ಕಾಫಿ ಇಷ್ಟಪಡದವರು ತುಂಬಾನೇ ಕಡಿಮೆ.ಆದ್ರೆ ಬೇಸಿಗೆಯಲ್ಲಿ ಕಾಫಿ ಕುಡಿಯಬೇಕು ಎಂಬ ಬಯಕೆಯಾದ್ರೂ ಬಿಸಿಗಿಂತ ಕೋಲ್ಡ್ ಕಾಫಿನೇ ಓಕೆ ಅನಿಸುತ್ತೆ. ಹಾಟ್ ಮತ್ತು ಕೋಲ್ಡ್ ಕಾಫಿಗಳಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಹಿತ?
ಬಿಸಿಲಿನ ಝಳಕ್ಕೆ ತಣ್ಣನೆಯ ಜ್ಯೂಸ್, ಐಸ್ಕ್ರೀಮ್,ಸಲಾಡ್ಗಳನ್ನುಚಪ್ಪರಿಸೋ ಬಯಕೆಯಾಗೋದು ಸಹಜ.ಇದೇ ಕಾರಣಕ್ಕೆ ಹೊರಗೆ ಹೋದ್ರೂ,ಮನೆಯಲ್ಲಿದ್ರೂ ಆಗಾಗ ತಣ್ಣನೆಯ ಜ್ಯೂಸ್ಗಳನ್ನು ಕುಡಿದು ಗಂಟಲು, ಹೊಟ್ಟೆಯನ್ನು ತಂಪು ಮಾಡಿಕೊಳ್ಳೋದು ಬೇಸಿಗೆಯಲ್ಲಿ ಕಾಮನ್. ಆದ್ರೆ ಅದೆಷ್ಟೇ ಸೆಕೆಯಿದ್ರೂ, ಸುಡುಬಿಸಿಲಿದ್ರೂ ಕೆಲವರಿಗೆ ಬಿಸಿ ಬಿಸಿ ಕಾಫಿ ಕುಡಿಯಾದಿದ್ರೆ ದಿನ ಪ್ರಾರಂಭವಾಗೋದೇ ಇಲ್ಲ. ಕೆಲವರು ಕಾಫಿ ತುಂಬಾ ಉಷ್ಣ ಪ್ರಕೃತಿಯದ್ದು, ಕೆಫಿನ್ ಹೆಚ್ಚಾದ್ರೆ ಆರೋಗ್ಯಕ್ಕೆ ಒಳ್ಳೆಯದ್ದಲ್ಲ ಎಂದು ಹೇಳುತ್ತಾರಾದ್ರೂ ಕಾಫಿಪ್ರಿಯರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಎಲ್ಲ ಸೀಸನ್ಗೂ ಕಾಫಿ ಓಕೆ ಅಂತಾನೇ ವಾದಿಸ್ತಾರೆ. ಅಷ್ಟಕ್ಕೂ ಬಿಸಿಲಿನಲ್ಲಿ ಕಾಫಿಯನ್ನೂ ತಂಪು ಮಾಡಿಕೊಂಡು ಕುಡಿಯಬಹುದಲ್ಲಾ? ಹೌದು, ಬೇಸಿಗೆಯಲ್ಲಿ ಹಾಟ್ ಕಾಫಿ ಕುಡಿಯೋಕೆ ಕಷ್ಟವಾದ್ರೆ ಕೋಲ್ಡ್ ಕಾಫಿ ಇದೆಯಲ್ಲ! ಆದ್ರೆ ಕಾಫಿಯಿಂದಾಗೋ ಆರೋಗ್ಯ ಲಾಭಗಳ ವಿಷಯ ಬಂದಾಗ ಹಾಟ್ ಕಾಫಿ ಬಗ್ಗೆ ಕೇಳಿದ್ದೇವೆಯೇ ಹೊರತು ಕೋಲ್ಡ್ ಕಾಫಿ ಕುರಿತು ಜಾಸ್ತಿ ಮಾಹಿತಿ ತಿಳಿದಿಲ್ಲ. ಹಾಗಾದ್ರೆ ಹಾಟ್ ಕಾಫಿ, ಕೋಲ್ಡ್ ಕಾಫಿಯಲ್ಲಿ ಆರೋಗ್ಯಕ್ಕೆ ಉತ್ತಮ ಯಾವುದು?
ಮುಟ್ಟಾಗಿದ್ದಾಗ ವ್ಯಾಕ್ಸೀನ್ ತಗೊಳ್ಬೋದಾ ?
ಕಾಫಿಯಿಂದ ಎಷ್ಟೆಲ್ಲ ಆರೋಗ್ಯ ಲಾಭ?
ಕಾಫಿ ಕುಡಿಯೋದ್ರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಹೃದ್ರೋಗದ ಅಪಾಯ ತಗ್ಗಿಸೋದು, ಮಧುಮೇಹ –ಟೈಪ್ 2 ಬರೋ ಸಾಧ್ಯತೆ ವಿರಳ, ಖಿನ್ನತೆ ತಗ್ಗಿಸೋದು ಸೇರಿದಂತೆ ಅನೇಕ ಆರೋಗ್ಯ ಲಾಭಗಳು ಕಾಫಿ ಕುಡಿಯೋದ್ರಿಂದ ಸಿಗುತ್ತೆ.ಇದಕ್ಕೆ ಕಾರಣ ಕಾಫಿಯಲ್ಲಿರೋ ಫಾಲಿಫೆನೊಲ್ಸ್, ಮಿನರಲ್ಸ್ ಹಾಗೂ ಆಂಟಿ ಆಕ್ಸಿಡೆಂಟ್ಸ್. ಕಾಫಿಯ ಆರೋಗ್ಯಕಾರಿ ಗುಣಗಳು ವೈಜ್ಞಾನಿಕವಾಗಿಯೂ ಸಾಬೀತಾಗಿವೆ. ಕಾಫಿ ಕುಡಿದ ತಕ್ಷಣ ಮನಸ್ಸು ಮತ್ತು ಶರೀರ ಎರಡೂ ಉಲ್ಲಾಸಗೊಳ್ಳುತ್ತವೆ.ಕಾಫಿಯಲ್ಲಿ ಮೆಗ್ನೇಷಿಯಂ ಹಾಗೂ ಪೊಟ್ಯಾಸಿಯಂ ಇರೋ ಕಾರಣ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸೋ ಜೊತೆ ಸಿಹಿ ಪದಾರ್ಥಗಳನ್ನು ತಿನ್ನೋ ಬಯಕೆಯನ್ನು ಕಡಿಮೆಗೊಳಿಸುತ್ತೆ.ಈ ಮೂಲಕ ತೂಕ ಇಳಿಕೆಗೆ ನೆರವು ನೀಡುತ್ತೆ. ಹೀಗಾಗಿ ಡಯಟ್ನಲ್ಲಿರೋರು ಕೂಡ ಕಾಫಿ ಸೇವಿಸ್ಬಹುದು.
ಸೌತೆಕಾಯಿ ತಿಂದ್ಮೇಲೆ ಈ ತಪ್ಪು ಮಾಡ್ತೀರಾ?
ಬಿಸಿಗಿಂತ ಕೋಲ್ಡ್ ಕಾಫಿನೇ ಬೆಸ್ಟ್?
ಕಾಫಿ ಆರೋಗ್ಯಕ್ಕೆ ಹಿತಕಾರಿಯಾಗಿರಲು ಅದ್ರಲ್ಲಿರೋ ಬಯೋಆಕ್ಟಿವ್ ಅಂಶಗಳು ಕಾರಣವಾಗಿವೆ. ಈ ಬಯೋಆಕ್ಟಿವ್ಗಳು ಕಾಫಿಗೆ ಐಸ್ ಹಾಕೋದ್ರಿಂದ ಬದಲಾಗೋದಿಲ್ಲ, ಬಿಸಿಯಿದ್ದಾಗ ಯಾವ ಗುಣಗಳನ್ನು ಹೊಂದಿರುತ್ತವೋ ಅದನ್ನೇ ಕೋಲ್ಡ್ನಲ್ಲೂ ಹೊಂದಿರುತ್ತವೆ. ಹೀಗಾಗಿ ಕೋಲ್ಡ್ ಆದ ತಕ್ಷಣ ಕಾಫಿ ತನ್ನ ಜೀವಸತ್ವ ಕಳೆದುಕೊಳ್ಳೋದಿಲ್ಲ. ಅಷ್ಟೇ ಅಲ್ಲದೆ, ಹೋಲಿಕೆ ಮಾಡಿ ನೋಡಿದ್ರೆ ಬಿಸಿ ಕಾಫಿಗಿಂತ ತಣ್ಣನೆಯ ಕಾಫಿಯೇ ಆರೋಗ್ಯಕ್ಕೆ ಹೆಚ್ಚು ಉತ್ತಮವೆಂದು ಹೇಳಲಾಗುತ್ತೆ. ಗ್ಯಾಸ್ಟ್ರಿಕ್ ಸಮಸ್ಯೆ ಹೊಂದಿರೋ ಜನರಿಗೆ ಕೋಲ್ಡ್ ಕಾಫಿಯೇ ಉತ್ತಮ. ಏಕೆಂದ್ರೆ ಕೋಲ್ಡ್ ಕಾಫಿ ಶೇ.67ರಷ್ಟು ಕಡಿಮೆ ಆಸಿಡಿಕ್ ಆಗಿದ್ದು, ಜೀರ್ಣಾಂಗ ವ್ಯವಸ್ಥೆಯಲ್ಲಿ ವ್ಯತ್ಯಾಯ ಉಂಟು ಮಾಡದೆ ಆರಾಮದಾಯಕ ಅನುಭವ ನೀಡುತ್ತದೆ. ಇನ್ನು ಗಡಿಬಿಡಿಯಲ್ಲಿರೋವಾಗ ಬಿಸಿಗಿಂತ ತಣ್ಣನೆಯ ಕಾಫಿಯೇ ಹಿತಕಾರಿ. ಏಕೆಂದ್ರೆ ನಾಲಿಗೆ ಸುಟ್ಟುಕೊಳ್ಳೋ ಪ್ರಮೇಯ ಎದುರಾಗೋದಿಲ್ಲ ನೋಡಿ,ಅದಕ್ಕೆ! ಬೇಸಿಗೆಯಲ್ಲಿ ತಂಪಾದ ಪಾನೀಯದ ಬಯಕೆಯಾಗೋ ಕಾಫಿ ಪ್ರಿಯರಿಗೆ ಕೋಲ್ಡ್ ಕಾಫಿಗಿಂತ ಉತ್ತಮ ಆಯ್ಕೆ ಬೇರೇನಿದೆ?
ಕರುಳಿನ ಆರೋಗ್ಯಕ್ಕೆ ತಿನ್ನಬೇಕು ಈ ಫುಡ್
ಆರೋಗ್ಯಕ್ಕೆ ಹಾನಿಯೂ ಮಾಡಬಲ್ಲದು
ಕಾಫಿಯಲ್ಲಿಆರೋಗ್ಯಕ್ಕೆ ಹಾನಿಯುಂಟು ಮಾಡೋ ಅಂಶವೂ ಇರೋ ಕಾರಣ ಅತಿಯಾದ ಸೇವನೆ ಖಂಡಿತಾ ಒಳ್ಳೆಯದ್ದಲ್ಲ. ಅದ್ರಲ್ಲೂ ಕೋಲ್ಡ್ ಕಾಫಿಯಲ್ಲಿ ಕೆಫಿನ್ ಪ್ರಮಾಣ ಹೆಚ್ಚಿರೋ ಕಾರಣ ನಿದ್ರಾಹೀನತೆ ಸಮಸ್ಯೆ ಹೊಂದಿರೋರು ಇದ್ರಿಂದ ಆದಷ್ಟು ದೂರವಿರೋದು ಒಳ್ಳೆಯದು. ರಾತ್ರಿ ವೇಳೆ ಕಾಫಿ ಕುಡಿಯಬೇಡಿ. ಕುಡಿದ್ರೂ ನಿದ್ರೆಗೆ ಜಾರೋ ಸಮಯಕ್ಕಿಂತ ಕನಿಷ್ಠ 4 ಗಂಟೆ ಮೊದಲು ಸೇವಿಸಿ. ಇನ್ನು ಕಾಫಿ ಖರೀದಿಸೋವಾಗ ಗುಣಮಟ್ಟ ಗಮನಿಸೋದು ಕೂಡ ಮುಖ್ಯ. ಕಳಪೆ ಗುಣಮಟ್ಟದ ಕಾಫಿ ಸೇವನೆಯಿಂದ ತಲೆನೋವು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಒಂದು ದಿನಕ್ಕೆ ಗರಿಷ್ಠ 400ಮಿ.ಗ್ರಾಂ ಕೆಫಿನ್ ಅಂದ್ರೆ ಸುಮಾರು 4 ಕಪ್ ಕಾಫಿ ಸೇವಿಸ್ಬಹುದು, ಅದಕ್ಕಿಂತ ಹೆಚ್ಚಾದ್ರೆ ಆರೋಗ್ಯಕ್ಕೆ ಹಾನಿ. ಹೀಗಾಗಿ ದಿನದಲ್ಲಿ ಹೆಚ್ಚೆಂದ್ರೆ 4 ಕಪ್ ಕಾಫಿ ಕುಡಿಯಬಹುದು. ಕಾಫಿ ಸೇವನೆಯಿಂದ 5-7 ವಯಸ್ಸಿನ ಮಕ್ಕಳಿಗೆ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳೋ ಸಮಸ್ಯೆ ಹೆಚ್ಚಿರೋದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ.