ಬಿಜೆಪಿ ಹೈಕಮಾಂಡ್ ವಹಿಸಿದ ಮಹತ್ವದ ಜವಾಬ್ದಾರಿ ಹೊತ್ತು ಅಖಾಡಕ್ಕಿಳಿದ ಸಚಿವ ಸುಧಾಕರ್..!

First Published Nov 18, 2020, 9:20 PM IST

ಕಾಂಗ್ರೆಸ್ ತೊರೆದು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದ ಡಾ.ಕೆ.ಸುಧಾಕರ್, ಉಪ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಅವರು 2020ರ ಫೆಬ್ರವರಿಯಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಒಂದು ವರ್ಷದಲ್ಲಿಯೇ ಅವರಿಗೆ ಪಕ್ಷದ ಸಂಘಟನೆಯಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಹೈಕಮಾಂಡ್ ವಹಿಸಿದ ಜವಾಬ್ದಾರಿಯನ್ನು ಹೊತ್ತು ಸುಧಾಕರ್ ಅವರು ಅಖಾಡಕ್ಕಿಳಿದಿದ್ದಾರೆ.

ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್ಎಂಸಿ) ಚುನಾವಣೆಗೆ ಸಹ-ಉಸ್ತುವಾರಿಯಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಇಂದು ಹೈದರಾಬಾದಿಗೆ ಭೇಟಿ ನೀಡಿ ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಶ್ರೀ ಭೂಪೇಂದ್ರ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡದರು
undefined
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆಯ ಸಹ ಉಸ್ತುವಾರಿಯಾಗಿ ಬಿಜೆಪಿ ಪಕ್ಷದಿಂದ ನೇಮಕಗೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ನಾಲ್ಕು ವಿಧಾನಸಭಾ ಕ್ಷೇತ್ರಗಳ ಹೊಣೆಯನ್ನು ವಹಿಸಲಾಗಿದೆ
undefined
ಪಾಲಿಕೆ ಚುನಾವಣೆಯ ಸಹ-ಉಸ್ತುವಾರಿ ಹೊತ್ತಿರುವ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಮಲ್ಕಾಗಿರಿ, ಖುತ್ಬುಲ್ಲಾಪುರ್, ಕುಕ್ಕಟ್ಪಲ್ಲಿ ಹಾಗೂ ಉಪ್ಪಳ್ ಕ್ಷೇತ್ರಗಳ ಹೊಣೆಯನ್ನು ವಹಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಸಚಿವ ಡಾ.ಕೆ.ಸುಧಾಕರ್, ಇಂದು ಪಕ್ಷದ ಪ್ರಮುಖರೊಂದಿಗೆ ಸಭೆಯಲ್ಲಿ ಪಾಲ್ಗೊಂಡು, ಚುನಾವಣಾ ಕಾರ್ಯತಂತ್ರದ ಕುರಿತು ಸುದೀರ್ಘ ಚರ್ಚೆ ನಡೆಸಿದರು.
undefined
ಹೈದರಾಬಾದ್ ನ ರಾಜ್ಯ ಬಿಜೆಪಿ ಕಚೇರಿಗೆ ತೆರಳಿದ ಸಚಿವರು, ಪಕ್ಷದ ಪ್ರಮುಖರೊಂದಿಗೆ ಸಭೆಯಲ್ಲಿ ಭಾಗವಹಿಸಿ ಚರ್ಚೆ ಮಾಡಿದರು.
undefined
ಇದೇ ವೇಳೆ ಸಚಿವ ಡಾ.ಕೆ.ಸುಧಾಕರ್ ಅವರು ತೆಲಂಗಾಣ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಚುನಾವಣಾ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಿದರು.
undefined
ಚುನಾವಣೆಗೆ ಸಹ-ಉಸ್ತುವಾರಿಯಾಗಿ ನೇಮಕ ಮೊದಲ ಬಾರಿಗೆ ಸಭೆಯಲ್ಲಿ ಪಾಲ್ಗೊಂಡ ಸುಧಾಕರ್ ಅವರಿಗೆ ಸನ್ಮಾನಿಸಲಾಯ್ತು
undefined
click me!