ಸರ್ವಾಧಿಕಾರಿ ನಾಡಲ್ಲಿ ಮಕ್ಕಳು ಬ್ಲೂ ಫಿಲಂ ನೋಡಿದ್ರೆ ತಂದೆ ತಾಯಿಗೆ ಜೈಲು!
First Published | May 31, 2020, 4:46 PM ISTವಿಶ್ವವ್ಯಾಪಿ ಕೊರೋನಾ ಆತಂಕ ಮಿತಿ ಮೀರಿದೆ.ಆದರೆ ಈ ನಡುವೆ ಒಂದು ದೇಶ ಮಾತ್ರ ತನ್ನ ನೆಲದಲ್ಲಿ ಒಬ್ಬ ವ್ಯಕ್ತಿಗೂ ಕೊರೋನಾ ಅಂಟಿಲ್ಲ ಎಂದು ವಾದಿಸುತ್ತಿದೆ. ಇನ್ನು ಸೋಂಕು ತಗುಲಿದ್ದ ಒಬ್ಬ ವ್ಯಕ್ತಿಯನ್ನು ಇಲ್ಲಿನ ಸರ್ವಾಧಿಕಾರಿ ಗುಂಡು ಹಾರಿಸಿ ಕೊಂದಿದ್ದಾರೆನ್ನಲಾಗಿದೆ. ಇದಾದ ಬಳಿಕ ಉತ್ತರ ಕೊರಿಯಾದಲ್ಲಿ ಕೊರೋನಾದ ಒಂದೂ ಪ್ರಕರಣ ವರದಿಯಾಗಿಲ್ಲ ಎನ್ನಲಾಗಿದೆ. ಹೀಗಿದ್ದರೂ ಇದು ಸುಳ್ಳು ಎಂಬುವುದು ಅನೇಕರ ಅಭಿಪ್ರಾಯವಾಗಿದೆ. ಕೊರೋನಾ ನಡುವೆ ಈ ದೇಶ ಇನ್ನೂ ಅನೇಕ ವಿಚಾರವಾಗಿ ಸದ್ದು ಮಾಡಿತ್ತು. ಕಿಮ್ ಜಾಂಗ್ ಉನ್ ಮೃತಪಟ್ಟಿದ್ದಾರೆಂಬ ವಿಚಾರ ಇದರಲಲ್ಲಿ ಒಂದು. ಆದರೆ ನಾಪತ್ತೆಯಾದ ಕೆಲ ದಿನಗಳಲ್ಲೇ ಮಾಧ್ಯಮದಲ್ಲಿ ಕಾಣಿಸಿಕೊಂಡ ಕಿಮ್ ತಾನು ಬದುಕಿದ್ದೇನೆಂದು ದೃಢಪಡಿಸಿದ್ದ. ಸದ್ಯ ಈ ದೇಶ ಹೊಸ ಕಾನೂನೊಂದನ್ನು ಜಾರಿಗೊಳಿಸಿ ಜನರ ಗಮನ ತನ್ನತ್ತ ಸೆಳೆದಿದೆ. ಉತ್ತರ ಕೊರಿಯಾ ಲೈಂಗಿಕ ಚಟುವಟಿಕೆ ಹತ್ತಿಕ್ಕಲು ಹಾಗೂ ಜಪಾನೀ ಪೋರ್ನ್ ಇಂಡಸ್ಟ್ರಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಜಾರಿಗೊಳಿಸಿದೆ.