Published : Sep 09, 2026, 11:21 AM ISTUpdated : Sep 09, 2026, 12:37 PM IST
Instagram ನಲ್ಲಿ 1980ರ ದಶಕದ AI ಫೋಟೋ ಟ್ರೆಂಡ್ ವೈರಲ್ ಆಗಿದೆ. ಬಳಕೆದಾರರು ChatGPT ಬಳಸಿ ತಮ್ಮ ಫೋಟೋಗಳನ್ನು ರೆಟ್ರೋ ಶೈಲಿಗೆ ಪರಿವರ್ತಿಸುತ್ತಿದ್ದು, ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಈ ಲೇಖನದಲ್ಲಿ, ChatGPT ಬಳಸಿ ನೀವೂ ಹೇಗೆ 80ರ ದಶಕದ ಫೋಟೋಗಳನ್ನು ರಚಿಸಬಹುದು.
Instagram ನಲ್ಲಿ ವೈರಲ್ ಆಗುತ್ತಿರುವ '80s AI ಫೋಟೋ ಟ್ರೆಂಡ್
1980ರ ದಶಕದ ರೆಟ್ರೋ ಶೈಲಿ ಈಗ Instagram ನಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಈ ಬಾರಿ ಇದಕ್ಕೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವೂ ಸಾಥ್ ನೀಡಿದೆ. ಬಳಕೆದಾರರು ತಮ್ಮ ಇತ್ತೀಚಿನ ಫೋಟೋಗಳಿಗೆ ಕೇವಲ ಸಾಮಾನ್ಯ 'ವಿಂಟೇಜ್ ಫಿಲ್ಟರ್' ಬಳಸುವ ಬದಲು, ChatGPT ಸಹಾಯದಿಂದ 80ರ ದಶಕದ ಕಲ್ಪನಾತ್ಮಕ ಭಾವಚಿತ್ರಗಳನ್ನು (Portraits) ಸೃಷ್ಟಿಸುತ್ತಿದ್ದಾರೆ. Instagram Stories ನಲ್ಲಿರುವ "Add Yours" ಸ್ಟಿಕ್ಕರ್ ಮೂಲಕ ಈ ಟ್ರೆಂಡ್ ವೇಗವಾಗಿ ಹರಡುತ್ತಿದ್ದು, ಬಳಕೆದಾರರು ತಮ್ಮ ಪ್ರಾಂಪ್ಟ್‌ಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
27
ಅನುಶ್ರೀ, ಕೊಹ್ಲಿ ಸೇರಿ ಹಲವರು ರೆಟ್ರೋದಲ್ಲಿ ಮಿಂಚಿಂಗ್
ಜನಸಾಮಾನ್ಯರಿಂದ ಹಿಡಿದು ನಿರೂಪಕಿ ಅನುಶ್ರೀ, ಗಾಯಕ ಗಣೇಶ್ ಕಾರಂತ್, ವಿರಾಟ್ ಕೊಹ್ಲಿ ಸೇರಿ ಹಲವು ಕ್ರಿಕೆಟ್ ಸ್ಟಾರ್‌ಗಳ ಫೋಟೋಗಳು ವೈರಲ್ ಆಗುತ್ತಿದೆ.
ಅನುಶ್ರೀ ಅವರು ಪುನೀತ್ ರಾಜ್‌ಕುಮಾರ್ ಅವರ ಜೊತೆಗಿನ ಫೋಟೋ ಹಂಚಿಕೊಂಡು " ಅಂದಿಗೂ ನಾನು ಅಪ್ಪು ಸರ್ ಅಭಿಮಾನಿಯಾಗಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಒಂದೊಂದು ಫೋಟೋಗೂ ಸುಂದರ ಅಡಿಬರಹ ನೀಡಿದ್ದಾರೆ. ಕಾರಿನಲ್ಲಿ ಹೋಗಿರುವೆ ಎಂಟಿಆರ್ ದೋಸೆಗಾಗಿ ಮತ್ತೊಂದು ಫೋಟೋ, ಟಿಕೆಟ್‌ಗಾಗಿ ಟಾಕಿಸ್ ಆಚೆ ಕಾದಿರುವೆ ಎಂದು ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ.
37
ವಿಂಟೇಜ್ ಫಿಲ್ಟರ್‌ಗಿಂತ ಇದು ಹೇಗೆ ಭಿನ್ನ?
ಸಾಮಾನ್ಯ ಫಿಲ್ಟರ್‌ಗಳು ಫೋಟೋದ ಬಣ್ಣವನ್ನು ಮಾತ್ರ ಬದಲಾಯಿಸುತ್ತವೆ. ಆದರೆ, ChatGPT ಯಲ್ಲಿ ನಿಮ್ಮ ಫೋಟೋ ಅಪ್‌ಲೋಡ್ ಮಾಡಿದಾಗ ಅದು ಬಟ್ಟೆ, ಕೇಶವಿನ್ಯಾಸ, ಹಿನ್ನೆಲೆ, ಬೆಳಕು ಹಾಗೂ ಛಾಯಾಗ್ರಹಣದ ವಿನ್ಯಾಸವನ್ನೇ 1980ರ ದಶಕದ ಶೈಲಿಗೆ ಸಂಪೂರ್ಣವಾಗಿ ಪುನರ್ನಿರ್ಮಿಸುತ್ತದೆ. ಮಹಿಳೆಯರಿಗೆ ವರ್ಣರಂಜಿತ ಸೀರೆಗಳು, ದೊಡ್ಡ ಸುರುಳಿ ಕೂದಲು (Curly Hair) ಹಾಗೂ ವಿಂಟೇಜ್ ಆಭರಣಗಳು; ಪುನಃ ಪುರುಷರಿಗೆ ಆ ಕಾಲದ ವಿಶಿಷ್ಟ ಶರ್ಟ್‌ಗಳು, ಹೈ-ವೇಸ್ಟ್ ಪ್ಯಾಂಟ್‌ಗಳು, ಮೀಸೆ ಹಾಗೂ ಅಂದವಾಗಿ ಬಾಚಿದ ಕೇಶವಿನ್ಯಾಸ ಸಿಗುತ್ತದೆ. ಹಳೆಯ ಬಾಲಿವುಡ್ ಸಿನಿಮಾ ಸ್ಟಿಲ್, ಸ್ಟುಡಿಯೋ ಪೋರ್ಟ್ರೇಟ್, ಫ್ಯಾಷನ್ ಮ್ಯಾಗಜೀನ್ ಕವರ್ ಅಥವಾ ಕುಟುಂಬದ ಹಳೆಯ ಫೋಟೋ ಆಲ್ಬಮ್‌ನ ರೂಪದಲ್ಲಿ ಫೋಟೋಗಳನ್ನು ಮರುಸೃಷ್ಟಿಸಬಹುದು.
ನಿಮ್ಮ ಮುಖ ಸ್ಪಷ್ಟವಾಗಿ ಕಾಣಿಸುವ ಫೋಟೋವನ್ನು (Selfie ಅಥವಾ Portrait) ChatGPT ಗೆ ಅಪ್‌ಲೋಡ್ ಮಾಡಿ.
1980ರ ದಶಕದ ಶೈಲಿಗೆ ಮರುಸೃಷ್ಟಿಸಲು (Recreate) ಕೋರಿ ಪ್ರಾಂಪ್ಟ್ ನೀಡಿ.
ನಿಮಗಾಗುವ ಬಟ್ಟೆ, ಕೇಶವಿನ್ಯಾಸ, ಹಿನ್ನೆಲೆ, ಫಿಲ್ಮ್ ಗ್ರೇನ್ (Film Grain) ಮತ್ತು ಬೆಳಕಿನ ವಿವರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ.
ಮೊದಲ ಯತ್ನದಲ್ಲಿ ಪರಿಪೂರ್ಣವಾಗಿ ಬಾರದಿದ್ದರೆ, ಅದೇ ಚಾಟ್‌ನಲ್ಲಿ ಚಿತ್ರವನ್ನು ಮತ್ತಷ್ಟು ಪರಿಷ್ಕರಿಸಲು (Refine) ಸೂಚನೆ ನೀಡಿ.
ತಯಾರಾದ ಚಿತ್ರವನ್ನು Instagram Stories ಗೆ ಅಪ್‌ಲೋಡ್ ಮಾಡಿ, "Add Yours" ಸ್ಟಿಕ್ಕರ್ ಬಳಸಿ ಸ್ನೇಹಿತರಿಗೂ ಆಹ್ವಾನ ನೀಡಿ.
57
ನೀವು ಬಳಸಬಹುದಾದ ಕೆಲವು ChatGPT ಪ್ರಾಂಪ್ಟ್ ಉದಾಹರಣೆಗಳು
1980ರ ದಶಕದ ಭಾರತೀಯ ಮದುವೆಯ ಶೈಲಿ:
"ಈ ಫೋಟೋವನ್ನು 1980ರ ದಶಕದ ಭಾರತೀಯ ವಿವಾಹದ ಸನ್ನಿವೇಶದಲ್ಲಿ ಮರುಸೃಷ್ಟಿಸು. ಮುಖದ ಗುರುತು ಹಾಗೆಯೇ ಇರಲಿ. ಆ ಕಾಲದ ಮದುವೆಯ ಉಡುಪು, ಆಭರಣ, ಕೇಶವಿನ್ಯಾಸ ಮತ್ತು ಮೃದುವಾದ ಅನಾಲಾಗ್ ಫಿಲ್ಮ್ (Analog Film) ಗ್ರೇನ್ ಬಣ್ಣಗಳನ್ನು ಬಳಸಿ' ಎಂದು ಟೈಪ್ ಮಾಡಿದರೆ ಚಂದದ ಫೋಟೋ ಬರಲಿದೆ
ರೆಟ್ರೋ ಬೀದಿ ಛಾಯಾಗ್ರಹಣ (Retro Street Look):
“ಈ ಫೋಟೋವನ್ನು 1987ರ ಭಾರತದ ಬೀದಿಯಲ್ಲಿ ತೆಗೆದಂತೆ ಬದಲಾಯಿಸು. ನನ್ನ ಮುಖದ ಗುರುತು ಬದಲಾಗದಿರಲಿ. ಹಿನ್ನೆಲೆಯಲ್ಲಿ 80ರ ದಶಕದ ವಾಹನಗಳು, ಬೋರ್ಡ್‌ಗಳು, ಹಗಲಿನ ನೈಸರ್ಗಿಕ ಬೆಳಕು ಮತ್ತು ಹಳೆಯ ಫೋಟೋ ಮುದ್ರಣದ ವಿನ್ಯಾಸವಿರಲಿ.” ಎಂದು ಟೈಪ್ ಮಾಡಿದರೆ ಕ್ರಿಯೇಟಿವ್ ಫೋಟೋ ರೆಡಿಯಾಗಲಿದೆ.
67
ಕುಟುಂಬದ ಹಳೆಯ ಆಲ್ಬಮ್ ಶೈಲಿ:
ಇದನ್ನು 1980ರ ದಶಕದ ಮಧ್ಯಭಾಗದ ಭಾರತೀಯ ಕುಟುಂಬ ಆಲ್ಬಮ್ ಫೋಟೋದಂತೆ ಬದಲಾಯಿಸಿ. ನೈಸರ್ಗಿಕ ಮುಖಭಾವ, ಸರಳ ಒಳಾಂಗಣ ಸೆಟ್ಟಿಂಗ್, ಮೃದುವಾದ ಬೆಳಕು ಮತ್ತು ಹಳೆಯ ಕ್ಯಾಮೆರಾ ಫಿನಿಶಿಂಗ್ ನೀಡಿ. ಆಧುನಿಕ ಡಿಜಿಟಲ್ ಲುಕ್ ಇರಬಾರದು." ಎಂದು ನೀವು ಟೈಪ್ ಮಾಡಿದರೆ ಸೂಪರ್ ಫೋಟೋ ರೆಟ್ರೋ ಲುಕ್ ನಲ್ಲಿ ಬರಲಿದೆ.
77
ಗಮನಿಸಬೇಕಾದ ಪ್ರಮುಖ ಸಂಗತಿಗಳು
AI ದೋಷಗಳು: AI ಕೆಲವೊಮ್ಮೆ ಬೆರಳುಗಳು, ಆಭರಣಗಳ ಶೈಲಿ, ಬಟ್ಟೆಯ ವಿನ್ಯಾಸ ಅಥವಾ ಮುಖದ ಸೂಕ್ಷ್ಮ ವಿವರಗಳಲ್ಲಿ ಸಣ್ಣಪುಟ್ಟ ಚೇಂಜಸ್ ಬರಬಹುದು.
ಐತಿಹಾಸಿಕ ನಿಖರತೆಯಿಲ್ಲ: ಇವು ಸೃಜನಶೀಲ ಕಲ್ಪನೆಗಳೇ ಹೊರತು 100% ಐತಿಹಾಸಿಕವಾಗಿ ನಿಖರವಾದ ಸ್ಪಷ್ಟವಾದ ದಾಖಲೆಗಳನ್ನು ನೀಡುವುದಿಲ್ಲ.
ಗೌಪ್ಯತೆ ಮತ್ತು ಭದ್ರತೆ: ಖಾಸಗಿ ದಾಖಲೆಗಳು ಅಥವಾ ಇತರರ ಒಪ್ಪಿಗೆಯಿಲ್ಲದ ಫೋಟೋಗಳನ್ನು AI ಗೆ ಅಪ್‌ಲೋಡ್ ಮಾಡುವುದನ್ನು ನಿಲ್ಲಿಸಿ.