ಟೋಕಿಯೋ ಒಲಿಂಪಿಕ್ಸ್‌ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

First Published Jul 23, 2021, 4:44 PM IST

ಟೋಕಿಯೋ: ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಇದೀಗ ಅಧಿಕೃತ ಚಾಲನೆ ಸಿಕ್ಕಿದೆ. ಕೊರೋನಾ ಭೀತಿಯ ನಡುವೆಯೇ ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆಗೆ ಚಾಲನೆ ಸಿಕ್ಕಿದೆ. ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದಿಂದ 127 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದು, 18 ವಿವಿಧ ಸ್ಪರ್ಧೆಗಳಲ್ಲಿ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ ನೋಡಿ

206 ದೇಶ

206 ದೇಶ: ಒಲಿಂಪಿಕ್ಸ್‌ನಲ್ಲಿ ಒಟ್ಟು 206 ದೇಶಗಳ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ.

11000+ ಸ್ಪರ್ಧಿಗಳು

11000+ ಸ್ಪರ್ಧಿಗಳು: ಈ ಒಲಿಂಪಿಕ್ಸ್‌ನಲ್ಲಿ 11000ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

33 ಕ್ರೀಡೆ:

33 ಕ್ರೀಡೆ: ಒಟ್ಟು 33 ಕ್ರೀಡೆಗಳು ನಡೆಯಲಿದ್ದು, ಒಟ್ಟು 339 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

42 ಕ್ರೀಡಾಂಗಣ:

42 ಕ್ರೀಡಾಂಗಣ: ಒಟ್ಟು 42 ಕ್ರೀಡಾಂಗಣಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

7 ದಿನ

17 ದಿನ: ಒಲಿಂಪಿಕ್ಸ್‌ ಅಧಿಕೃತವಾಗಿ 17 ದಿನಗಳ ಕಾಲ ನಡೆಯಲಿದೆ. ಜು.21ಕ್ಕೇ ಕೆಲ ಪ್ರಾಥಮಿಕ ಹಂತದ ಸ್ಪರ್ಧೆಗಳು ಆರಂಭಗೊಂಡಿವೆ. ಅದನ್ನೂ ಸೇರಿಸಿ ಕ್ರೀಡಾಕೂಟ 19 ದಿನಗಳ ಕಾಲ ನಡೆಯಲಿದೆ.

339 ಚಿನ್ನದ ಪದಕ:

339 ಚಿನ್ನದ ಪದಕ: ಟೋಕಿಯೋ 2020ಯಲ್ಲಿ ಒಟ್ಟು 339 ಚಿನ್ನದ ಪದಕಗಳನ್ನು ಗೆಲ್ಲುವ ಅವಕಾಶ ಇದೆ.

552 ಸ್ಪರ್ಧಿಗಳು:

552 ಸ್ಪರ್ಧಿಗಳು: ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತಿರುವ ಜಪಾನ್‌ ಅತಿಹೆಚ್ಚು ಎಂದರೆ 552 ಕ್ರೀಡಾಪಟುಗಳನ್ನು ಕಣಕ್ಕಿಳಿಸಲಿದೆ.

09 ದೇಶಗಳು:

09 ದೇಶಗಳು: ಆ್ಯಂಡೊರ್ರಾ, ಬರ್ಮುಡಾ, ಬ್ರೂನಿ, ಡೊಮಿನಿಕಾ, ಲೆಸೊಥೊ, ಮೌರಿಟಾನಿಯಾ, ನೌರು, ಸೊಮಾಲಿಯಾ, ತುವಾಲು ರಾಷ್ಟ್ರಗಳು ತಲಾ ಇಬ್ಬರು ಸ್ಪರ್ಧಿಗಳನ್ನು ಕಣಕ್ಕಿಳಿಸಲಿವೆ.

click me!