ಕೆಲವೊಮ್ಮೆ ಜನರು ಮಹಿಳೆಯರಿಗೆ ಮೊದಲು ಮಗುವನ್ನು ಹೊಂದುವ ಬಗ್ಗೆ ಯೋಚನೆ ಮಾಡಿ, ನಂತರ ವೃತ್ತಿ ಜೀವನದ (career) ಬಗ್ಗೆ ಚಿಂತಿಸಬಹುದು ಎಂದು ಸಲಹೆ ನೀಡುತ್ತಾರೆ, ವಯಸ್ಸು ಹೆಚ್ಚಾದಷ್ಟು ಬಂಜೆತನ (Inferticlity) ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ..
ಸುತ್ತಮುತ್ತಲಿನ ಜನ ಈ ಬಂಜೆತನದ ಬಗ್ಗೆ ಹೇಳುವುದನ್ನು ಕೇಳಿ ನೀವು ಕೂಡ ಕೆಲವೊಂದು ಬಾರಿ ಈ ಬಗ್ಗೆ ಯೋಚನೆ ಮಾಡಿರಬಹುದು. ಆದರೆ ಯಾರಾದರೂ ಈ ಕುರಿತು ಮಾತನಾಡುವ ಮೊದಲು ಮತ್ತು ಮಾತನ್ನು ಕೇಳುವ ಮೊದಲು ಮಹಿಳೆಯರು (Women) ಮೊದಲಿಗೆ ಬಂಜೆತನ (infertility) ಎಂದರೇನು ಎಂದು ತಿಳಿದುಕೊಳ್ಳುವುದು ಮುಖ್ಯ.
ಬಂಜೆತನ ಎಂದರೇನು?
ದೀರ್ಘಕಾಲದಿಂದ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ಮತ್ತು ಅದೆಷ್ಟು ಬಾರಿ ಪ್ರಯತ್ನಿಸಿದರೂ ಗರ್ಭಿಣಿಯಾಗದಿದ್ದರೆ (pregnant ) ಅಥವಾ ಪದೇ ಪದೇ ಗರ್ಭಪಾತವಾಗುತ್ತಿದ್ದರೆ, ಈ ಸ್ಥಿತಿಯನ್ನು ಬಂಜೆತನದ ಸಮಸ್ಯೆ ಎಂದು ಹೆಳಲಾಗುತ್ತದೆ, ಆದರೆ ಈ ವಿಷಯಗಳಿಗೆ ವಯಸ್ಸೊಂದಿಗೆ ಮಾತ್ರ ಯಾವುದೇ ಸಂಬಂಧವಿಲ್ಲ
ಬಂಜೆತನದ ಸಮಸ್ಯೆಗೆ ಕಾರಣಗಳು ಹಲವಾರು ಇರುತ್ತವೆ. ಆದರೆ ಅವುಗಳ ಬಗ್ಗೆ ಚಿಂತಿಸಲು ಏನೂ ಇಲ್ಲ. ಇದರ ಚಿಕಿತ್ಸೆ (treatment) ಅಸ್ತಿತ್ವದಲ್ಲಿದೆ ಮತ್ತು ಚಿಕಿತ್ಸೆಯಿಂದ ಗುಣಪಡಿಸಬಹುದು. 35 ವರ್ಷದ ನಂತರ ಫಲವತ್ತತೆ ದುರ್ಬಲಗೊಳ್ಳುತ್ತದೆ ಎಂಬುದೂ ನಿಜ. ಆದರೆ ಅದಕ್ಕಾಗಿ ನೀವು ಎಗ್ಸ್ ಫ್ರೀಜ್ (freeze the eggs) ಮಾಡಬಹುದು.
ಬಂಜೆತನಕ್ಕೆ ಕಾರಣಗಳು
ಬಂಜೆತನಕ್ಕೆ ಒಂದೇ ಕಾರಣವಿಲ್ಲ, ಆದರೆ ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಬಂಜೆತನದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಮಹಿಳೆಯರಲ್ಲಿ ಹಾರ್ಮೋನ್ ಏರಿಳಿತಗಳು ಸಹ ಸಾಕಷ್ಟು ಸಾಮಾನ್ಯವಾಗಿದ್ದು, ಇದು ಮತ್ತೊಂದು ಕಾರಣವಾಗಬಹುದು.
ಎಂಡೊಮೆಟ್ರಿಯಾಸಿಸ್ ಅಥವಾ ಫೈಬ್ರಾಯ್ಡ್ (Fibroid) ಗಳಂತಹ ಅನೇಕ ರೋಗಗಳು ಸಹ ಒಂದು ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯೂ (Lifestyle) ಇದಕ್ಕೆ ಮುಖ್ಯ ಕಾರಣವಾಗಿದೆ. ಜೀವನ ಶೈಲಿ ಸರಿಯಾಗಿರದೇ ಇದ್ದರೆ, ಆರೋಗ್ಯಕರ ನಿಯಮಗಳನ್ನು ಪಾಲಿಸದೇ ಇದ್ದರೆ ಅದರಿಂದ ಬಂಜೆತನ ಕಾಣಿಸಿಕೊಳ್ಳುತ್ತದೆ.
ವೈದ್ಯರನ್ನು ಭೇಟಿಮಾಡಿ
ಸಾಮಾನ್ಯವಾಗಿ ಸ್ತ್ರೀರೋಗ ತಜ್ಞರ ಬಳಿಗೆ ಹೋಗಲು ಮರೆಯದಿರಲಿ. ದೀರ್ಘಕಾಲದಿಂದ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ, ವೈದ್ಯರು ವೈದ್ಯಕೀಯ ಮತ್ತು ಸಂತಾನೋತ್ಪತ್ತಿ (Reproduction ) ಇತಿಹಾಸದ ಬಗ್ಗೆ ಕಂಡುಕೊಳ್ಳುತ್ತಾರೆ. ನಂತರ ಅದಕ್ಕೆ ಚಿಕಿತ್ಸೆಯನ್ನು ಸಹ ಪಡೆಯಬಹುದು.
ಗರ್ಭಾಶಯ ಅಥವಾ ಸುತ್ತಮುತ್ತಲಿನ ಅಂಗಗಳಲ್ಲಿ ಏನಾದರೂ ತಪ್ಪಾಗಿದೆಯೇ ಎಂದು ಕಂಡು ಹಿಡಿಯಲು ಟ್ರಾನ್ಸ್ ವೆಜಿನಲ್ ಅಲ್ಟ್ರಾಸೌಂಡ್ (Ultrasound) ಅನ್ನು ಸಹ ಶಿಫಾರಸು ಮಾಡಬಹುದು. ಅದೇ ಸಮಯದಲ್ಲಿ, ಕೆಲವು ಹಾರ್ಮೋನ್ ಮಟ್ಟಗಳನ್ನು ಸಹ ಅಳೆಯಲಾಗುತ್ತದೆ. ಆಗ ವೈದ್ಯರು ಬಂಜೆತನದ ಸಮಸ್ಯೆ ಇದೆಯೋ ಇಲ್ಲವೋ ಎಂಬ ತೀರ್ಮಾನಕ್ಕೆ ಬರುತ್ತಾರೆ.