PKL Auction 2022: ಪ್ರೊ ಕಬಡ್ಡಿ ಲೀಗ್‌ ಹರಾಜಿಗೆ ಡೇಟ್‌ ಫಿಕ್ಸ್‌, ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್

First Published Jul 23, 2022, 10:07 AM IST

ನವದೆಹಲಿ: ಬಹುನಿರೀಕ್ಷಿತ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಗೆ ಈಗಿನಿಂದಲೇ ಭರ್ಜರಿ ಸಿದ್ದತೆಗಳು ಆರಂಭವಾಗಿವೆ. 2022ನೇ ಸಾಲಿನ ಪಿಕೆಎಲ್ ಹರಾಜಿನ ದಿನಾಂಕ ಪ್ರಕಟವಾಗಿದ್ದು, ಎಲ್ಲಾ 12 ಫ್ರಾಂಚೈಸಿಗಳು ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ರಣತಂತ್ರ ಹೆಣೆಯಲಾರಂಭಿಸಿವೆ. ಈ ಬಾರಿಯ ಹರಾಜು ಎಲ್ಲಿ? ಯಾವಾಗ ನಡೆಯಲಿದೆ. ಎಷ್ಟು ಜನರನ್ನು ರೀಟೈನ್ ಮಾಡಿಕೊಳ್ಳಬಹುದು

9ನೇ ಆವೃತ್ತಿಯ ಪ್ರೊ ಕಬಡ್ಡಿ ಆಟಗಾರರ ಹರಾಜು ಆಗಸ್ಟ್ 5, 6ರಂದು ಮುಂಬೈನಲ್ಲಿ ನಡೆಯಲಿದೆ ಎಂದು ಆಯೋಜಕರು ಶುಕ್ರವಾರ ಪ್ರಕಟಿಸಿದ್ದಾರೆ. ಈ ಬಾರಿ ಹರಾಜಿನಲ್ಲಿ 500ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 

ಆಟಗಾರರನ್ನು ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ಎಂದು ನಾಲ್ಕು ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ. ಗರಿಷ್ಠ ಮೂಲಬೆಲೆ 30 ಲಕ್ಷ ರುಪಾಯಿ ಹಾಗೂ ಕನಿಷ್ಠ ಮೂಲಬೆಲೆ 6 ಲಕ್ಷ ರುಪಾಯಿಗಳೆಂದು ನಿಗದಿ ಪಡಿಸಲಾಗಿದೆ.

ಅಂತಿಮ ನಿಮಿಷದಲ್ಲಿ ತಿರುಗೇಟು ನೀಡಿದ ಬೆಂಗಾಲ್ ಸ್ಕೋಲ್ 25-25 ಅಂಕಗಳಲ್ಲಿ ಸಮಬಲ

‘ಎ’ ವಿಭಾಗದ ಆಟಗಾರರ ಮೂಲಬೆಲೆ 30 ಲಕ್ಷ ರುಪಾಯಿ, ‘ಬಿ’ ವಿಭಾಗಕ್ಕೆ 20 ಲಕ್ಷ ರುಪಾಯಿ, ‘ಸಿ’ ವಿಭಾಗಕ್ಕೆ 10 ಲಕ್ಷ ರುಪಾಯಿ ಮತ್ತು ‘ಡಿ’ ವಿಭಾಗಕ್ಕೆ 6 ಲಕ್ಷ ರುಪಾಯಿ ನಿಗದಿ ಮಾಡಲಾಗಿದೆ. ಈ ವಿಭಾಗಗಳಲ್ಲಿ ಆಲ್ರೌಂಡರ್‌ಗಳು, ಡಿಫೆಂಡರ್‌ಗಳು ಮತ್ತು ರೈಡರ್‌ಗಳು ಇರಲಿದ್ದಾರೆ. 

ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಖೇಲೋ ಇಂಡಿಯಾ ವಿವಿ ಗೇಮ್ಸ್‌ನಲ್ಲಿ ಅಗ್ರ 2 ಸ್ಥಾನಗಳನ್ನು ಪಡೆದ ತಂಡಗಳಲ್ಲಿದ್ದ ಒಟ್ಟು 24 ಆಟಗಾರರಿಗೂ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
 

Pro Kabaddi

ಉಳಿಸಿಕೊಳ್ಳಬಹುದಾದ ಆಟಗಾರರೆಷ್ಟು?

ಪ್ರತಿ ಫ್ರಾಂಚೈಸಿಯು ಎಲೈಟ್‌ ಆಟಗಾರರ ವಿಭಾಗದಲ್ಲಿ ಗರಿಷ್ಠ 6, ನ್ಯೂ ಯಂಗ್‌ ಪ್ಲೇಯರ್‌(ಎನ್‌ವೈಪಿ) ವಿಭಾಗದಲ್ಲಿ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ತಂಡಗಳಲ್ಲಿ ಉಳಿಯದ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. 
 

ಆಟಗಾರರ ಖರೀದಿಗೆ ಪ್ರತಿ ತಂಡವು ಗರಿಷ್ಠ 4.4 ಕೋಟಿ ರು. ಖರ್ಚು ಮಾಡಬಹುದಾಗಿದೆ. ಆಟಗಾರರನ್ನು ಉಳಿಸಿಕೊಳ್ಳಲು ವೆಚ್ಚ ಮಾಡಿದ ಬಳಿಕ ಉಳಿದ ಹಣವನ್ನು ಹರಾಜಿನಲ್ಲಿ ಆಟಗಾರರ ಖರೀದಿಗೆ ಬಳಸಬಹುದಾಗಿದೆ.

Pro Kabaddi

9ನೇ ಆವೃತ್ತಿಯ ಪಿಕೆಎಲ್ ಹರಾಜಿಗೂ ಮುನ್ನ ಪ್ರದೀಪ್ ನರ್ವಾಲ್, ಪವನ್ ಕುಮಾರ್ ಶೆರಾವತ್, ನವೀನ್ ಕುಮಾರ್, ಸಚಿನ್ ತನ್ವಾರ್ ಅವರಂತಹ ಆಟಗಾರರನ್ನು ತಮ್ಮ ತಂಡದಲ್ಲೇ ಉಳಿಯಲಿದ್ದಾರೆಯೇ ಅಥವಾ ಬೇರೆ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆಯೇ ಎನ್ನುವ ಕುತೂಹಲ ಜೋರಾಗಿದೆ.

Pro kabaddi League Champion Dabag delhi 2022

ಕಳೆದ ವರ್ಷ ರೌಂಡ್ ರಾಬಿನ್ ಮಾದರಿಯಲ್ಲಿ ನಡೆದ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ದಬಾಂಗ್ ಡೆಲ್ಲಿ ಮೊದಲ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಕಳೆದ ಬಾರಿ 12 ಕಬಡ್ಡಿ ತಂಡಗಳು ಪ್ರೊ ಕಬಡ್ಡಿ ಟ್ರೋಫಿಗಾಗಿ ಸೆಣಸಾಡಿದ್ದವು.

click me!