ವಿದೇಶದ ಅತಿ ದೊಡ್ಡ ಹಿಂದೂ ದೇಗುಲ ಅಮೆರಿಕದಲ್ಲಿ ಉದ್ಘಾಟನೆ: ಆ.18ರಿಂದ ಭಕ್ತರಿಗೆ ಮುಕ್ತ ಪ್ರವೇಶ

First Published | Oct 9, 2023, 7:16 AM IST

ನ್ಯೂಜೆರ್ಸಿ: ಆಧುನಿಕ ಯುಗದಲ್ಲಿ ಭಾರತದ ಹೊರಗೆ ನಿರ್ಮಿಸಲಾಗಿರುವ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಹಿಂದೂ ದೇವಾಲಯವನ್ನು  ನಿನ್ನೆ ಉದ್ಘಾಟಿಸಲಾಯಿತು. ಆದರೆ ಭಕ್ತರಿಗೆ ಈಗ ಪ್ರವೇಶವಿಲ್ಲ. ಅ.18ರಿಂದ ಭಕ್ತರ ಪ್ರವೇಶಕ್ಕೆ ಈ ದೇಗುಲ ಮುಕ್ತವಾಗಲಿದೆ.

Akshardham New Jersey

ಬರೋಬ್ಬರಿ 183 ಎಕರೆ ಪ್ರದೇಶದಲ್ಲಿರುವ ಈ ದೇವಸ್ಥಾನವನ್ನು ಬಿಎಪಿಎಸ್‌ ಸ್ವಾಮಿನಾರಾಯಣ ಅಕ್ಷರಧಾಮ ಎಂದು ಕರೆಯಲಾಗುತ್ತದೆ.

Akshardham New Jersey

12 ವರ್ಷಕ್ಕಿಂತ ಅಧಿಕ ಕಾಲ, ಅಮೆರಿಕದಲ್ಲಿರುವ 12,500ಕ್ಕೂ ಹೆಚ್ಚು ಸ್ವಯಂಸೇವಕರು ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ. 

Tap to resize

Akshardham New Jersey

2011ರಲ್ಲಿ ನಿರ್ಮಾಣ ಪ್ರಾರಂಭವಾಗಿದ್ದ ಈ ದೇವಾಲಯವು 2023ರಲ್ಲಿ ಪೂರ್ಣಗೊಂಡಿದೆ. ದೇವಸ್ಥಾನವು 255 ಅಡಿ ಉದ್ದವಿದ್ದು, 345 ಅಡಿ ಅಗಲ ಮತ್ತು 191 ಅಡಿ ಎತ್ತರವನ್ನು ಹೊಂದಿದೆ.

Akshardham New Jersey

ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲಿನ ದೇವಸ್ಥಾನದ ವಿನ್ಯಾಸದಂತೆ ಇದನ್ನು ನಿರ್ಮಿಸಲಾಗಿದೆ. ಸುಂದರವಾದ ವಿವಿಧ ರೀತಿಯ  ಕೆತ್ತನೆಗಳನ್ನು ಈ ದೇಗುಲದಲ್ಲ ಕಾಣಬಹುದು.

Akshardham New Jersey

ಭಾರತೀಯ ಸಂಗೀತ ವಾದ್ಯಗಳು, ವಿವಿಧ ನೃತ್ಯ ಪ್ರಕಾರಗಳು ಸೇರಿದಂತೆ ಒಟ್ಟು 10,000 ಪ್ರತಿಮೆಗಳನ್ನು ದೇವಸ್ಥಾನದಲ್ಲಿ ಕೆತ್ತಲಾಗಿದೆ. 

Akshardham New Jersey

ಕಾಂಬೋಡಿಯಾದಲ್ಲಿರುವ ವಿಶ್ವದ ಅತಿ ದೊಡ್ಡ ಹಿಂದೂ ದೇವಸ್ಥಾನದ ಬಳಿಕ ಇದುವೇ ಅತಿ ದೊಡ್ಡ ದೇವಸ್ಥಾನವಾಗಿದ್ದು, ಆಕ್ಟೋಬರ್‌ 18ರಿಂದ ಭಕ್ತರ ಪ್ರವೇಶಕ್ಕೆ ಲಭ್ಯವಾಗಲಿದೆ.

Akshardham New Jersey

ದೇವಾಲಯವು ಮುಖ್ಯ ದೇವಸ್ಥಾನ ಸೇರಿದಂತೆ 12 ಉಪದೇಗುಲಗಳನ್ನು ಒಳಗೊಂಡಿದ್ದು, 9 ಶಿಖರಗಳು (ಗೋಪುರ) ಮತ್ತು ಇತರ 9 ಪಿರಮಿಡ್‌ ಆಕಾರದ ಶಿಖರಗಳನ್ನು ಹೊಂದಿದೆ.

Akshardham New Jersey

ಇದನ್ನು ಸಾಂಪ್ರಾದಾಯಿಕ ಕಲ್ಲಿನ ವಾಸ್ತುಶಿಲ್ಪದೊಂದಿಗೆ ನಿರ್ಮಿಸಲಾಗಿದೆ. ಇನ್ನು ಭಾರತದ ಪವಿತ್ರ ನದಿಗಳು, ಅಮೆರಿಕದ 50 ರಾಜ್ಯ ಸೇರಿದಂತೆ ಪ್ರಪಂಚಾದ್ಯಂತ 300ಕ್ಕೂ ಹೆಚ್ಚಿನ ಜಲಮೂಲಗಳಿಂದ ಸಂಗ್ರಹಿಸಿದ ನೀರಿನ ಬಾವಿಯನ್ನು ಇಲ್ಲಿ ನಿರ್ಮಿಸಲಾಗಿದೆ.

Latest Videos

click me!