ಈ ಪ್ರಾಣಿ ಜಗತ್ತಿನ ಕೌತುಕವೇ ವಿಸ್ಮಯ. ಅವುಗಳ ಪ್ರೀತಿ, ಪ್ರೇಮ, ಪೊಸೆಸಿವ್‌ನೆಸ್, ಹೊಟ್ಟೆಕಿಚ್ಚು ಎಲ್ಲವೂ ಚೆಂದ.
ಗರ್ಲ್‌ಫ್ರೆಂಡ್ ವಾಷಿಂಗ್ ಮಷಿನ್ ಒಳಗೆ ಸಿಕ್ಕಾಕಿ ಕೊಂಡಾಗ ಪರಿತಪಿಸಿದ ಬೆಕ್ಕಿನ ಪರಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ.
ಏನು ಮಾಡುವುದು ಎಂದು ತೋಚದೇ ಗಲಿಬಿಲಿ ಗೊಂಡ ಮುಗ್ಧ ಜೀವಿಗಳ ಫೋಟೋ ವೈರಲ್ ಆಗಿವೆ.
6ವರ್ಷದ ಸೀಸರ್ ಮತ್ತು ಅದರ ಗೆಳತಿ ಕಿಂಬರ್ ಎಂದಿನಂತೆ ಆಡುತ್ತಿದ್ದವು. ಬಾಗಿಲು ತೆರೆದಿದ್ದ ವಾಷಿಂಗ್ ಮಷಿನ್ ಒಳಗೆ ಕಿಂಬರ್ ಅಕಸ್ಮಾತ್ ಹೋಗಿ ಬಿಟ್ಟಿದೆ. ಬಾಗಿಲೂ ಮುಚ್ಚಿಕೊಂಡಿದೆ.
ಅಬ್ಬಾ ಎರಡೂ ಆತಂಕಗೊಂಡಿದ್ದವು. ಈ ಬೆಕ್ಕುಗಳ ಆಟವನ್ನು ಗಮನಿಸುತ್ತಿದ್ದ ಓನರ್ ತಕ್ಷಣವೇ ಮಷಿನ್ ಬಾಗಿಲು ತೆಗೆದಿದ್ದಾರೆ.
ಜೊತೆಗೆ ಫೋಟೋಗಳನ್ನೂ ಸೆರೆ ಹಿಡಿದಿದ್ದಾರೆ. ಒಟ್ಟಿನಲ್ಲಿ ಪ್ರಾಣಿಗಳ ಪ್ರೀತಿಯ ರೀತಿ ಅನಾವರಣಗೊಂಡಿವೆ.
ಇಂಗ್ಲೆಂಡ್‌ನ ಡರ್ಬಿಶೈರ್‌ನಲ್ಲಿ ಸ್ಯಾಮ್ ಬೀಕನ್ ಎಂಬವರ ಮನೆಯಲ್ಲಿ ನಡೆದ ಘಟನೆ ಇದು. ಮನೆ ಓನರ್ ಅಡುಗೆ ಮನೆಯಲ್ಲಿದ್ದ ವೇಳೆ ಈ ಅವಾಂತರವೆಲ್ಲ ನಡೆದಿದೆ.
Suvarna News