ಹಿರೇಕೆರೂರಿನಲ್ಲಿ ಬಿ. ಸಿ. ಪಾಟೀಲಗೆ ಅದ್ಧೂರಿ ಸ್ವಾಗತ

By Web Desk  |  First Published Nov 15, 2019, 7:30 AM IST

ಬಿಜೆಪಿ ಸೇರಿ ಹಿರೇಕೆರೂರಿಗೆ ಆಗಮಿಸಿದ ಪಾಟೀಲ|ಅಭಿಮಾನಿಗಳು, ಕಾರ್ಯಕರ್ತರ ಸಂಭ್ರಮ|ನನ್ನ ಜನ್ಮ ದಿನದಂದೇ ಹೊಸ ಪಕ್ಷ ಸೇರಿದ್ದು ಸಂತಸ ತಂದಿದೆ ಎಂದ ಬಿ.ಸಿ. ಪಾಟೀಲ|ತಾಲೂಕಿನ ಜನತೆ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ|


ಹಿರೇಕೆರೂರು(ನ.15): ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಗೊಂಡು ಹಿರೇಕೆರೂರಿಗೆ ಆಗಮಿಸಿದ ಮಾಜಿ ಶಾಸಕ ಬಿ.ಸಿ. ಪಾಟೀಲ ಅವರನ್ನು ಬಿಜೆಪಿ ಕಾಯಕರ್ತರು ಹಾಗೂ ಬಿ.ಸಿ. ಪಾಟೀಲ ಅಭಿಮಾನಿಗಳು ಬೈಕ್‌ ರಾರ‍ಯಲಿ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ. ಪಾಟೀಲ, ನನ್ನ ಜನ್ಮ ದಿನದಂದೇ ಹೊಸ ಪಕ್ಷ ಸೇರಿದ್ದು ಸಂತಸ ತಂದಿದೆ. ತಾಲೂಕಿನ ಜನತೆ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸವನ್ನು ಉಳಿಸಿಕೊಳ್ಳುವ ಕಾರ್ಯವನ್ನು ನಾನು ಮಾಡಬೇಕಿದೆ. ತಾಲೂಕಿನ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಬಿ.ಎಸ್‌. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮುಂದುವರೆಸುವ ಹೊಣೆಗಾರಿಕೆಯಿಂದ ನಾನು ಹಾಗೂ ಯು.ಬಿ. ಬಣಕಾರ ಒಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಉಪಚುನಾವಣೆಯನ್ನು ಎದುರಿಸಿ ಗೆಲ್ಲುವ ಮೂಲಕ ಈ ತಾಲೂಕಿನ ಸೇವೆಯನ್ನು ಇಬ್ಬರೂ ಸೇರಿ ಒಟ್ಟಾಗಿ ಮಾಡಲಿದ್ದೇವೆ. ಈ ತಾಲೂಕಿನ ಜನ ಇಷ್ಟು ವರ್ಷಗಳಿಂದ ಇಟ್ಟುಕೊಂಡು ಬಂದಿರುವ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ ಎಂದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ, ಬಿಜೆಪಿ ತಾಲೂಕು ಅಧ್ಯಕ್ಷ ಎಸ್‌.ಆರ್‌. ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಚಪ್ಪರದಳ್ಳಿ, ಎಸ್‌.ಎಸ್‌. ಪಾಟೀಲ, ಆರ್‌.ಎನ್‌. ಗಂಗೋಳ, ಮಹೇಂದ್ರ ಬಡಳ್ಳಿ, ಮಹೇಶ ಗುಬ್ಬಿ, ಜಿ.ಪಿ. ಪ್ರಕಾಶ, ರವಿಶಂಕರ ಬಾಳಿಕಾಯಿ, ಏಕೇಶ ಬಣಕಾರ, ನಾಗರಾಜ ಹಿರೇಮಠ, ರಾಘವೇಂದ್ರ ರಂಗಕ್ಕನವರ ಹಾಗೂ ತಾಪಂ, ಜಿಪಂ, ಪಪಂ ಸದಸ್ಯರು ಹಾಜರಿದ್ದರು.
 

click me!