama) ಎಂದೂ ಕರೆಯುತ್ತಾರೆ. ಅಸ್ತಮಾ (Asthama) ಮತ್ತು ಶ್ವಾಸಕೋಶದ ಸಮಸ್ಯೆಯನ್ನು (Lungs Disease) ದೂರ ಮಾಡುತ್ತದೆ. 
4. ಯೋಗ ಮಾಡುವುದರಿಂದ ಒತ್ತಡ (Stress) ಕಡಿಮೆ ಮಾಡುತ್ತದೆ. ಜೊತೆಗೆ ಆತಂಕ (Anxiety), ಖಿನ್ನತೆ (Depression), ನಿದ್ರಾಹೀನತೆಗೆ (Sleeping) ಉತ್ತಮ ಔಷಧವಾಗಿದೆ.
5. ಕೆಲ ಅಧ್ಯಯನದ ಪ್ರಕಾರ ಪ್ರತೀ ದಿನ ಯೋಗ ಮಾಡುವುದರಿಂದ ಮಿದುಳಿನ ಸಮಸ್ಯೆಗಳು (Brain Diseases) ದೂರವಾಗುತ್ತದೆ. ಅಲ್ಲದೆ ನೆನಪಿನ ಶಕ್ತಿ (Memory Power) ಹೆಚ್ಚಿಸುವುದರ ಜೊತೆಗೆ ಮಾನಸಿಕ ಹೊಂದಾಣಿಕೆ, ಕಾರ್ಯ ವಿನಿಮಯ, ಡೇಟಾ ವಿಮರ್ಶೆ ಸಾಮರ್ಥ್ಯಗಳು ವೃದ್ಧಿಸುತ್ತದೆ ಎನ್ನಲಾಗಿದೆ.

click me!