ಮುಸ್ಲಿಂ ಮಹಿಳೆಯಿಂದ ಹಾಸನಾಂಬೆ ದೇವಿ ದರ್ಶನ

By Kannadaprabha NewsFirst Published Oct 22, 2019, 11:52 AM IST
Highlights

ಹಾಸನಂಬ ದೇವಿ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದು  ಭೇದ ಭಾವವಿಲ್ಲದೇ ವಿವಿಧ ಧರ್ಮೀಯರೂ ಕೂಡ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. 

ಹಾಸನ [ಅ.22]:  ಮಳೆ ನಡುವೆ ನಗರದ ಅಧಿದೇವತೆ ಶ್ರೀಹಾಸನಾಂಬ ದೇವಿ ದರ್ಶನೋತ್ಸವ  ನಡೆಯುತ್ತಿದೆ.  ಸಾವಿರಾರು ಜನರು ಅಧಿದೇವತೆ ದರ್ಶನ ಪಡೆಯುತ್ತಿದ್ದಾರೆ.  

ಹಾಸನಾಂಬ ದೇವಿ ದರ್ಶನ ಪಡೆಯಲು ಮುಸ್ಲಿಂ ಮಹಿಳೆಯರು ಹಾಗೂ ಪುರುಷರು ಬರುತ್ತಿದ್ದಾರೆ. ಸೋಮವಾರ ಮುಸ್ಲಿಮರು ಹಾಸನಾಂಬ ದೇವಿ ಗರ್ಭ ಗುಡಿಗೆ ತೆರಳಿ ಕೆಲ ಸಮಯ ವಿಶೇಷ ಪಾರ್ಥನೆ ಸಲ್ಲಿಸಿ, ಮಂಗಳಾರತಿ ಪಡೆದು ಅಧಿದೇವತೆ ಕೃಪೆಗೆ ಪಾತ್ರರಾದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನೂ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇನ್ನು ದೇವಸ್ಥಾನಕ್ಕೆ ಬರುವ ಭಕ್ತ ರಿಗೆ ಅನಾನುಕೂಲವಾಗದಂತೆ ವ್ಯವಸ್ಥೆ ಜೊತೆಗೆ ಪ್ರಸಾದ ವ್ಯವಸ್ಥೆ ಮಾಡ ಲಾಗಿದೆ. 

ಪ್ರತಿ ದಿನ ಸಂಜೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಿಗೆ ಮಡಿವಾಳ ಸಮದಾಯದವರು ಪೂಜೆ ಸಲ್ಲಿಸುವುದು ಪ್ರತೀತಿಯಾಗಿದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ದರ್ಶನ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ರಿಂದ 3 ರ ವರೆಗೆ ದೇವಿಗೆ ನೈವೇದ್ಯ ಪೂಜೆ ಕೈಂಕರ್ಯಗಳು ನೆರವೇರುತ್ತದೆ. 

click me!