ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಿದ್ದಂತೆಯೇ ಸೋಮಶೇಖರ್ ಮಹತ್ವದ ಕಾರ್ಯ

First Published | Apr 22, 2020, 7:16 PM IST

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಬೈ ಎಲೆಕ್ಷನ್‌ನಲ್ಲಿ ಗೆಲುವು ಸಾಧಿಸಿರುವ ಯಶವಂತಪುರದ ಕ್ಷೇತ್ರದ ಎಸ್‌.ಟಿ.ಸೋಮಶೇಖರ್ ಅವರು ಬಿಎಸ್‌ವೈ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದಾರೆ. ಅಲ್ಲದೇ ಮೊನ್ನೇ ಅಷ್ಟೇ ಮೈಸೂರು ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸೋಮಶೇಖರ್ ಅವರಿಗೆ ನೀಡಲಾಗಿದೆ. ಇದರ ಬೆನ್ನಲ್ಲೇ ಮೈಸೂರಿನಲ್ಲಿ ಮಹತ್ವದ ಕಾರ್ಯವೊಂದನ್ನು ಮಾಡಿ ಮಾದರಿಯಾಗಿದ್ದಾರೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಿದ್ದಂತೆಯೇ ಎಸ್‌ಟಿ ಸೋಮಶೇಖರ್ ಅವರು ಮೊದಲ ಬಾರಿಗೆ ಮೈಸೂರು ಮೃಗಾಲಯಕ್ಕೆ ನೀಡಿದರು.
ಮೈಸೂರು ಮೃಗಾಲಯದಲ್ಲಿರುವ ಚಾಮುಂಡಿ ಎಂಬ 5 ವರ್ಷದ ಹೆಣ್ಣಾನೆಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ದತ್ತು ಪಡೆದರು.
Tap to resize

ಚಾಮುಂಡಿ ನಿರ್ವಹಣೆಗೆ 1 ಲಕ್ಷ 75 ಸಾವಿರ ರೂಪಾಯಿ ವೈಯುಕ್ತಿಕ ನೆರವನ್ನು ನೀಡುವ ಮೂಲಕ 1 ವರ್ಷಕ್ಕೆ ದತ್ತು ಪಡೆದರು.
ಹಾಗೇ16 ಹುಲಿಗಳ ಒಂದು ದಿನದ ಮಾಂಸಾಹಾರ ಖರ್ಚಾದ 25 ಸಾವಿರ ರೂ. ನೆರವು
ಪ್ರಾಣಿ-ಪಕ್ಷಿಗಳಿಗೆ ಕೊರೋನಾ ಹಿನ್ನೆಲೆಯಲ್ಲಿ ಕೈಗೊಡಿರುವ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಆಹಾರ ಕುಡಿಯುವ ನೀರು ಸ್ವಚ್ಛತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಅಲ್ಲದೇಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಿದ್ದಂತೆಯೇ ಕೊರೋನಾ ವೈರಸ್‌ ಮಹತ್ವದ ಸಭೆ ನಡೆಸಿದರು
ಜಿಲ್ಲಾ ಉಸ್ತುವಾರಿಯಾಗುತ್ತಿದ್ದಂತೆಯೇ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು

Latest Videos

click me!