ನಿಖಿಲ್ ಕುಮಾರಸ್ವಾಮಿ ಹಾಗೂ ಹೆಂಡತಿ ರೇವತಿ ಜೆಡಿಎಸ್ ರೆಬೆಲ್ ಶಾಸಕ ಜಿಟಿ ದೇವೇಗೌಡ ಅವರ ಮನೆಗೆ ಭೇಟಿ ನೀಡಿದ್ದಾರೆ.
ಈ ವೇಳೆ ಜಿಟಿ ದೇವೇಗೌಡ ಅವರ ಮನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಲಂಚ್ ಮಾಡಿದ್ದಾರೆ.
ಮೈಸೂರಿನ ಜಿಟಿಡಿ ನಿವಾಸಕ್ಕೆ ಪತ್ನಿ ಸಮೇತ ನಿಖಿಲ್ ಕುಮಾರ್ಸ್ವಾಮಿ ಭೇಟಿ ನೀಡಿದ್ದು ಅವರ ಮನೆಯಲ್ಲೇ ಊಟ ಸೇವಿಸಿದ್ದಾರೆ. ಬಳಿಕ ಜಿಟಿಡಿ ಜೊತೆ ಕೆಲ ಹೊತ್ತು ಚರ್ಚೆ ನಡೆಸಿದ ನಿಖಿಲ್ ಎದುರು ಇತ್ತೀಚೆಗಿನ ಪಕ್ಷದ ನಾಯಕರ ನಡೆ ವಿರುದ್ಧ ಜಿಟಿಡಿ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದ.
ಆತಿಥ್ಯ ನೆಪದಲ್ಲಿ ನಿಖಿಲ್ ಕುಮಾರಸ್ವಾಮಿ, ಪಕ್ಷದ ಹಿರಿಯ ನಾಯಕರ ಮನವೊಲಿಕೆ ಕಾರ್ಯ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಮೊನ್ನೆ ಅಷ್ಟೇ ಮಾಧ್ಯಮಗಳೊಂದಿಗೆ ಮಾತನಾಡಿದದ್ದ ಅವರು, ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಸೇರಿ ಎಲ್ಲಾ ಕಡೆ ರಾಜಕಾರಣ ಕಲುಷಿತಗೊಂಡಿದೆ. ನಾನು ಜೆಡಿಎಸ್‌ನಿಂದ ಗೆದ್ದಿದ್ದೇನೆ ಅದರಲ್ಲೇ ಇದ್ದೇನೆ, ಈಗ ಜೆಡಿಎಸ್‌ನಲ್ಲಿ ಇದ್ದೇನೆ ಮುಂದೆಯೂ ಜೆಡಿಎಸ್‌ನಲ್ಲಿ ಉಳಿದರು ಅಚ್ಚರಿಯಿಲ್ಲ ಎಂದು ಹೇಳಿದ್ದರು.
ಜಿಟಿಡಿ ಹೇಳಿಕೆ ಬಳಿಕ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಗ್ರಾಮ ಪಂಚಾಯಿತಿ ಚುನಾವಣೆ ಉಸ್ತುವಾರಿ ಕೊಡಲಾಗುವುದು ಎಂದು ಹೇಳಿದ್ದರು.
ಜೆಡಿಎಸ್ ನಾಯಕರೊಂದಿಗೆ ಮುನಿಸಿಕೊಂಡ ಬಳಿಕ ಬಿಜೆಪಿ ನಾಯಕರ ಜೊತೆ ಆತ್ಮೀಯರಾಗಿದ್ದರು. ತದನಂತ ಡಿಕೆ ಶಿವಕುಮಾರ್ ಅವರನ್ನ ಸಹ ಭೇಟಿ ಮಾಡಿದ್ದು ರಾಜ್ಯ ರಾಜಕಾರಣದಲ್ಲಿ ಸಂಚನ ಮೂಡಿಸಿದ್ದರು.
ನಿಖಿಲ್ ಭೇಟಿ ಬಗ್ಗೆ ಮತನಾಡಿರುವ ಜಿ.ಟಿ.ದೇವೇಗೌಡರು ನಮ್ಮ ಪಕ್ಷದಲ್ಲೇ ಇದ್ದಾರೆ.. ನಮ್ಮ ಪಕ್ಷದಲ್ಲೇ ಮುಂದುವರೆಯುತ್ತಾರೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ತಿಳಿಸಿದ್ದಾರೆ.