ನವದೆಹಲಿ( ಜ. 20) ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದೆ. ಬಿಎಸ್ ವೈ ಸಂಪುಟಕ್ಕೆ ಏಳು ಜನ ಸೇರ್ಪಡೆಯಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆ ರಾಜಕೀಯ ಬಿಸಿ ವೇಳೆ ಶಾಸಕ ಎಂಪಿ ರೇಣುಕಾಚಾರ್ಯ ದೆಹಲಿಗೆ ಹಾರಿ ವರಿಷ್ಠರನ್ನು ಭೇಟಿ ಮಾಡಿದ್ದರು.... ವರಿಷ್ಠರಮನ್ನು ರೇಣುಕಾಚಾರ್ಯ ಭೇಟಿ ಮಾಡಿ ಬಂದ ನಂತರ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದರು. ಅಮಿತ್ ಶಾ ಬಂದ ನಂತರ ಅಸಮಾಧಾನ ಎಲ್ಲವೂ ಥಂಡಾ ಆಗಿತ್ತು. ರೇಣುಕಾಚಾರ್ಯ ಸುಗ್ಗಿ ಹಬ್ಬದಲ್ಲಿ ಭಾಗವಹಿಸಿದ್ದರು. ರೇಣುಕಾಚಾರ್ಯ ಇದೀಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರನ್ನು ಭೇಟಿ ಮಾಡಿದ್ದಾರೆ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ರೇಣುಕಾಚಾರ್ಯ ಭೇಟಿ ಮಾಡಿದ್ದಾರೆ. ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. MLA MP Renukacharya meets Karnataka BJP Incharge Arun singh Newdelhi ಸಿಟಿ ರವಿ ಮತ್ತು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿದ ರೇಣುಕಾಚಾರ್ಯ