ಒಲಿಂಪಿಕ್ಸ್‌ನಲ್ಲಿ ಮಿಂಚಿದ ಲಕ್ಷ್ಯ ಸೇನ್ ವಿದ್ಯಾರ್ಹತೆ ಎಷ್ಟು..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

Published : Aug 18, 2024, 12:50 PM IST

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್‌ ತಾರೆ ಲಕ್ಷ್ಯ ಸೇನ್, ಅದ್ಭುತ ಪ್ರದರ್ಶನದ ಮೂಲಕ ಮಿಂಚಿದ್ದರು. ನಾವಿಂದು ಲಕ್ಷ್ಯ ಸೇನ್ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ ಬನ್ನಿ  

PREV
18
ಒಲಿಂಪಿಕ್ಸ್‌ನಲ್ಲಿ ಮಿಂಚಿದ ಲಕ್ಷ್ಯ ಸೇನ್ ವಿದ್ಯಾರ್ಹತೆ ಎಷ್ಟು..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಸೆಮಿಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಆದರೆ ಅಂತಿಮ ನಾಲ್ಕರಘಟ್ಟದಲ್ಲಿ ಮುಗ್ಗರಿಸುವ ಮೂಲಕ ಪದಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದರು.

28

ಪ್ಯಾರಿಸ್ ಒಲಿಂಪಿಕ್ಸ್‌ನ ಗ್ರೂಪ್‌ ಹಂತದಲ್ಲಿ ಲಕ್ಷ್ಯ ಸೇನ್‌ ಮೊದಲ ಗೆಲುವನ್ನು ಆಯೋಜಕರು ಡಿಲೀಟ್‌ ಮಾಡಿದ್ದರು. ಎದುರಾಳಿ ಆಟಗಾರ ಮುಂದಿನ ಪಂದ್ಯಕ್ಕೂ ಮುನ್ನ ಗಾಯಗೊಂಡು ಕೂಟದಿಂದ ಹಿಂದೆ ಸರಿದಿದ್ದರು. ಹೀಗಾಗಿ ಲಕ್ಷ್ಯ ಗೆಲುವನ್ನು ಡಿಲೀಟ್ ಮಾಡಲಾಗಿತ್ತು.

38

ಇನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಲ್ಲ ನೆಚ್ಚಿನ ಶಟ್ಲರ್ ಆಗಿ ಗುರುತಿಸಿಕೊಂಡಿದ್ದ ಲಕ್ಷ್ಯ ಸೇನ್, ಸೆಮಿಫೈನಲ್ ಪ್ರವೇಶಿಸುವ ಮೂಲಕ, ಈ ಸಾಧನೆ ಮಾಡಿದ ಭಾರತದ ಮೊದಲ ಪುರುಷ ಶಟ್ಲರ್ ಎನ್ನುವ ದಾಖಲೆ ನಿರ್ಮಿಸಿದ್ದರು.

48
Lakshya Sen

ಇನ್ನು ಭಾರತದ ಭರವಸೆಯ ಶಟ್ಲರ್ ಲಕ್ಷ್ಯ ಸೇನ್ ಅವರ ಎಜುಕೇಷನ್‌ ಬಗ್ಗೆ ನಿಮಗೂ ಕುತೂಹಲವಿರಬಹುದು ಅಲ್ಲವೇ?. ನಾವಿಂದು ಲಕ್ಷ್ಯ ಸೇನ್ ಅವರ ವಿದ್ಯಾರ್ಹತೆಯ ಬಗ್ಗೆ ವಿವರಿಸುತ್ತೇವೆ ನೋಡಿ.

58
Lakshya Sen

ಲಕ್ಷ್ಯ ಸೇನ್ ಉತ್ತರಖಂಡದ ಅಲ್ಮೋರ್‌ನಲ್ಲಿ ಆಗಸ್ಟ್‌ 16, 2001ರಲ್ಲಿ ಜನಿಸಿದರು.  ಲಕ್ಷ್ಯ ಸೇನ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉತ್ತರಾಖಂಡ್‌ನ ಬೀರ್‌ಸಾಹೆಬ್‌ ಸೀನಿಯರ್ ಸಕೆಂಡರಿ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದರು.  

68

ಕಂಚಿನ ಪದಕ ಜಸ್ಟ್‌ ಮಿಸ್: ಹೌದು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ನಲ್ಲಿ ಮಗ್ಗರಿಸಿದ ಲಕ್ಷ್ಯ ಸೇನ್, ಇದಾದ ಬಳಿಕ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲೂ ಆಘಾತಕಾರಿ ಸೋಲು ಕಾಣುವ ಮೂಲಕ ಒಲಿಂಪಿಕ್ಸ್ ಪದಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದರು.

78

ಇನ್ನು ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ವಿಕ್ಟರ್ ಆಕ್ಸೆಲ್ಸನ್, ಮುಂಬರುವ ಲಾಸ್ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಲಕ್ಷ್ಯ ಚಿನ್ನದ ಪದಕ ಗೆಲ್ಲಬಲ್ಲ ನೆಚ್ಚಿನ ಶಟ್ಲರ್ ಎನಿಸಲಿದ್ದಾರೆ ಎಂದು ಈಗಾಗಲೇ ಭವಿಷ್ಯ ನುಡಿದಿದ್ದಾರೆ.

88

ಮುಂಬರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಲಕ್ಷ್ಯ ಸೇನ್ ಒಲಿಂಪಿಕ್ ಪದಕ ಗೆದ್ದು ಇತಿಹಾಸ ನಿರ್ಮಿಸಲಿ ಎನ್ನುವುದು ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ

Read more Photos on
click me!

Recommended Stories