ಮೇಲಾಧಿಕಾರಿ ಕಿರುಕುಳ ಸಹಿಸದೆ ವಿಷ ಸೇವಿಸಿದ KSRTC ಚಾಲಕ

Published : Nov 14, 2019, 12:20 PM ISTUpdated : Nov 14, 2019, 12:22 PM IST
ಮೇಲಾಧಿಕಾರಿ ಕಿರುಕುಳ ಸಹಿಸದೆ ವಿಷ ಸೇವಿಸಿದ KSRTC ಚಾಲಕ

ಸಾರಾಂಶ

ಮೇಲಾಧಿಕಾರಿಯ ಕಿರುಕುಳ ಸಹಿಸದೇ ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ಚಾಲಕರೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. 

ಅರಸೀಕೆರೆ (ನ.14) : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಚಾಲಕರೊಬ್ಬರು ಡಿಪೋದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಲ್ಲಿನ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ಬುಧವಾರ ನಡೆದಿದೆ. ನಗರದ ಜೇನುಕಲ್ಲು ಬಡಾವಣೆಯ ರವಿಶಂಕರ್ (42) ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ಸಂಸ್ಥೆಯ ಚಾಲಕ. 

ಘಟನೆ ವಿವರ: ಕರ್ತವ್ಯನಿರತ ಸಂದರ್ಭದಲ್ಲಿಯೇ ಡಿಪೋನ ಮ್ಯಾಕಾನಿಕಲ್ ವಿಭಾಗದ ಮೇಲಧಿಕಾರಿಗಳ ಹಾಗೂ ಚಾಲಕ ರವಿಶಂಕರ್ ನಡುವೆ ಮಾತಿನ ಚಕಮಕಿ ಜೋರಾಗಿ ನಡೆದಿದೆ. ಇದರಿಂದ ಮನನೊಂದು ರವಿಶಂಕರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ರವಿಶಂಕರ್‌ಗೆ ಚಾಲಕ ಕೆಲಸಕ್ಕೆ ಬದಲು ಇಂಧನ ತುಂಬಿಸುವ ಕೆಲಸಕ್ಕೆ ನಿಯೋಜನೆ ಮಾಡಿದ್ದರು. 

ರವಿಶಂಕರ್‌ಗೆ ಈ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬೇರೊಂದು ಕೆಲಸದ ವಿಭಾಗಕ್ಕೆ ವರ್ಗಾಯಿಸುವಂತೆ ಮನವಿ ಮಾಡಿದ್ದರೂ ಮಹೇಶ್ ಅವರು ರವಿಶಂಕರ್‌ಗೆ ಕಿರುಕುಳ ನೀಡುತ್ತಲೇ ಇದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ರವಿಶಂಕರ್ ಅವರನ್ನು ಅರಸೀಕೆರೆಯ ಜೆ.ಸಿ.ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂಬಂಧ ಪೋಷಕರು ಅರಸೀಕೆರೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಂತಹದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಓರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿತ್ತು. ಅರಸೀಕೆರೆಯ ಡಿಪೋದಲ್ಲಿ ನಡೆದ ಎರಡನೆಯ ಘಟನೆ ಇದಾಗಿದೆ. 

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ