ದೇಶದ ಹೆಮ್ಮೆ ಹಿಮಾ ದಾಸ್‌ ಡಿಎಸ್‌ಪಿಯಾಗಿ ಅಧಿಕಾರ ಸ್ವೀಕಾರ..!

Suvarna News   | Asianet News
Published : Feb 27, 2021, 10:04 AM IST

ನವದೆಹಲಿ: ಇದು ಕಲ್ಲರಳಿ ಹೂವಾದ ಕಥೆ. ಬಡತನದ ಬೇಗೆಯಿಂದ ಬೆಂದು ತನ್ನ ಓಟದ ಮೂಲಕವೇ ಇಂದು ಇಡೀ ದೇಶದ ಮನೆಮಗಳಾಗಿ ಗುರುತಿಸಿಕೊಂಡಿರುವ ಖ್ಯಾತ ಅಥ್ಲೀಟ್‌ ಹಿಮಾ ದಾಸ್‌ ಈಗ ಅಸ್ಸಾಂ ಪೊಲೀಸ್‌ ಇಲಾಖೆಯಲ್ಲಿ ಉಪ ಪೊಲೀಸ್‌ ವರಿಷ್ಠಾಧಿಕಾರಿ(ಡಿಎಸ್‌ಪಿ)ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದರೊಂದಿಗೆ ಹಿಮಾ ದಾಸ್‌ ಬಾಲ್ಯದಲ್ಲಿ ಕಂಡಂತಹ ಕನಸು ನನಸಾಗಿದೆ. ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ ದೇಶದ ಹೆಮ್ಮೆಯ ಕ್ರೀಡಾಪಟುವಿಗೆ ನೇಮಕಾತಿ ಪತ್ರ ನೀಡುವ ಮೂಲಕ ಸನ್ಮಾನಿಸಿದ್ದಾರೆ.  

PREV
19
ದೇಶದ ಹೆಮ್ಮೆ ಹಿಮಾ ದಾಸ್‌ ಡಿಎಸ್‌ಪಿಯಾಗಿ ಅಧಿಕಾರ ಸ್ವೀಕಾರ..!

ದೇಶದ ಅತ್ಯಂತ ಪ್ರಮುಖ ಅಥ್ಲೀಟ್‌ ಹಿಮಾ ದಾಸ್‌ ಕೊನೆಗೂ ಬಾಲ್ಯದಲ್ಲಿ ತಾವು ಕಂಡಂತಹ ಕನಸನ್ನು ಕ್ರೀಡೆಯ ಮೂಲಕ ನನಸಾಗಿಸಿಕೊಂಡಿದ್ದಾರೆ.

29

ಬಾಲ್ಯದಲ್ಲಿದ್ದಾಗಲೇ ಹಿಮಾ ದಾಸ್ ಮುಂದೆ ತಾವೊಂದು ದಿನ ಪೊಲೀಸ್‌ ಅಧಿಕಾರಿಯಾಗಬೇಕು ಎಂದು ಕನಸು ಕಂಡಿದ್ದರಂತೆ, ಇದೀಗ ಡಿಎಸ್‌ಪಿ ಹುದ್ದೆ ಪಡೆಯುವ ಮೂಲಕ ಸುಂದರ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.

39

ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಹಿಮಾ ದಾಸ್ ಶಾಲೆಯಲ್ಲಿ ಓದುತ್ತಿದ್ದಾಗಲೇ ಪೊಲೀಸ್‌ ಹುದ್ದೆಗೆ ಸೇರಬೇಕು ಎಂದು ಬಯಸಿದ್ದೆ, ನನ್ನ ಅಮ್ಮ ಸಹಾ ನಾನು ಪೊಲೀಸ್‌ ಆಗಲು ಹಾರೈಸಿದ್ದರು ಎಂದು ಹೇಳಿದ್ದಾರೆ.

49

ದುರ್ಗಾ ಪೂಜೆಯ ಸಂದರ್ಭದಲ್ಲೆಲ್ಲಾ ನನ್ನಮ್ಮ ನನಗೆ ಆಟಿಕೆಯ ಗನ್‌ ತಂದುಕೊಡುತ್ತಿದ್ದರು. ಜನರಿಗೆ ಒಳ್ಳೆಯ ಸೇವೆ ಮಾಡಲು ಪೊಲೀಸ್‌ ಇಲಾಖೆ ಸೇರು ಎಂದು ಪ್ರೋತ್ಸಾಹಿಸುತ್ತಿದ್ದರು ಎಂದು ಹಿಮಾ ಹೇಳಿದ್ದಾರೆ.

59

ರಾಜ್ಯದ ಸ್ಥಿತಿಗತಿ ಮತ್ತಷ್ಟು ಉತ್ತಮ ಪಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ, ಆದರೆ ಅದೆಲ್ಲದಕ್ಕಿಂತ ಹೆಚ್ಚಾಗಿ ನಾನು ಕ್ರೀಡೆಯಲ್ಲೇ ಮುಂದುವರೆಯುತ್ತೇನೆ. ಯಾಕೆಂದರೆ ಕ್ರೀಡೆಯಿಂದಲೇ ಇದೆಲ್ಲವೂ ಸಿಕ್ಕಿದೆ ಎಂದು ಹೇಳಿದ್ದಾರೆ.

69

ಹರ್ಯಾಣದಂತೆ ಅಸ್ಸಾಂ ರಾಜ್ಯದಲ್ಲೂ ಮತ್ತಷ್ಟು ಉತ್ತಮ ಕ್ರೀಡಾಪ್ರತಿಭೆಗಳನ್ನು ಗುರುತಿಸಿ, ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸುವಂತೆ ಮಾಡಲು ಪ್ರಯತ್ನಿಸುವುದಾಗಿ ಹಿಮಾ ದಾಸ್ ಹೇಳಿದ್ದಾರೆ.

79

ಹಿಮಾ ದಾಸ್‌ ರನ್ನು ಡಿಎಸ್‌ಪಿಯಾಗಿ ನೇಮಿಸಿದ್ದು ಹಲವು ಯುವ ಜನತೆಗೆ ಕ್ರೀಡೆಯಲ್ಲಿ ಶ್ರೇಷ್ಠ ಸಾಧನೆ ಮಾಡಲು ಸ್ಪೂರ್ತಿ ನೀಡುವ ವಿಶ್ವಾಸವಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ ಹೇಳಿದ್ದಾರೆ.

89

ಹಿಮಾ ದಾಸ್‌ 2018ರಲ್ಲಿ ನಡೆದ ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ 400 ಮೀಟರ್ ಓಟದಲ್ಲಿ ಪಾಲ್ಗೊಂಡು ಚಾಂಪಿಯನ್‌ ಆಗುವ ಮೂಲಕ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು.

99

ಇದಾದ ಬಳಿಕ ಹಿಮಾ ಜಕಾರ್ತಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನ ಮಹಿಳೆಯರ 4*400 ಮೀಟರ್‌ ರಿಲೇ, ಮಿಶ್ರ ರಿಲೇಯಲ್ಲಿ ಚಿನ್ನದ ಪದಕ ಗೆದ್ದ ತಂಡದ ಸದಸ್ಯೆಯಾಗಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories