ಫೋಟೋಗಳಲ್ಲಿ: ಮ್ಯಾನ್ಮಾರ್- ಥೈಲ್ಯಾಂಡ್‌ನಲ್ಲಿ ರಣಭೀಕರ ಭೂಕಂಪ: ಸಾವಿನ ಕೇಕೆ, ಆಸ್ಪತ್ರೆಯಲ್ಲಿ ಜಾಗವೇ ಇಲ್ಲ!

ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ನೂರಾರು ಜನರು ಸಾವನ್ನಪ್ಪಿದ್ದಾರೆ. ಮ್ಯಾನ್ಮಾರ್‌ನ ಮಂಡಲೆ ನಗರ ಧ್ವಂಸಗೊಂಡಿದ್ದು, ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲೂ ಹಾನಿಯಾಗಿದೆ. ಇಡೀ ನಗರವೇ ನಾಶವಾಗಿದ್ದು, ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಭಾರತೀಯರು  +66 618819218 ಗೆ ಸಂಪರ್ಕಿಸಬಹುದು ಎಂದು ಭಾರತದ ರಾಯಭಾರ ಕಚೇರಿ ತಿಳಿಸಿದೆ.

many dead in myanmar thailand earthquake Disaster emergency declared gow

ಮಾರ್ಚ್ 28, ಶುಕ್ರವಾರ ಬೆಳಿಗ್ಗೆ 12 ಗಂಟೆ ಸುಮಾರಿಗೆ ಮ್ಯಾನ್ಮಾರ್‌ ಮತ್ತು ಥೈಲ್ಯಾಂಡ್‌ನಲ್ಲಿ  7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪ್ರಮುಖ ಭೂಕಂಪದ 12 ನಿಮಿಷಗಳ ನಂತರ ಅದೇ ಸ್ಥಳದಲ್ಲಿ 6.4 ತೀವ್ರತೆಯ ಮತ್ತೊಂದು ಕಂಪನ ಸಂಭವಿಸಿದೆ. ಪರಿಣಾಮ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಪ್ರಮುಖ ನಗರವಾದ ಮಂಡಲೆ ಧ್ವಂಸವಾಗಿದೆ. ರಸ್ತೆಗಳು ಇಲ್ಲದೆ ಸಂಪರ್ಕ ಕಡಿತಗೊಂಡಿದೆ. 

many dead in myanmar thailand earthquake Disaster emergency declared gow

ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲೂ ವ್ಯಾಪಕ ಹಾನಿಯಾಗಿದೆ. ಎರಡೂ ದೇಶಗಳ ಸರ್ಕಾರಗಳು ತುರ್ತು ಪರಿಸ್ಥಿತಿಯನ್ನು ಘೋಷಿಸಿವೆ. ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹಾಯವಾಣಿಯನ್ನು ತೆರೆದಿದೆ. ಅನೇಕ ಪ್ರದೇಶಗಳಲ್ಲಿ ಜನರು ತಮ್ಮ ಮನೆಗಳನ್ನು ತೊರೆದು ಹೊರಬಂದಿದ್ದು, ಅನಾಹುತ ಸಂಭವಿಸುವ ಸಾಧ್ಯತೆಯ ಬಗ್ಗೆ ಭಯಪಡುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಥೈಲ್ಯಾಂಡ್‌ನಲ್ಲಿರುವ ಭಾರತೀಯ ನಾಗರಿಕರು +66 618819218 ಗೆ ಸಂಪರ್ಕಿಸಬಹುದು ಎಂದು ರಾಯಭಾರ ಕಚೇರಿ ತಿಳಿಸಿದೆ. ಬ್ಯಾಂಕಾಕ್ ರಾಯಭಾರ ಕಚೇರಿ ಮತ್ತು ಚಿಯಾಂಗ್ ಮಾಯ್‌ನಲ್ಲಿರುವ ಭಾರತೀಯ ದೂತಾವಾಸದ ನೌಕರರು ಸುರಕ್ಷಿತವಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ. 


ಈವರೆಗೆ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೆ ಬಳಿ ಇದ್ದು,  ನೆಲದಿಂದ 10 ಕಿ.ಮೀ ಆಳದಲ್ಲಿ ಇದರ ಕೇಂದ್ರಬಿಂದು ಇತ್ತು. ನಗರದ ನೇಪಿಟಾವ್ ಸೇರಿದಂತೆ ಆರು ಪ್ರದೇಶಗಳು ಮತ್ತು ರಾಜ್ಯಗಳಲ್ಲಿ ವ್ಯಾಪಕ ವಿನಾಶಕ್ಕೆ ಕಾರಣವಾಗಿದೆ.  ಈ ರಣ ಭೀಕರ ಭೂಕಂಪಕ್ಕೆ ನೆರೆಯ ದೇಶಗಳಾದ ಭಾರತ, ಥೈಲ್ಯಾಂಡ್, ಬಾಂಗ್ಲಾದೇಶ, ಚೀನಾ ಮತ್ತು ಮೇಘಾಲಯದವರೆಗೂ ಭೂಕಂಪದ ಬಲವಾದ ಕಂಪನಗಳ ಅನುಭವವಾಗಿದೆ.
 

ಸಂಜೆ 5 ಗಂಟೆಯವರೆಗೆ ಮ್ಯಾನ್ಮಾರ್‌ನಲ್ಲಿ ಮೃತಪಟ್ಟು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮ್ಯಾನ್ಮಾರ್‌ನಲ್ಲಿ ಅನೇಕ ಕಟ್ಟಡಗಳು ನೆಲಸಮವಾಗಿದೆ. ಈ ಕಟ್ಟಡಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಿಲುಕಿಕೊಂಡಿದ್ದಾರೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದ 30 ಅಂತಸ್ತಿನ ಕಟ್ಟಡ ಕುಸಿದು 80 ಜನರು ನಾಪತ್ತೆಯಾಗಿದ್ದಾರೆ. ಅದರಲ್ಲಿ ಸುಮಾರು 400 ಜನರು ಕೆಲಸ ಮಾಡುತ್ತಿದ್ದರು.  20 ಜನರು ಲಿಫ್ಟ್ ಶಾಫ್ಟ್‌ಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣಾ ತಂಡಗಳು ಹರಸಾಹಸ ಪಡುತ್ತಿರುವಾಗ, ಕುಸಿತದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಭೂಕಂಪದಿಂದಾಗಿ, ಮ್ಯಾನ್ಮಾರ್, ಥೈಲ್ಯಾಂಡ್, ಬಾಂಗ್ಲಾದೇಶ, ಚೀನಾ ಮತ್ತು ಭಾರತದ ವಿವಿಧ ಪ್ರದೇಶಗಳಲ್ಲಿ ನೂರಾರು ಜನರು ಭಯಭೀತರಾಗಿ ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದಾರೆ. ಭಾರಿ ವಿನಾಶದಿಂದಾಗಿ, ಥೈಲ್ಯಾಂಡ್ ಪ್ರಧಾನಿ ಪಿಟೊಂಗ್ಟಾರ್ನ್ ಶಿನವಾತ್ರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
 

ಮ್ಯಾನ್ಮಾರ್‌ನ ರಾಜಮನೆತನದ ಅರಮನೆಯಾದ ಮಂಡಲೆ ಅರಮನೆ ಭಾಗಶಃ ಹಾನಿಗೊಳಗಾಗಾಗಿದೆ. ಭೂಕಂಪದಲ್ಲಿ ಸಾಗೈಂಗ್ ಪ್ರದೇಶದ ಪಟ್ಟಣವೊಂದರಲ್ಲಿನ ಸೇತುವೆ ಸಂಪೂರ್ಣವಾಗಿ ನಾಶವಾಗಿದೆ. ರಾಜಧಾನಿ ನೇಪಿಟಾವ್ ಹೊರತುಪಡಿಸಿ, ಕ್ಯುಕ್ಸೆ, ಪೈನ್ ಊ ಲ್ವಿನ್ ಮತ್ತು ಶ್ವೆಬೊಗಳಲ್ಲಿ ಹಲವು ಹಾನಿಯಾಗಿದೆ.

ಭೂಕಂಪದ ಪರಿಣಾಮವಾಗಿ 51 ವರ್ಷ ಹಳೆಯದಾದ ಅವಾ ಸೇತುವೆಯ ಕೆಲವು ಭಾಗಗಳು ಇರಾವಡ್ಡಿ ನದಿಗೆ ಕುಸಿದಿದೆ. ಇದರ ಪರಿಣಾಮ ಪ್ರಮುಖ ಸಂಪರ್ಕ ಕಡಿತಗೊಂಡಿದೆ. ಥೈಲ್ಯಾಂಡ್‌ನ ಬ್ಯಾಂಕಾಕ್ ಮತ್ತು ಚಿಯಾಂಗ್ ಮಾಯ್‌ನಲ್ಲೂ ಭೂಕಂಪದ ಅನುಭವವಾಗಿದ್ದು, ನಿವಾಸಿಗಳು ಭಯಭೀತರಾಗಿ ಕಟ್ಟಡಗಳಿಂದ ಹೊರ ಬಂದಿದ್ದಾರೆ. ಮ್ಯಾನ್ಮಾರ್ ರಾಜಧಾನಿ ನೇಪಿಡಾವ್‌ನಲ್ಲಿರುವ 1000 ಹಾಸಿಗೆಗಳ ಆಸ್ಪತ್ರೆಯು ಈಗ ತುಂಬಿ ತುಳುಕುತ್ತಿದೆ ಎಂದು ವರದಿ ತಿಳಿಸಿದೆ.
 

ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್ ಆಗಿದ್ದರೂ, ಥೈಲ್ಯಾಂಡ್‌ನಲ್ಲಿಯೂ ಬಲವಾದ ಕಂಪನಗಳು ಸಂಭವಿಸಿದವು. ಮ್ಯಾನ್ಮಾರ್ ಗಡಿಯ ಸಮೀಪ ಚೀನಾದ ಕೆಲವು ಭಾಗಗಳಲ್ಲಿ ಬಲವಾದ ಭೂಕಂಪನವಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಚೀನಾ ರೈಲು ಸಂಚಾರ ನಿಲ್ಲಿಸಿದೆ.
 

ಭಾರತದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದ್ದು, ಭಾರತದ ಕೋಲ್ಕತ್ತಾ, ಇಂಫಾಲ್, ಮೇಘಾಲಯ ಮತ್ತು ಪೂರ್ವ ಕಾರ್ಗೋ ಹಿಲ್‌ನಲ್ಲಿ ಭೂಕಂಪನದ ಅನುಭವವಾಗಿದೆ. ಢಾಕಾ, ಚಿತ್ತಗಾಂಗ್ ಸೇರಿದಂತೆ ಬಾಂಗ್ಲಾದೇಶದ ಹಲವು ಭಾಗಗಳಲ್ಲಿ 7.3 ತೀವ್ರತೆಯ ಕಂಪನ ಸಂಭವಿಸಿದೆ.

Latest Videos

vuukle one pixel image
click me!