ಸೇನಾ ಸಮವಸ್ತ್ರದಲ್ಲಿ ಹೀಗೆ ಮಿಂಚುತ್ತಾರೆ ಲೆಫ್ಟಿನೆಂಟ್ ಕರ್ನಲ್ ಎಂ. ಎಸ್ ಧೋನಿ!

First Published Jun 7, 2019, 4:21 PM IST

ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಧೋನಿ ಧರಿಸಿದ್ದ ಕೀಪಿಂಗ್ ಗ್ಲೌಸ್‌ನಲ್ಲಿ IA ಚಿಹ್ನೆ ಇದ್ದ ವಿಚಾರ ಭಾರೀ ಸೌಂಡ್ ಮಾಡುತ್ತಿದೆ. ಒಂದೆಡೆ ಐಸಿಸಿ ಇದನ್ನು ವಿರೋಧಿಸುತ್ತಿದ್ದರೆ, ಇತ್ತ ಧೋನಿ ಅಭಿಮಾನಿಗಳು ಹಾಗೂ ಬಿಸಿಸಿಐ ಮಹಿ ಬೆನ್ನಿಗೆ ನಿಂತಿದೆ. ಆದರೆ ಟೀಂ ಇಂಡಿಯಾದ ಮಾಜಿ ನಾಯಕ, ಭಾರತೀಯ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನೆಂಟ್‌ ಕರ್ನಲ್‌ ಕೂಡಾ ಆಗಿದ್ದಾರೆ ಎಂಬುವುದು ನಮಗೆ ತಿಳಿದಿರಲೇಬೇಕಾದ ವಿಚಾರ. 

ಐಸಿಸಿ ವಿಶ್ವಕಪ್ 2019 ಆರಂಭಗೊಂಡಿದ್ದು, ಎಲ್ಲೆಡೆ ಕ್ರಿಕೆಟ್ ಜ್ವರ ಆವರಿಸಿಕೊಂಡಿದೆ. ಆದರೀಗ ಇವೆಲ್ಲದರ ನಡುವೆ ಧೋನಿ ಗ್ಲೌಸ್ ವಿಚಾರ ಭಾರೀ ಸದ್ದು ಮಾಡುತ್ತಿದೆ.
undefined
ಜೂನ್ 5ರಂದು ಭಾರತ ಹಾಗೂ ದಕ್ಷಿಣ ಆಫ್ರಿಕಾದ ನಡುವೆ ನಡೆದ ಪಂದ್ಯದ ವೇಳೆ ಟೀಂ ಇಂಡಿಯಾದ ಮಾಜಿ ನಾಯಕ ಎಂ. ಎಸ್ ಧೋನಿ ಗ್ಲೌಸ್ ಮೇಲೆ ಪ್ಯಾರಾಚೂಟ್‌ ರೆಜಿಮೆಂಟ್‌ನ ‘ಬಲಿದಾನ್‌’ ಚಿಹ್ನೆ ಇದ್ದಿದ್ದು ಭಾರೀ ವಿವಾದ ಹುಟ್ಟು ಹಾಕಿದೆ.
undefined
ಐಸಿಸಿಯ ಉಪಕರಣ ಮತ್ತು ಪೋಷಾಕು ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ಯಾವುದೇ ರಾಜಕೀಯ, ಜಾತಿ ಇಲ್ಲವೇ ಜನಾಂಗೀಯ ಚಟುವಟಿಕೆಗಳಿಗೆ ಸಂಬಂಧಪಟ್ಟ ಸಂದೇಶಗಳನ್ನು ಪ್ರದರ್ಶನ ಮಾಡುವಂತ್ತಿಲ್ಲ ಎಂಬ ಕಾರಣವನ್ನು ನೀಡಿ ಇದನ್ನು ವಿರೋಧಿಸಿದೆ.
undefined
ಆದರೆ ಈ ವಿರೋಧದ ಬೆನ್ನಲ್ಲೇ ಧೋನಿ ಅಭಿಮಾನಿಗಳು ಐಸಿಸಿ ಮನವಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ಧೋನಿ ತನ್ನ ಗ್ಲೌಸ್ ಮೇಲಿರುವ ಬಲಿದಾನ್ ಚಿಹ್ನೆಯನ್ನು ತೆಗೆಯದಂತೆ ಒತ್ತಾಯಿಸಿದ್ದಾರೆ. ಸದ್ಯ #DhoniKeepTheGlove ಎಂಬ ಅಭಿಯಾನ ಟ್ವಿಟರ್‌ನಲ್ಲಿ ಟ್ರೆಂಡ್ ಪಡೆಯಲಾರಂಭಿಸಿದೆ.
undefined
2011ರ ವಿಶ್ವಕಪ್ ಪಂದ್ಯದ ವೇಳೆ ಪಾಕ್ ಆಟಗಾರರಿಗೆ ಮೈದಾನಲ್ಲೇ ನಮಾಜ್ ಮಾಡಿದ್ದು ಸರಿಯಾದರೆ ಧೋನಿ ಸೇನಾ ಚಿಹ್ನೆ ಯಾಕೆ ಧರಿಸಬಾರದು ಎಂದೂ ಪ್ರಶ್ನಿಸಿದ್ದಾರೆ.
undefined
ಬಿಸಿಸಿಐ ಹಾಗೂ ಐಪಿಎಲ್‌ನ ಚೇರ್ಮನ್ ರಾಜೀವ್ ಶುಕ್ಲಾ ಕೂಡಾ ಧೋನಿಯನ್ನು ಸಮರ್ಥಿಸಿಕೊಂಡಿದ್ದು, ಧೋನಿ ಗ್ಲೌಸ್ ಮೇಲೆ ಬಲಿದಾನ್ ಚಿಹ್ನೆ ಇರುವುದು ಯಾವುದೇ ನಿಯಮ ಉಲ್ಲಂಘಿಸುವುದಿಲ್ಲ ಎಂದಿದ್ದಾರೆ.
undefined
ಧೋನಿ ಬಳಸಿರುವ ಗ್ಲೌಸ್ ಮೇಲಿನ ಸೇನೆ ಚಿಹ್ನೆ ಯಾರನ್ನೂ ಪ್ರಚೋದಿಸುವಂತಿಲ್ಲ. ಇದರಲ್ಲಿ ವಾಣಿಜ್ಯ ಉದ್ದೇಶವೂ ಇಲ್ಲ. ಹೀಗಾಗಿ ನಿಮ್ಮ ನಿರ್ಧಾರವನ್ನು ಪುನರ್‌ ಪರಿಶೀಲಿಸಬೇಕು ಎಂದು ಬಿಸಿಸಿಐ COA ವಿನೋದ್ ರೈ ICCಗೆ ಪತ್ರ ಬರೆದಿದ್ದಾರೆ.
undefined
ಧೋನಿ ಭಾರತೀಯ ಸೇನೆ ಪರವಾಗಿ ಅಪಾರ ಗೌರವ ಹೊಂದಿದ್ದಾರೆ. ಅವರೊಬ್ಬ ಕ್ರಿಕೆಟರ್ ಮಾತ್ರವಲ್ಲದೇ, ಭಾರತೀಯ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನೆಂಟ್‌ ಕರ್ನಲ್‌ ಕೂಡಾ ಆಗಿದ್ದಾರೆ.
undefined
ತನಗೆ ಸೈನಿಕನಾಗಬೇಕೆಂಬ ಕನಸಿತ್ತು. ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಬಳಿಕ ಸೇನೆಯಲ್ಲಿ ಸೇವೆ ಸಲ್ಲಿಸುವ ಇಚ್ಛೆ ಹೊಂದಿರುವುದಾಗಿ ಧೋನಿ ತಮ್ಮ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
undefined
2011ರಲ್ಲಿ ಧೋನಿ ಟೆರಿಟೋರಿಯಲ್ ಆರ್ಮಿಯ ಪ್ಯಾರಾಚೂಟ್‌ ರೆಜಿಮೆಂಟ್‌ ಸೇರಿದ್ದರು.
undefined
ಅಲ್ಲದೇ ಎಂ. ಎಸ್‌. ಧೋನಿ 2015ರಲ್ಲಿ ಪ್ಯಾರಾ ಬ್ರಿಗೇಡ್‌ನಿಂದ ತರಬೇತಿ ಪಡೆದಿದ್ದಾರೆ.
undefined
ಪ್ಯಾರಾ ಆರ್ಮಿಯಡಿಯಲ್ಲಿ 9 ವಿಶೇಷ ಪಡೆ, 2 ಟೆರಿಟೋರಿಯಲ್ ಆರ್ಮಿ[ಪ್ರಾದೇಶಿಕ ಸೈನ್ಯ] ಹಾಗೂ ಒಂದು ರಾಷ್ಟ್ರೀಯ ರೈಫಲ್ಸ್‌ನ ಬೆಟಾಲಿಯನ್ ಕಾರ್ಯ ನಿರ್ವಹಿಸುತ್ತದೆ.
undefined
ತುರ್ತು ಸಂದರ್ಭಗಳಲ್ಲಷ್ಟೇ ಪ್ಯಾರಾ ಆರ್ಮಿ ಯೋಧರ ಸೇವೆ ಪಡೆಯಲಾಗುತ್ತದೆ.
undefined
ಪ್ಲೇನ್ ಹೈಜಾಕ್ ಸೇರಿದಂತೆ ಅತ್ಯಂತ ವಿಷಮ ಪರಿಸ್ಥಿತಿಯನ್ನೆದುರಿಸಲು ಈ ಯೋಧರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.
undefined
click me!