ಬ್ರೆಜಿಲ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ನೈಜೀರಿಯಾ ಹಾಗೂ ಗಯಾನಾ ದೇಶಗಳಿಗೆ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. 3 ದೇಶಗಳಿಗೆ ಒಟ್ಟು 5 ದಿನಗಳ ಪ್ರವಾಸದಲ್ಲಿ ಮೋದಿ ಬರೋಬ್ಬರಿ 31 ದೇಶದ ನಾಯಕರ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಪೈಕಿ ಬ್ರಿಜಿಲ್‌ನ ಜಿ20 ಶೃಂಗಸಭೆಯಲ್ಲಿ ಬರೋಬ್ಬರಿ 10 ವಿಶ್ವನಾಯಕರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಬ್ರೆಜಿಲ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಲವು ಸುರಕ್ಷತೆ, ಗಡಿ ರಕ್ಷಣೆ, ವ್ಯಾಪಾರ ವಹಿವಾಟು, ಆರೋಗ್ಯ, ತಂತ್ರಜ್ಞಾನ ಸೇರಿದಂತೆ ಹಲವು ವಿಚಾರಗ ಕುರಿತು ಚರ್ಚಿಸಿದ್ದಾರೆ. ಇದೇ ವೇಳೆ 10 ವಿಶ್ವನಾಯಕರ ಜೊತೆಗೂ ದ್ವಿಪಕ್ಷೀಯ ಮಾತುಕತೆ ನಡೆಸಿ ಗಮನೆಸಳೆದಿದ್ದಾರೆ. ಇದೆ ಮೀಟಿಂಗ್‌ನಲ್ಲಿ ಯುಕೆ ಪ್ರಧಾನಿ ಕೈರ್ ಸ್ಟಾರ್ಮರ್ ಜತೆಗೂ ಮಾತುಕತೆ ನಡೆಸಿದ್ದಾರೆ
ಇತರ ವಿಶ್ವನಾಯಕರ ಪೈಕಿ ಇಂಡೋನೇಷ್ಯಾ ಪ್ರೆಸಿಡೆಂಟ್ ಪ್ರಬೊವೊ ಸುಬಿಯಾಂಟೊ; ಪೋರ್ಚುಗಲ್ ಪ್ರೈಮ್ ಮಿನಿಸ್ಟರ್ ಲೂಯಿಸ್ ಮೊಂಟೆನೆಗ್ರೊ , ಚಿಲಿ ಪ್ರೆಸಿಡೆಂಟ್ ಗೇಬ್ರಿಯಲ್ ಬೋರಿಕ್ ಮತ್ತು ಅರ್ಜೆಂಟೀನಾ ಪ್ರೆಸಿಡೆಂಟ್ ಜೇವಿಯರ್ ಮೈಲಿ ಜೊತೆಗೆ ಮೊದಲ ಬಾರಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಜಿ20 ಸಭೆಗೆ ಆಗಮಿಸಿದ ಪ್ರಮಖ ನಾಯಕರ ಜೊತೆಗೂ ಇನ್ ಫಾರ್ಮಲ್ ಮಾತುಕತೆಯನ್ನು ಮೋದಿ ಮಾಡಿದ್ದಾರೆ. ಕೆಲ ರಾಷ್ಟ್ರಗಳ ಜೊತೆ ಅಧಿಕೃತ ದ್ಪಿಪಕ್ಷೀಯ ಮಾತುಕತೆ ನಡೆಸಿದರೆ, ಸಿಂಗಾಪುರ್, ಸೌತ್ ಕೊರಿಯಾ, ಈಜಿಪ್ಟ್, ಅಮೇರಿಕಾ ಮತ್ತು ಸ್ಪೇನ್ ಲೀಡರ್ಸ್ ಜೊತೆ ಇನ್‌ಫಾರ್ಮಲ್ ಮಾತುಕತೆ ನಡೆಸಿದ್ದಾರೆ.
ಇಟಲಿ ಫ್ರಧಾನಿ ಜಾರ್ಜಿಯಾ ಮೆಲೋನಿ ಜೊತೆ ನಡೆಸಿದ ಸಭೆಯಲ್ಲಿ ಭಾರತ ಹಾಗೂ ಇಟಲಿ ನಡುವೆ ಬಾಹ್ಯಾಕಾಶ, ಇಂಧನ ಹಾಗೂ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ನಡುವಿನ ಸಹಕಾರದ ಮಾತುಕತೆ ನಡೆಸಿದ್ದಾರೆ.
ಯುರೋಪಿಯನ್ ಯೂನಿಯನ್‌ನ ಉರ್ಸುಲಾ ವಾನ್ ಡೆರ್ ಲೇಯೆನ್, ವಿಶ್ವಸಂಸ್ಥೆಯ ಅಂಟೋನಿಯೊ ಗುಟೆರೆಸ್, ವರ್ಲ್ಡ್ ಟ್ರೇಡ್ ಆರ್ಗನೈಸೇಶನ್‌ನ ನ್ಗೋಜಿ ಓಕೊಂಜೊ-ಇವೆಲಾ, ವರ್ಲ್ಡ್ ಹೆಲ್ತ್ ಆರ್ಗನೈಸೇಶನ್‌ನ ಟೆಡ್ರೋಸ್ ಅದನೊಮ್ ಘೆಬ್ರೆಯೆಸಸ್, ಐಎಂಎಫ್‌ನ ಕ್ರಿಸ್ಟಲಿನಾ ಜಾರ್ಜೀವಾ ಮತ್ತು ಗೀತಾ ಗೋಪಿನಾಥ್ ಜೊತೆಗೂ ಮೀಟಿಂಗ್ ಮಾಡಿದ್ದಾರೆ.
ಗಯಾನಾಗೆ ತೆರಳಿದ ಮೋದಿ ಗಯಾನ ಅಧ್ಯಕ್ಷರ ಡಾ. ಇರ್ಫಾನ್ ಅಲಿ ಜೊತೆ ಚರ್ಚಿಸಿದ್ದಾರೆ. ಬಳಿಕ ಸೈಂಟ್ ಲೂಸಿಕಾ ಪ್ರಧಾನಿ ಫಿಲಿಪ್ ಜಿ ಪಿಯೆರಾ ಜೊತೆ ಮೆಡಿಕಲ್ ಫಾರ್ಮಾ, ಇಂಧನ, ಆರೋಗ್ಯ ಕ್ಷೇತ್ರಗಳ ಕರಿತು ವಹಿವಾಟು ಗಟ್ಟಿಗೊಳಿಸಲು ಮಾತುಕತೆ ನಡೆಸಿದ್ದರೆ.
ಗಯಾನದಲ್ಲಿ ಪ್ರಧಾನಿ ಮೋದಿ ಡೊಮಿನಿಕಾ, ಬಹಾಮಾಸ್, ಟ್ರಿನಿಡಾಡ್ ಮತ್ತು ಟೊಬ್ಯಾಗೊ, ಸುರಿನಾಮ್, ಬಾರ್ಬಡೋಸ್, ಆಂಟಿಗುವಾ ಮತ್ತು ಬಾರ್ಬುಡಾ, ಗ್ರೆನಡಾ ಮತ್ತು ಸೇಂಟ್ ಲೂಸಿಯಾ ಲೀಡರ್ಸ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.